ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ಮಿನಿ ಹರಾಜು ಇಂದು ಅಬುಧಾಬಿಯಲ್ಲಿ ನಡೆಯುತ್ತಿದೆ. ಮಿನಿ ಹರಾಜು ಪ್ರಕ್ರಿಯೆ ಮಧ್ಯಾಹ್ನ 2:30 ಗಂಟೆಗೆ ಪ್ರಾರಂಭವಾಗಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿ, ಜಿಯೋ ಹಾಟ್‌ಸ್ಟಾರ್ ಅಥವಾ ಜಿಯೋಸಿನಿಮಾ ಆಪ್ ಮತ್ತು ವೆಬ್‌ಸೈಟ್ ಮೂಲಕ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದಾಗಿದೆ.

ಹರಾಜಿಗೆ ಒಟ್ಟು 369 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. 77 ಸ್ಥಾನಗಳನ್ನು ಪಡೆದುಕೊಳ್ಳಲು ಅವಕಾಶವಿದೆ, ಇದರಲ್ಲಿ 31 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿವೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಅತಿ ಹೆಚ್ಚು 13 ಸ್ಥಾನಗಳನ್ನು ಹೊಂದಿದ್ದರೆ, ನಂತರ ಸನ್‌ರೈಸರ್ಸ್ ಹೈದರಾಬಾದ್ ಹತ್ತು ಸ್ಥಾನಗಳನ್ನು ಹೊಂದಿದೆ. ಇಂದಿನ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಕರ್ನಾಟಕದ ಹನ್ನೊಂದು ಆಟಗಾರರು ಇರುವುದು ವಿಶೇಷವಾಗಿದೆ.

ಕಳೆದ ಐಪಿಎಲ್ನಿಂದ ಹೊರಗುಳಿದಿದ್ದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಈ ಬಾರಿ ಆಕ್ಷನ್ ಅಖಾಡಕ್ಕೆ ಬಂದಿದ್ದಾರೆ. ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟಾರ್ಗೆಟ್ ಪ್ಲೇಯರ್ ಲಿಸ್ಟ್ನಲ್ಲಿ ಕ್ಯಾಮರೂನ್ ಗ್ರೀನ್ ಟಾಪ್ ಸ್ಥಾನದಲ್ಲಿದ್ದಾರೆ. ಹೈದರಬಾದ್ ಸೇರಿದಂತೆ ಉಳಿದ ಫ್ರಾಂಚೈಸಿಗಳ ಕೂಡ ಗ್ರೀನ್ ಆಯ್ಕೆಗೆ ಮುಂದಾಗಿವೆ. ಮಿನಿ ಹರಾಜು ತಂಡಗಳಿಗಾಗಿ ಹೊಸತಾದ ಆಟಗಾರರನ್ನು ಆಯ್ಕೆ ಮಾಡುವ ಮಹತ್ವಪೂರ್ಣ ವೇದಿಕೆಯಾಗಿದ್ದು, ಯಾವ ಆಟಗಾರರಿಗೆ ದೊಡ್ಡ ಮೊತ್ತ ಸಿಗುತ್ತದೆ, ಯಾವ ತಂಡ ಯಾರನ್ನು ಆಯ್ಕೆ ಮಾಡುತ್ತಾರೆ ಎಂದು ಕ್ರಿಕೆಟ್ ಪ್ರಿಯರು ಕಾತುರರಾಗಿದ್ದಾರೆ.
*ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಬರೋಬ್ಬರಿ 25.20 ಕೋಟಿ ರೂಪಾಯಿಗೆ ಹರಾಜಾಗಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸಿದೆ.
*ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವೆಂಕಟೇಶ್ ಅಯ್ಯರ್ ಅವರನ್ನು ಬರೋಬ್ಬರಿ 7 ಕೋಟಿ ರೂಪಾಯಿಗೆ ಖರೀದಿಸಿದೆ.
*
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ವೆಂಕಟೇಶ್ ಅಯ್ಯರ್ ಖರೀದಿಸಿದ ಬೆನ್ನಲ್ಲೇ ನ್ಯೂಜಿಲೆಂಡ್ನ ಸ್ಟಾರ್ ಬೌಲರ್ ಜಾಕೋಬ್ ಡಫ್ಫಿ (Jacob Duffy)ಯನ್ನು ಖರೀದಿಸಿದೆ.












