ಬೆಂಗಳೂರು : ರೇಣುಕಾಸ್ವಾಮಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸದ್ಯ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ಅವರನ್ನು ಬೇಕು ಅಂತಲೇ ಕೇಸ್ನಲ್ಲಿ ಸಿಲುಕಿಸುವ ಹಾಗೂ ದರ್ಶನ್ ವಿರುದ್ಧ ಸಾಕ್ಷ್ಯಾಗಳನ್ನು ಸೃಷ್ಟಿಸಲಾಗಿದೆ ಎಂದು ದರ್ಶನ್ ಪರ ಹಿರಿಯ ವಕೀಲರಾದ ಸಿ.ವಿ.ನಾಗೇಶ್ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ಪ್ರಬಲವಾಗಿ ವಾದ ಮಂಡಿಸಿರುವ ನಾಗೇಶ್ ಅವರು, ಪೊಲೀಸರ ತನಿಖೆ ಲೋಪದೋಷಗಳನ್ನು ಉಲ್ಲೇಖಿಸಿದ್ದಾರೆ.ಕೃತ್ಯ ನಡೆದ ಪಟ್ಟಣಗೆರೆ ಶೆಡ್ ಜಾಗದ ಸಿಸಿಟಿವಿ ವಿಡಿಯೋ ನಗರದಿಂದ ಹೊರಗಿದ್ದ ಪಿಎಸ್ಐಗೆ ಹೋಗಿತ್ತು.
ಜೂ.9ರಂದು ಆರೋಪಿಗಳೇ ಪಿಎಸ್ಐ ವಿನಯ್ಗೆ ವಿಡಿಯೋ ಕಳುಹಿಸಿದ್ದಾರೆ. ಮಾಹಿತಿ ಇದ್ದರೂ ಪೊಲೀಸರು ನಟ ದರ್ಶನ್ ಹೇಳಿಕೆ ದಾಖಲಿಸುವ ತನಕ ಸುಮ್ಮನಾಗಿದ್ದರು. ಪ್ರಕರಣದಲ್ಲಿ ದರ್ಶನ್ ಸಿಲುಕಿಸಲು ಪಕ್ಕಾ ಪ್ಲ್ಯಾನ್ ಇತ್ತು ಎಂದಿರುವ ವಕೀಲರು, ರೇಣುಕಾಸ್ವಾಮಿ ವಿಡಿಯೋ ಆರೋಪಿ ವಿನಯ್ ಮೊಬೈಲ್ನಲ್ಲಿದ್ದರೂ ಸೀಜ್ ಯಾಕೆ ಮಾಡಲಿಲ್ಲ. ಮೊಬೈಲ್ FSLಗೆ ಕಳುಹಿಸದೇ ನಿಯಮ ಉಲ್ಲಂಘಿಸಲಾಗಿದೆ.
ಫೋನ್ ಚಾಟ್, ವಿಡಿಯೋ ಡಿಲೀಟ್ ಯಾರು ಮಾಡಿಸಿದ್ದಾರೆ ಎಂಬ ಪ್ರಶ್ನೆಗಳನ್ನು ದರ್ಶನ್ ಪರ ವಕೀಲರು ಎತ್ತಿದ್ದಾರೆ. ಹೀಗಾಗಿ ಕೇಸ್ಗೆ ಫೋನ್ ಚಾಟ್ ವಿಡಿಯೋ ಡಿಲೀಟ್ ಮಾಡಿರುವ ಅಂಶ ಮತ್ತೆ ಟ್ವಿಸ್ಟ್ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.