• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, July 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

ಪ್ರತಿಧ್ವನಿ by ಪ್ರತಿಧ್ವನಿ
July 2, 2026
in Top Story, ಕರ್ನಾಟಕ, ರಾಜಕೀಯ
0
ರಾಜಾಜಿನಗರ ಶಾಸಕ ಸುರೇಶ್ ಕುಮಾರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು
Share on WhatsAppShare on FacebookShare on Telegram

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಬಿಬಿಎಂಪಿ ವತಿಯಿಂದ ಕೈಗೊಳ್ಳಲಾದ ವಿವಿಧ ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾರೀ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿ ವಕೀಲ ಸೂರ್ಯ ಮುಕುಂದರಾಜ್ ಶಾಸಕ ಎಸ್. ಸುರೇಶ್ ಕುಮಾರ್ ಮತ್ತು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಇಂದು ಕರ್ನಾಟಕ ಲೋಕಾಯುಕ್ತಕ್ಕೆ ಅಧಿಕೃತ ದೂರು ಸಲ್ಲಿಸಿದ್ದಾರೆ.

ADVERTISEMENT
BK Hariprasad Controversial Speech: ಪ್ರಧಾನಿ ವಿರುದ್ಧ ಹರಿಪ್ರಸಾದ್ ವಿವಾದಿತ ಹೇಳಿಕೆ ವೈರಲ್!  #pratidhvani

ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ನಿಯಮಗಳನ್ನು ಗಾಳಿಗೆ ತೂರಿ, ತಮಗೆ ಬೇಕಾದ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಮೂಲಕ ಸರ್ಕಾರಿ ಖಜಾನೆಗೆ ಭಾರೀ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲೆ ಸಮೇತ ವಿವರಿಸಲಾಗಿದೆ. ಜಿಎಸ್‌ಟಿ ಹಾಗೂ ಇಲಾಖೆಯ ಇತರೆ ವೆಚ್ಚಗಳೂ ಸೇರಿದರೆ ಈ ಒಟ್ಟು ಹಗರಣದ ಮೊತ್ತ 300 ಕೋಟಿಯ ಗಡಿಯನ್ನು ಮೀರುತ್ತದೆ ಎಂದು ದೂರುದಾರರು ತಿಳಿಸಿದ್ದಾರೆ.

HD Kumaraswamy : ಡಿಕೆಶಿ ಆಡಳಿತದಲ್ಲಿ ಸಿದ್ದರಾಮಯ್ಯಗೆ ದಳಪತಿ ಬಹುಪರಾಕ್..! #pratidhvani

ದೂರಿನಲ್ಲಿರುವ ಪ್ರಮುಖ ಹಗರಣಗಳು ಮತ್ತು ಗಂಭೀರ ಆರೋಪಗಳು

ಎಲ್1 ಗುತ್ತಿಗೆದಾರರನ್ನು ತಪ್ಪಿಸಿ 14 ಕೋಟಿ ನಷ್ಟ: 2020 ರ 72.25 ಕೋಟಿ ಮೊತ್ತದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಟೆಂಡರ್‌ನಲ್ಲಿ ಅತ್ಯಂತ ಕಡಿಮೆ ಬಿಡ್ ಮಾಡಿದ್ದ ಅರ್ಹ ಗುತ್ತಿಗೆದಾರರನ್ನು ತಪ್ಪಿಸಲು ಶಾಸಕರು ಅಧಿಕಾರಿಗಳ ಮೇಲೆ ದೂರವಾಣಿ ಮೂಲಕ ಒತ್ತಡ ಹೇರಿದ್ದಾರೆ. ಬಿಬಿಎಂಪಿಯ ಟಿವಿಸಿಸಿ ಮುಖ್ಯ ಅಭಿಯಂತರರ ಕಛೇರಿ ಟಿಪ್ಪಣಿಯಲ್ಲೇ ಶಾಸಕರ ಈ ದಬ್ಬಾಳಿಕೆ ದಾಖಲಾಗಿದೆ. ತದನಂತರ ಎಲ್2 ಬಿಡ್‌ದಾರರು ನಿರಾಕರಿಸಿದಾಗ, ತಮ್ಮ ಬೇನಾಮಿಗಳಿಗೆ ಲಾಭ ಮಾಡಲು 53 ಕೋಟಿಯ ಕಾಮಗಾರಿಯನ್ನು 67 ಕೋಟಿಗೆ ಏರಿಸಿ, ಸರ್ಕಾರಕ್ಕೆ ನೇರವಾಗಿ 14 ಕೋಟಿ ನಷ್ಟ ಉಂಟುಮಾಡಲಾಗಿದೆ.

ರಸ್ತೆ ನಿಧಿಯ ದುರುಪಯೋಗ – ಉದ್ದೇಶಪೂರ್ವಕ ವಿಳಂಬ: ಭಾಷಾನಗರದ ರಸ್ತೆ ಡಾಂಬರೀಕರಣದ 60 ಲಕ್ಷ ಮೊತ್ತದ ಟೆಂಡರ್‌ನ ಹಣಕಾಸು ಬಿಡ್ ಅನ್ನು ಕಳೆದ 4 ವರ್ಷಗಳಿಂದ ತೆರೆಯದೆ ತಡೆಹಿಡಿಯಲಾಗಿದೆ. ನಾಗರಿಕರ ಮೂಲಸೌಕರ್ಯಕ್ಕೆ ಮೀಸಲಿದ್ದ ಈ ಹಣವನ್ನು ನಿಯಮಬಾಹಿರವಾಗಿ ವರ್ಗಾಯಿಸಿ ಪಾರ್ಕ್‌ಗಳ ಸೌಂದರ್ಯೀಕರಣಕ್ಕೆ ಬಳಸಲಾಗುತ್ತಿದ್ದು, ಕ್ಷೇತ್ರದ ರಸ್ತೆಗಳು ಗುಂಡಿಮಯವಾಗಲು ಶಾಸಕರ ತಪ್ಪು ನಿರ್ಧಾರಗಳೇ ಕಾರಣ ಎಂದು ಆರೋಪಿಸಲಾಗಿದೆ.

Bengaluru Stone Quarry Tragedy : ಅಮಾಯಕರ ಜೀವಕ್ಕೆ ಬೆಲೆ ಇಲ್ಲದಾಯಿತೆ..? ಯಾರು ಹೊಣೆ..? #pratidhvani

Tailor-Made ಷರತ್ತುಗಳು ಮತ್ತು ಮುಕ್ತ ಸ್ಪರ್ಧೆಗೆ ತಡೆ: ಸಿಎಂ ಇನ್ಫ್ರಾಸ್ಟ್ರಕ್ಚರ್ ಗ್ರಾಂಟ್ಸ್ ಅಡಿಯ ಪ್ಯಾಕೇಜ್‌ಗಳಲ್ಲಿ (ಒಟ್ಟು 33.97 ಕೋಟಿ) ಸಾಮಾನ್ಯ ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ ಉದ್ದೇಶಪೂರ್ವಕವಾಗಿ Tensile Roofing ಮತ್ತು FRP Covers ನಂತಹ ವಿಶೇಷ ತಾಂತ್ರಿಕ ವಸ್ತುಗಳನ್ನು ಸೇರಿಸಿ, ತಮಗೆ ಬೇಕಾದ ನಿರ್ದಿಷ್ಟ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ಸಿಗುವಂತೆ Tailor-Made ಷರತ್ತುಗಳನ್ನು ವಿಧಿಸಲಾಗಿದೆ.

ಏಕೈಕ ಬಿಡ್‌ದಾರರಿಗೆ ಮಣೆ: 2022-23 ನೇ ಸಾಲಿನ 150 ಕೋಟಿ ಮೊತ್ತದ ಬೃಹತ್ ಕಾಮಗಾರಿಗಳು ಹಾಗೂ 2025-26 ನೇ ಸಾಲಿನ 10 ಕೋಟಿ ಮತ್ತು 9 ಕೋಟಿ ವೆಚ್ಚದ ಸರಣಿ ಟೆಂಡರ್‌ಗಳಲ್ಲೂ ನಿಯಮಾವಳಿಗಳನ್ನು ಗಾಳಿಗೆ ತೂರಿ ಮುಕ್ತ ಸ್ಪರ್ಧೆಯನ್ನು ನಿರ್ಬಂಧಿಸಿ, ಏಕೈಕ ಬಿಡ್‌ದಾರರಿಗೆ ಅನುಕೂಲ ಮಾಡಿಕೊಡಲಾಗಿದೆ.

ಅಕ್ರಮ ಸೈಟ್ ವಿಸಿಟ್ ನಿಯಮ ಮತ್ತು ಯಂತ್ರೋಪಕರಣಗಳ ಷರತ್ತು ಡಿಲೀಟ್: ಟೆಂಡರ್‌ನಲ್ಲಿ ಭಾಗವಹಿಸುವ ಮುನ್ನ ಸೈಟ್ ವಿಸಿಟ್ ಮಾಡಿ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕೆಂಬ ಕಡ್ಡಾಯ ನಿಯಮ ತರಲಾಗಿದೆ. ಇದು ಯಾರು ಬಿಡ್ ಮಾಡುತ್ತಿದ್ದಾರೆ ಎಂದು ಮೊದಲೇ ತಿಳಿದು ಬೇರೆಯವರನ್ನು ಹೊರದಬ್ಬುವ ತಂತ್ರವಾಗಿದೆ. ಅಷ್ಟೇ ಅಲ್ಲದೆ, ತಮ್ಮ ಬೇನಾಮಿಗಳ ಬಳಿ ಯಂತ್ರೋಪಕರಣಗಳು ಇಲ್ಲದ ಕಾರಣ 1 ಕೋಟಿಗೂ ಹೆಚ್ಚಿನ ಟೆಂಡರ್‌ಗಳಲ್ಲಿ ಇರಬೇಕಾದ ಕಡ್ಡಾಯ ಯಂತ್ರೋಪಕರಣಗಳ ನಿಯಮವನ್ನೇ ಡಿಲೀಟ್ ಮಾಡಲಾಗಿದೆ.

Street Vendors : ಪುಟ್ ಪಾತ್ ಅಂಗಡಿ ತೆರವು,ಪ್ರತಿಧ್ವನಿ ರಿಯಾಲಿಟಿ ಚೆಕ್.!  #pratidhvani

ಟೆಂಡರ್ ಗೌಪ್ಯತೆ ಉಲ್ಲಂಘನೆ: ಡಿಫರೆನ್ಷಿಯಲ್ ಇಎಂಡಿ ವಿವರಗಳನ್ನು ತಾಂತ್ರಿಕ ಬಿಡ್ ತೆರೆದ ತಕ್ಷಣವೇ ಅಧಿಕಾರಿಗಳು ನೋಡುವಂತೆ ಮಾಡಿ, ಹಣಕಾಸು ಬಿಡ್ ತೆರೆಯುವ ಮುನ್ನವೇ ಯಾರು ಎಷ್ಟು ಕಡಿಮೆ ದರ ಹಾಕಿದ್ದಾರೆ ಎಂಬುದನ್ನು ಮೊದಲೇ ಅಂದಾಜು ಮಾಡಿ ವಂಚಿಸಲಾಗಿದೆ.

Chamundi temple: VIP ವೆಹಿಕಲ್ ಸಹ ಬೆಟ್ಟಕ್ಕೆ ಬಿಡಲ್ಲ, ಶಿಫಾರಸು ಪತ್ರಗಳಿಗೂ ಬ್ರೇಕ್ ಎಂದ ಸಚಿವ ಯತೀಂದ್ರ

ಉಲ್ಲಂಘನೆಯಾಗಿರುವ ವಿಚಾರಗಳು

ದೂರಿನ ಪ್ರಕಾರ, ಈ ವ್ಯವಸ್ಥಿತ ಅಕ್ರಮವು ಕೆಳಕಂಡ ಶಾಸನಬದ್ಧ ಕಾನೂನುಗಳ ನೇರ ಉಲ್ಲಂಘನೆಯಾಗಿದೆ:
1. KTTP Act, 1999 (ಸೆಕ್ಷನ್ 4, 9, 16): ಮುಕ್ತ ಸ್ಪರ್ಧೆಯನ್ನು ತಡೆದು ಪಾರದರ್ಶಕತೆ ಉಲ್ಲಂಘಿಸಿರುವುದು.
2. KTTP Rules, 2000 (ರೂಲ್ 17, 27): ಅರ್ಹತಾ ಮಾನದಂಡಗಳನ್ನು ದುರುದ್ದೇಶಪೂರ್ವಕವಾಗಿ ತಿರುಚಿರುವುದು.
3. ಸರ್ಕಾರದ ಅಧಿಕೃತ ಸುತ್ತೋಲೆ (FD 560 PPE 2014): Tailor-Made ಕಂಡಿಷನ್‌ಗಳನ್ನು ಹಾಕಿ ಮಾರ್ಗಸೂಚಿ ಉಲ್ಲಂಘಿಸಿರುವುದು.
4. Prevention of Corruption Act, 1988 (ಸೆಕ್ಷನ್ 7 ಮತ್ತು 13): ಸಾರ್ವಜನಿಕ ನಿಧಿಯ ದುರುಪಯೋಗ ಮತ್ತು ಕ್ರಿಮಿನಲ್ ದುರ್ನಡತೆ.
ಒಟ್ಟು 6 ಪ್ರಮುಖ ಹಗರಣಗಳ ವರ್ಷವಾರು ವಿವರ:
1. 2020: 4 ರಸ್ತೆ ಮತ್ತು ಚರಂಡಿ ಕಾಮಗಾರಿಗಳು – 72.25 ಕೋಟಿ
2. 2021-22: ಭಾಷಾನಗರ ರಸ್ತೆ ಆಸ್ಫಾಲ್ಟಿಂಗ್ ಕಾಮಗಾರಿ – 0.60 ಕೋಟಿ
3. 2022-23: ಪಾರ್ಕ್, ಮೈದಾನ, ರಸ್ತೆ ಸರಣಿ ಟೆಂಡರ್‌ಗಳು – 150.00 ಕೋಟಿ
4. 2025-26 (ಸರಣಿ-1): ರಸ್ತೆ, ಚರಂಡಿ, ಉದ್ಯಾನವನ ಅಭಿವೃದ್ಧಿ – 10.00 ಕೋಟಿ
5. 2025-26 (ಸರಣಿ-2): ಶ್ರೀರಾಮಪುರ ಮುಂತಾದ ಪ್ರದೇಶಗಳ ಕಾಮಗಾರಿಗಳು – 9.00 ಕೋಟಿ
6. 2026-27: ಸಿಎಂ ಇನ್ಫ್ರಾಸ್ಟ್ರಕ್ಚರ್ ಗ್ರಾಂಟ್ಸ್ ಪ್ಯಾಕೇಜ್‌ಗಳು – 33.97 ಕೋಟಿ

D K  Shivakumar : ಮಾಧ್ಯಮಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲು ಸಿಎಂ ಡಿಕೆಶಿ ಕರೆ.. #pratidhvani

ಸಾರ್ವಜನಿಕ ಹಿತಾಸಕ್ತಿ ಹಾಗೂ ಸಾರ್ವಜನಿಕ ಹಣದ ಸಂರಕ್ಷಣೆಯ ದೃಷ್ಟಿಯಿಂದ ಲೋಕಾಯುಕ್ತರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಶಾಸಕ ಸುರೇಶ್ ಕುಮಾರ್ ಹಾಗೂ ಅವರಿಗೆ ಸಹಕರಿಸಿದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸಮಗ್ರ ತನಿಖೆ ನಡೆಸಿ, ಕಾನೂನು ರೀತ್ಯಾ ಕಠಿಣ ಶಿಕ್ಷೆ ಜರುಗಿಸಬೇಕು ಎಂದು ದೂರುದಾರ ಸೂರ್ಯ ಮುಕುಂದರಾಜ್ ಒತ್ತಾಯಿಸಿದ್ದಾರೆ.

Previous Post

ಗೋಲ್ಡನ್ ಸ್ಟಾರ್ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್: ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್

Next Post

ಪೊಲೀಸ್ ಇಲಾಖೆಯಲ್ಲಿ 7925 ಹುದ್ದೆಗಳ ನೇಮಕಾತಿ : ವಿವಿಧ ಹಂತಗಳಲ್ಲಿ ಪ್ರಗತಿ-ಗೃಹ ಸಚಿವ ಪ್ರಿಯಾಂಕ್ ಖರ್ಗೆ..

Related Posts

ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!
ಕರ್ನಾಟಕ

ಪಾನ್ ಮಸಾಲಾ-ಗುಟ್ಕಾ ಸ್ಯಾಂಪಲ್‌ಗಳ ತುರ್ತು ಪರೀಕ್ಷೆ: ರಾಜ್ಯ ಸರ್ಕಾರದಿಂದ ಬಿಗಿ ಕ್ರಮ

by ಪ್ರತಿಧ್ವನಿ
July 2, 2026
0

ಬೆಂಗಳೂರು: ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪಾನ್ ಮಸಾಲಾ ಹಾಗೂ ಗುಟ್ಕಾ ಉತ್ಪನ್ನಗಳ ವಿರುದ್ಧ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗೆ ಕೆಲವು ಉತ್ಪನ್ನಗಳಲ್ಲಿ ಮಾದಕ ದ್ರವ್ಯಗಳನ್ನು ಮಿಶ್ರಣ...

Read moreDetails
ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

ಆಡಳಿತಕ್ಕೆ ಚುರುಕು: ಐದು ಐಎಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ!

July 2, 2026
Home Minister Priyank Kharge

ಪೊಲೀಸ್ ಇಲಾಖೆಯಲ್ಲಿ 7925 ಹುದ್ದೆಗಳ ನೇಮಕಾತಿ : ವಿವಿಧ ಹಂತಗಳಲ್ಲಿ ಪ್ರಗತಿ-ಗೃಹ ಸಚಿವ ಪ್ರಿಯಾಂಕ್ ಖರ್ಗೆ..

July 2, 2026
ಗೋಲ್ಡನ್ ಸ್ಟಾರ್ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್: ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್

ಗೋಲ್ಡನ್ ಸ್ಟಾರ್ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್: ಒಂದೇ ತಿಂಗಳಲ್ಲಿ 2 ಸಿನಿಮಾ ರಿಲೀಸ್

July 2, 2026
Karnataka SIR ಅಕ್ರಮ: ರಾಮನಗರದ ಕಲ್ಯಾಣ ಮಂಟಪದಲ್ಲೇ ಮತದಾರರ ಪಟ್ಟಿ ಪರಿಷ್ಕರಣೆ

Karnataka SIR ಅಕ್ರಮ: ರಾಮನಗರದ ಕಲ್ಯಾಣ ಮಂಟಪದಲ್ಲೇ ಮತದಾರರ ಪಟ್ಟಿ ಪರಿಷ್ಕರಣೆ

July 2, 2026
Next Post
Home Minister Priyank Kharge

ಪೊಲೀಸ್ ಇಲಾಖೆಯಲ್ಲಿ 7925 ಹುದ್ದೆಗಳ ನೇಮಕಾತಿ : ವಿವಿಧ ಹಂತಗಳಲ್ಲಿ ಪ್ರಗತಿ-ಗೃಹ ಸಚಿವ ಪ್ರಿಯಾಂಕ್ ಖರ್ಗೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada