ಹಿಂದಿನ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ದ ಹೀನಾಯವಾಗಿ ಸೋತಿದ್ದ ಆರ್ಸಿಬಿಗೆ ಇಂದು ರಾಜಸ್ಥಾನ ರಾಯಲ್ಸ್ ಎದುರಾಗಲಿದೆ.
ಸತತ ಎರಡು ಶತಕಗಳನ್ನು ಸಿಡಿಸುವ ಮೂಲಕ ಭರ್ಜರಿ ಲಯದಲ್ಲಿರುವ ಜೋಸ್ ಬಟ್ಲರ್ ಎದುರಾಳಿ ತಂಡಗಳಿಗೆ ನಡುಕವನ್ನು ಹುಟ್ಟಿಸಿದ್ದಾರೆ. ಬಟ್ಲರ್ಗೆ ಆರಂಭಿಕ ಹಂತದಲ್ಲೇ ಕಡಿವಾಣ ಹೇರುವ ದೊಡ್ಡ ಸವಾಲು ಆರ್ಸಿಬಿ ಬೌಲರ್ಗಳಿಗೆ ದೊಡ್ಡ ಸವಾಲ್.
ಇನ್ನು ರಾಜಸ್ಥಾನ ಬೌಲಿಂಗ್ ವಿಚಾರಕ್ಕೆ ಬಂದರೆ ಬೌಲರ್ಗಳು ಸಹ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಸ್ಪಿನರ್ ಯಜುವೇಂದ್ರ ಚಾಹಲ್, ಆರ್.ಅಶ್ವಿನ್, ಪ್ರಸಿದ್ಧ್ ಕೃಷ್ಣ ಮಿಂಚಿನ ಬೌಲಿಂಗ್ ನಲ್ಲಿ ಮಿಂಚುತಿದ್ದಾರೆ.
ಹಿಂದಿನ ಪಂದ್ಯದಲ್ಲಿ ಸನ್ರೈಸರ್ಸ ವಿರುದ್ದ 9 ವಿಕೆಟ್ ಸೋಲನ್ನು ಕಂಡಿದ್ದ ಆರ್ಸಿಬಿ ರನ್ರೇಟ್ ಪಾತಾಳಕ್ಕೆ ಕುಸಿದಿದ್ದು ಗೆಲುವಿನ ಜೊತೆಜೊತೆಗೆ ರನ್ರೇಟ್ ಲೆಕ್ಕಾಚಾರವು ಸಹ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸತತ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಅನುಜ್ ರಾವತ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ದೊಡ್ಡ ಚಿಂತೆಯಾಗಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ದ ಸೋಲನ್ನು ಕಂಡಿದ್ದ ರಾಜಸ್ಥಾನ ತಂಡ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ.

ಪುಟಿದೇಳುವ ವಿಶ್ವಾಸದಲ್ಲಿ RCB
ಸನ್ರೈಸರ್ ತಂಡದ ಎಡಗೈ ವೇಗಿಗಳ ಬಿಗಿ ದಾಳಿಗೆ ನಲುಗಿದ RCB ಬ್ಯಾಟಿಂಗ್ ಪಡೆ ನಲುಗಿ ನೀರಾಗಿತ್ತು. ನಾಯಕ ಫಾಫ್, ಮ್ಯಾಕ್ಸ್ವೆಲ್, ಶಾಬಾಜ್ಅಹ್ಮದ್ ನೆಲಕಚ್ಚಿದ್ದರು. ಇತ್ತೀಚಿನ ದಿನಗಳಲ್ಲಿ ಆರ್ಸಿಬಿ ಪಾಲಿನ ಬೆಳಕು ಎಂದು ತಂಡದ ಉತ್ತಮ ಫಿನಿಶರ್ ಆರ್ಸಿಬಿ ಪಾಲಿನ ಬೆಂಕಿ ಎಂದೇ ಕರೆಯಲ್ಪಡುತ್ತಿದ್ದ ದಿನೇಶ್ ಕಾರ್ತಿಕ್ ಕಳೆದ ಪಂದ್ಯ ಶೂನ್ಯ ಸುತ್ತಿದ್ದರು.
ಇತ್ತ ಬೌಲರ್ಗಳು ಸಮರ್ಥ ನಿರ್ವಹಣೆ ತೋರಬೇಕಾಗಿದ್ದರೆ ಬ್ಯಾಟ್ಸ್ಮ್ಯಾನ್ಗಳು ಸಮರ್ಥ ಸಾಥ್ ನೀಡಬೇಕಾಗಿದೆ. ಡೆತ್ ಓವರ್ಗಳಲ್ಲಿ ಹರ್ಷಲ್ ಪಟೇಲ್ ಹಾಗೂ ಜೋಶ್ ಹ್ಯಾಸಲ್ವುಡ್ ಮಿಂಚಿದ್ದರೆ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಸ್ಪಿನರ್ ವನ್ನಿಂದು ಹಸರಂಗರಿಂದ ನಿರೀಕ್ಷೀತ ಆಟ ಕಂಡು ಬರುತ್ತಿಲ್ಲ.
ಸೇಡಿನ ತವಕದಲ್ಲಿ RR
ಕಳೆದ ಮುಖಾಮುಖಿಯಲ್ಲಿ ಸ್ಪಿನರ್ ಯಜುವೇಂದ್ರ ಚಾಹಲ್ ಹಾಗೂ ಜೋಸ್ ಬಟ್ಲರ್ ಉತ್ತಮ ನಿರ್ವಹಣೆಯ ಹೊರತಾಗಿಯೂ ಆರ್ಸಿಬಿ ವಿರುದ್ದ 4 ವಿಕೆಟ್ಗಳ ವಿರೋಚಿತ ಸೋಲನ್ನು ಕಂಡಿತ್ತು. ಅರಂಭಿಕರಾಗಿ ಜೋಸ್ ಬಟ್ಲರ್ ಹಾಗೂ ದೇವದತ್ ಪಡಿಕ್ಕಲ್ ತಂಡಕ್ಕೆ ಉತ್ತಮ ಬುನಾದಿಯನ್ನೇ ಹಾಕಿಕೊಡುತ್ತಿದ್ದಾರೆ. ಆದರೆ, ಮಧ್ಯ ಕ್ರಮಾಂಕದಿಂದ ನಿರೀಕ್ಷಿತ ಪ್ರದರ್ಶನ ಕಂಡು ಬಾರದ ಹಿನ್ನೆಲೆಯಲ್ಲಿ ಆರಂಭಿಕರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ.

ತಂಡಗಳ ಸಂಯೋಜನೆ
ಆರ್ಸಿಬಿ : ಆರಂಭಿಕರಾಗಿ ಸತತ ವೈಫಲ್ಯ ಎದುರಿಸುತ್ತಿರುವ ಅನುಜ್ ರಾವತ್ ಬದಲಿಗೆ ರಜತ್ ಪಾಟೀದಾರ್ ಕಣಕ್ಕಿಳಿಯಬಹುದು. ಉಳಿದಂತೆ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ.
ರಾಜಸ್ಥಾನ : ಗೆಲುವಿನ ಹಳಿಗೇರಿರುವ ರಾಯಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.













