• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, July 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪೊಲೀಸ್ ಇಲಾಖೆಯಲ್ಲಿ 7925 ಹುದ್ದೆಗಳ ನೇಮಕಾತಿ : ವಿವಿಧ ಹಂತಗಳಲ್ಲಿ ಪ್ರಗತಿ-ಗೃಹ ಸಚಿವ ಪ್ರಿಯಾಂಕ್ ಖರ್ಗೆ..

ಸಿವಿಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : ಗೃಹ ಸಚಿವ ಖರ್ಗೆ ಮಾಹಿತಿ..

ಪ್ರತಿಧ್ವನಿ by ಪ್ರತಿಧ್ವನಿ
July 2, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
Home Minister Priyank Kharge

Home Minister Priyank Kharge

Share on WhatsAppShare on FacebookShare on Telegram

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯನ್ನು ಬಲಪಡಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ 2026-27ನೇ ಸಾಲಿನಲ್ಲಿ ಒಟ್ಟು 7,925 ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ.ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಈ ನೇಮಕಾತಿಗಳನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದ್ದು, ಹುದ್ದೆಗಳ ಪ್ರಸ್ತುತ ಸ್ಥಿತಿಗತಿ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ.

ADVERTISEMENT
Bengaluru Stone Quarry Tragedy : ಅಮಾಯಕರ ಜೀವಕ್ಕೆ ಬೆಲೆ ಇಲ್ಲದಾಯಿತೆ..? ಯಾರು ಹೊಣೆ..? #pratidhvani

ಹುದ್ದೆಗಳ ವಿವರ ಹಾಗೂ ಪ್ರಸ್ತುತ ಸ್ಥಿತಿ

1. ಡಿಟೆಕ್ಟಿವ್ ಸಬ್-ಇನ್ಸ್‌ಪೆಕ್ಟರ್*: ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ (ಕೆಕೆ): 05, ಉಳಿದ ಭಾಗ (ಎನ್.ಕೆ.ಕೆ): 15; ಒಟ್ಟು: 2̧0 ಪ್ರಸ್ತುತ ಸ್ಥಿತಿ: ಅಧಿಸೂಚನೆಗಳು ಸಂಪೂರ್ಣವಾಗಿ ಸಿದ್ಧವಾಗಿದ್ದು, ಶೀಘ್ರದಲ್ಲೇ ಕೆಇಎ ವತಿಯಿಂದ ಅಧಿಕೃತವಾಗಿ ಪ್ರಕಟಿಸಲಾಗುವುದು.

2. ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್: ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ: 179; ಉಳಿದ ಭಾಗ: 1421; | ಒಟ್ಟು: 1600; ಪ್ರಸ್ತುತ ಸ್ಥಿತಿ: ಕೆಇಎ ವೆಬ್‌ಸೈಟ್‌ನಲ್ಲಿ ಈಗಾಗಲೇ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು 22.06.2026 ರಿಂದ ಆರಂಭಗೊಂಡಿದ್ದು 24.07.2026 ರವರೆಗೆ ಮುಕ್ತವಾಗಲಿದೆ. 06.09.2026ರಂದು ಲಿಖಿತ ಪರೀಕ್ಷೆ ನಡೆಯಲಿದೆ.

3. ಪೊಲೀಸ್ ಕಾನ್ಸ್ಟೇಬಲ್‌ : (ಸಿವಿಲ್) ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ: 596; ಉಳಿದ ಭಾಗ: 3395, ಒಟ್ಟು: 3991; ಪ್ರಸ್ತುತ ಸ್ಥಿತಿ: ಕೆಇಎ ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಪ್ರಕಟಗೊಂಡಿದ್ದು, ಅರ್ಜಿ ಸಲ್ಲಿಕೆ ಅವಧಿ 08.06.2026 ರಿಂದ ಆರಂಭಗೊಂಡಿದ್ದು 03.07.2026 ಕೊನೆಯ ದಿನವಾಗಿದೆ. ಈ ಹುದ್ದೆಗಳಿಗೆ 02.08.2026 ರಂದು ಲಿಖಿತ ಪರೀಕ್ಷೆ ನಿಗದಿಗೊಂಡಿದೆ.

ಇದನ್ನೂ ಓದಿ : ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

4. ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ : (CAR): ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ : 334; ಉಳಿದ ಭಾಗ: 1455, ಒಟ್ಟು: 1789; ಪ್ರಸ್ತುತ ಸ್ಥಿತಿ: ಅಧಿಸೂಚನೆ ಸಿದ್ಧವಿದ್ದು, ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.

5. ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ : (civil): ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ: 161, ಉಳಿದ ಭಾಗ: 00, ಒಟ್ಟು: 161, ಪ್ರಸ್ತುತ ಸ್ಥಿತಿ: ಅಧಿಸೂಚನೆ ಸಿದ್ಧವಿದ್ದು, ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.

6. ಪೊಲೀಸ್ ಕಾನ್ಸ್ಟೇಬಲ್, ಹುದ್ದೆಗಳ ಸಂಖ್ಯೆ: ಕಲ್ಯಾಣ ಕರ್ನಾಟಕ: 364;| ಉಳಿದ ಭಾಗ: 00; ಒಟ್ಟು: 364, ಪ್ರಸ್ತುತ ಸ್ಥಿತಿ: ಅಧಿಸೂಚನೆ ಸಿದ್ಧವಿದ್ದು, ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.

ಒಟ್ಟಾರೆ ಹುದ್ದೆಗಳ ಸಂಕ್ಷಿಪ್ತ ಮಾಹಿತಿ:
ಕಲ್ಯಾಣ ಕರ್ನಾಟಕ ಒಟ್ಟು ಹುದ್ದೆಗಳು: 1,639
ಉಳಿದ ಭಾಗಗಳ ಒಟ್ಟು ಹುದ್ದೆಗಳು: 6,286
ಒಟ್ಟು ಒಟ್ಟಾರೆ ಹುದ್ದೆಗಳು: 7,925

ಈ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಒಟ್ಟು 1,639 ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಈಗಾಗಲೇ ಸಿವಿಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಕಾಲಮಿತಿಯೊಳಗೆ ಅರ್ಜಿ ಸಲ್ಲಿಸಬೆಕೆಂದು ಸಚಿವರು ರಿದ್ದಾರೆ. ಇಲಾಖೆಯ ಉಳಿದ ಹುದ್ದೆಗಳ ಅಧಿಸೂಚನೆಗಳೂ ಸಹ ಶೀಘ್ರದಲ್ಲೇ ಹೊರಬೀಳಲಿದ್ದು, ಇಡೀ ನೇಮಕಾತಿ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮುಗಿಸಲು ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

Tags: CAR PoliceCongress GovernmentDAR PoliceHome Minister Of KarnatakaKalyan KarnatakaKarnataka Governmentkarnataka police recruitmentPolice ConstablePratidhvaniPriyank KhargeRural Candidates
Previous Post

ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

Next Post

ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

Related Posts

ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!
ಕರ್ನಾಟಕ

ಪಾನ್ ಮಸಾಲಾ-ಗುಟ್ಕಾ ಸ್ಯಾಂಪಲ್‌ಗಳ ತುರ್ತು ಪರೀಕ್ಷೆ: ರಾಜ್ಯ ಸರ್ಕಾರದಿಂದ ಬಿಗಿ ಕ್ರಮ

by ಪ್ರತಿಧ್ವನಿ
July 2, 2026
0

ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪಾನ್ ಮಸಾಲಾ ಹಾಗೂ ಗುಟ್ಕಾ ಉತ್ಪನ್ನಗಳ ವಿರುದ್ಧ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗೆ ಕೆಲವು ಉತ್ಪನ್ನಗಳಲ್ಲಿ ಮಾದಕ ದ್ರವ್ಯಗಳನ್ನು ಮಿಶ್ರಣ...

Read moreDetails
ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

July 2, 2026
ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

July 2, 2026
ಗೋಲ್ಡನ್ ಸ್ಟಾರ್ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್: ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್

ಗೋಲ್ಡನ್ ಸ್ಟಾರ್ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್: ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್

July 2, 2026
Karnataka SIR ಅಕ್ರಮ: ರಾಮನಗರದ ಕಲ್ಯಾಣ ಮಂಟಪದಲ್ಲೇ ಮತದಾರರ ಪಟ್ಟಿ ಪರಿಷ್ಕರಣೆ

Karnataka SIR ಅಕ್ರಮ: ರಾಮನಗರದ ಕಲ್ಯಾಣ ಮಂಟಪದಲ್ಲೇ ಮತದಾರರ ಪಟ್ಟಿ ಪರಿಷ್ಕರಣೆ

July 2, 2026
Next Post
ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada