• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

2027ರ ಏಕದಿನ ವಿಶ್ವಕಪ್; 51 ದಿನಗಳ ಕ್ರಿಕೆಟ್ ಹಬ್ಬಕ್ಕೆ ದಿನಾಂಕ ಫಿಕ್ಸ್!

ಪ್ರತಿಧ್ವನಿ by ಪ್ರತಿಧ್ವನಿ
August 17, 2026
in ಕ್ರೀಡೆ
0
2027ರ ಏಕದಿನ ವಿಶ್ವಕಪ್; 51 ದಿನಗಳ ಕ್ರಿಕೆಟ್ ಹಬ್ಬಕ್ಕೆ ದಿನಾಂಕ ಫಿಕ್ಸ್!
Share on WhatsAppShare on FacebookShare on Telegram

ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಎದುರು ನೋಡುತ್ತಿರುವ 2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಭರದ ಸಿದ್ಧತೆ ಆರಂಭವಾಗಿದೆ. ಟೂರ್ನಿಯ ವೇಳಾಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ವಿಶೇಷವೆಂದರೆ ವಿಶ್ವಕಪ್‌ 2027ರ ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯಂದೇ ಆರಂಭವಾಗುವ ಸಾಧ್ಯತೆ ಇದೆ.ಮಹಾತ್ಮ ಗಾಂಧೀಜಿಯವರಿಗೆ ದಕ್ಷಿಣ ಆಫ್ರಿಕಾದೊಂದಿಗೆ ಆಳವಾದ ನಂಟಿರುವ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯಂದು ಟೂರ್ನಿ ಆರಂಭಿಸುವ ನಿರ್ಧಾರ ವಿಶೇಷ ಮಹತ್ವ ಪಡೆದುಕೊಂಡಿದೆ. ಗಾಂಧೀಜಿ ತಮ್ಮ ಜೀವನದ 21 ವರ್ಷಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಕಳೆದಿದ್ದರು. ಹೀಗಾಗಿ ಅವರ ಸ್ಮರಣೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅಕ್ಟೋಬರ್‌ 2ರಂದು ವಿಶ್ವಕಪ್‌ ಆರಂಭಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ADVERTISEMENT

2027ರ ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿ ಆತಿಥ್ಯ ವಹಿಸಲಿವೆ. ಅಕ್ಟೋಬರ್‌ 2ರಂದು ಆರಂಭವಾಗಲಿರುವ ಟೂರ್ನಿ ನವೆಂಬರ್‌ 21ರಂದು ನಡೆಯಲಿರುವ ಫೈನಲ್‌ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. ಒಟ್ಟು 51 ದಿನಗಳ ಕಾಲ ವಿಶ್ವಕಪ್‌ ಪಂದ್ಯಗಳು ನಡೆಯಲಿವೆ.ಪಂದ್ಯಗಳು ಒಟ್ಟು 12 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ದಕ್ಷಿಣ ಆಫ್ರಿಕಾದ 8, ಜಿಂಬಾಬ್ವೆಯ 3 ಹಾಗೂ ನಮೀಬಿಯಾದ ಒಂದು ನಗರವನ್ನು ಪಂದ್ಯಗಳ ಆತಿಥ್ಯಕ್ಕೆ ಗುರುತಿಸಲಾಗಿದೆ. ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಮತ್ತು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ ಪ್ರಮುಖ ಮೈದಾನಗಳಾಗಿವೆ.

BJP protest : ಬಿಜೆಪಿ ಯುವ ಮೋರ್ಚಾ ವತಿಯಿಂದ ವಂದೇ ಮಾತರಂ ಗೀತೆಗೆ ಅಗೌರವ ತೋರಿದ ಸೋನಿಯಾ ಅವರ ವಿರುದ್ಧ ಪ್ರತಿಭಟನೆ

ಈ ಬಾರಿಯ ಏಕದಿನ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಕಣಕ್ಕಿಳಿಯಲಿವೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಲೀಗ್‌ ಹಂತದ ಪಂದ್ಯಗಳನ್ನು ನಡೆಸಲಾಗುತ್ತದೆ. ಬಳಿಕ ಸೂಪರ್‌ ಸೆವೆನ್‌ ಹಂತ, ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳು ನಡೆಯಲಿವೆ.ಆತಿಥೇಯ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನೇರ ಅರ್ಹತೆ ಪಡೆದಿವೆ. ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಕೂಡ ಅರ್ಹತೆ ಪಡೆದುಕೊಂಡಿವೆ.

ಉಳಿದ ಸ್ಥಾನಗಳಿಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದ್ದು, ವೆಸ್ಟ್‌ ಇಂಡೀಸ್‌, ಐರ್ಲೆಂಡ್‌ ಸೇರಿದಂತೆ ಹಲವು ತಂಡಗಳು ಈ ಹಂತದಲ್ಲಿ ಸೆಣಸಲಿವೆ.

H. D. Kumaraswamy : ನನ್ನ ಮನೆ ಬಾಗಿಲಿಗೆ ಬಂದು ಸಿಎಂ ಮಾಡಿದ್ರು, 14 ತಿಂಗಳಲ್ಲೇ ಖಾಲಿ ಮಾಡ್ಸಿದ್ರಲ್ಲಾ..!

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಜಯಂತಿಯಂದೇ ವಿಶ್ವಕಪ್‌ ಆರಂಭವಾಗುತ್ತಿರುವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಗಾಂಧೀಜಿಯವರ ದಕ್ಷಿಣ ಆಫ್ರಿಕಾ ನಂಟು ಮತ್ತು ಭಾರತದ ಕ್ರಿಕೆಟ್‌ ತಂಡದ ವಿಶ್ವಕಪ್‌ ಮೇಲಿನ ನಿರೀಕ್ಷೆ—ಇವೆರಡೂ ಸೇರಿ 2027ರ ಟೂರ್ನಿಗೆ ವಿಶೇಷ ಮಹತ್ವ ಸಿಗುವ ಸಾಧ್ಯತೆಯಿದೆ.

Tags: #GandhiJayanti#ICCWorldCup2027#India#Namibia#ODICricket#ODIWorldCup#TeamIndiaNews#WorldCup2027CricketCricketFanscricketnewsICCIndianCricketkarnatakanewsmahatmagandhiSouthAfricaSportsNewsTeamIndia\WorldCupZimbabwe
Previous Post

ಟ್ರಾಫಿಕ್‌ ಸಿಬ್ಬಂದಿ ಮೇಲೆ ಜೆಡಿಎಸ್‌ ನಾಯಕನ ದರ್ಪ; ಹಲ್ಲೆಗೆ ಮುಂದಾದ ಆರೋಪ

Next Post

ಅಶೋಕ ಧಾಮ ದೇವಾಲಯದಲ್ಲಿ ಬೆಳ್ಳಂಬೆಳಗ್ಗೆ 7 ಭಕ್ತರು ಸಾ**: ಆಗಿದ್ದೇನು..?

Related Posts

ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ
ಕ್ರೀಡೆ

ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

by ಪ್ರತಿಧ್ವನಿ
August 19, 2026
0

ಆಗಸ್ಟ್ 19: ಹಾಕಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಬುಧವಾರ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ನೆದರ್‌ಲ್ಯಾಂಡ್ಸ್‌ನ ಐತಿಹಾಸಿಕ ವೆಗ್ನರ್ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಬರೋಬ್ಬರಿ...

Read moreDetails
ಗಂಗೂಲಿ ಕುಟುಂಬಕ್ಕೆ ಬೆದರಿಕೆ ಹಾಕಿದವರು ಯಾರು? ಪತ್ರದ ಜಾಡು ಹಿಡಿದ ಪೊಲೀಸರು

ಗಂಗೂಲಿ ಕುಟುಂಬಕ್ಕೆ ಬೆದರಿಕೆ ಹಾಕಿದವರು ಯಾರು? ಪತ್ರದ ಜಾಡು ಹಿಡಿದ ಪೊಲೀಸರು

August 11, 2026
ಸೆಪ್ಟೆಂಬರ್‌ನಲ್ಲಿ ಭಾರತ–ಪಾಕ್‌ ಕ್ರಿಕೆಟ್‌ ಕದನ: 2 ಬಾರಿ ಮುಖಾಮುಖಿಯಾಗುವ ಸಾಧ್ಯತೆ!

ಸೆಪ್ಟೆಂಬರ್‌ನಲ್ಲಿ ಭಾರತ–ಪಾಕ್‌ ಕ್ರಿಕೆಟ್‌ ಕದನ: 2 ಬಾರಿ ಮುಖಾಮುಖಿಯಾಗುವ ಸಾಧ್ಯತೆ!

August 10, 2026
ಅಪ್ಪನ ಕನಸಿಗೆ ಚಿನ್ನದ ಕಿರೀಟ..! ಕಾಮನ್‌ವೆಲ್ತ್‌ನಲ್ಲಿ ಅಸ್ಮಿತಾ ಐತಿಹಾಸಿಕ ಸಾಧನೆ

ಅಪ್ಪನ ಕನಸಿಗೆ ಚಿನ್ನದ ಕಿರೀಟ..! ಕಾಮನ್‌ವೆಲ್ತ್‌ನಲ್ಲಿ ಅಸ್ಮಿತಾ ಐತಿಹಾಸಿಕ ಸಾಧನೆ

August 1, 2026
ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ ʼಬಣ್ಣದʼ ರಾಜಕೀಯ..!

ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ ʼಬಣ್ಣದʼ ರಾಜಕೀಯ..!

July 31, 2026
Next Post
ಅಶೋಕ ಧಾಮ ದೇವಾಲಯದಲ್ಲಿ ಬೆಳ್ಳಂಬೆಳಗ್ಗೆ 7 ಭಕ್ತರು ಸಾ**: ಆಗಿದ್ದೇನು..?

ಅಶೋಕ ಧಾಮ ದೇವಾಲಯದಲ್ಲಿ ಬೆಳ್ಳಂಬೆಳಗ್ಗೆ 7 ಭಕ್ತರು ಸಾ**: ಆಗಿದ್ದೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada