• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ʼಅದಾನಿ ಮಾಲಿಕತ್ವʼದ ಎನ್‌ಡಿಟಿವಿಗೆ ರವೀಶ್ ಕುಮಾರ್ ವಿದಾಯ.! ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಯಿತು ಮೆಚ್ಚುಗೆ

ಪ್ರತಿಧ್ವನಿ by ಪ್ರತಿಧ್ವನಿ
December 1, 2022
in ಇದೀಗ, ದೇಶ
0
ʼಅದಾನಿ ಮಾಲಿಕತ್ವʼದ ಎನ್‌ಡಿಟಿವಿಗೆ ರವೀಶ್ ಕುಮಾರ್ ವಿದಾಯ.! ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಯಿತು ಮೆಚ್ಚುಗೆ
Share on WhatsAppShare on FacebookShare on Telegram

 ಎನ್‌ಡಿಟಿವಿ ಮಾಲಕತ್ವ ಅದಾನಿ ಸಮೂಹದ ತೆಕ್ಕೆಗೆ ಬಿದ್ದ ಬೆನ್ನಲ್ಲೇ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಎನ್ಡಿಟಿವಿಗೆ ರಾಜಿನಾಮೆ ನೀಡಿದ್ದಾರೆ. ಆ ಮೂಲಕ ಅದಾನಿ ಎನ್‌ಡಿಟಿವಿಯನ್ನು ಖರೀದಿಸಿದರೆ ಏನಾಗಬಹುದು ಎಂದು ಅಂದಾಜಿಸಲಾಗಿತ್ತೋ ಅದು ನಡೆದಿದೆ.

ADVERTISEMENT

ಎನ್‌ಡಿಟಿವಿಯ ಪ್ರಮೋಟರ್ ಕಂಪನಿಯನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ಪತ್ರಕರ್ತ ರವೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ.

ಎನ್‌ಡಿಟಿವಿ ಗ್ರೂಪ್ ಅಧ್ಯಕ್ಷೆ ಸುಪರ್ಣಾ ಸಿಂಗ್ ಅವರು ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಿರುವ ಮೇಲ್‌ನಲ್ಲಿ, ರವೀಶ್ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.

‌  “ರವೀಶ್ ಅವರಂತಹ ಕೆಲವೇ ಪತ್ರಕರ್ತರು ಮಾತ್ರ ಜನರ ಮೇಲೆ ಪ್ರಭಾವ ಬೀರಲು ಸಮರ್ಥರಾಗಿದ್ದಾರೆ. ರವೀಶ್ ದಶಕಗಳಿಂದ NDTV ಯ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಕೊಡುಗೆ ಅಪಾರವಾಗಿದೆ ಮತ್ತು ಅವರ ಹೊಸ ಪ್ರಾರಂಭದಲ್ಲಿ ಅವರು ಅತ್ಯಂತ ಯಶಸ್ವಿಯಾಗುತ್ತಾರೆ ಎಂದು ನಮಗೆ ತಿಳಿದಿದೆ.” ಎಂದು ಸುಪರ್ಣಾ ಸಿಂಗ್‌ ಮೇಲ್‌ನಲ್ಲಿ ಹೇಳಿದ್ದಾರೆ.

End of an Era.

Govt will most likely not grant licenses to any future "independent" TV news channels. So this can be effectively considered as the end of TV journalism in India.#RavishKumar

— Dhruv Rathee (@dhruv_rathee) November 30, 2022

ಇದಕ್ಕೂ ಮುನ್ನ ಎನ್‌ಡಿಟಿವಿಯ ಪ್ರವರ್ತಕ ಕಂಪನಿಯಾದ ಆರ್‌ಆರ್‌ಪಿಆರ್‌ನ ನಿರ್ದೇಶಕರ ಹುದ್ದೆಗೆ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ರಾಜೀನಾಮೆ ನೀಡಿದ್ದರು.   

ರವೀಶ್‌ ಕುಮಾರ್‌ ರಾಜಿನಾಮೆಯೊಂದಿಗೆ ಎನ್‌ಡಿಟಿವಿಯ ಬಹುಮುಖ್ಯ ಭಾಗವೇ ಕಳಚಿಕೊಂಡಂತಾಗಿದೆ. ಎನ್‌ಡಿಟಿವಿ ಎಂದರೆ ರವೀಶ್‌, ರವೀಶ್‌ ಎಂದರೆ ಎನ್‌ಡಿಟಿವಿ ಅನ್ನುವಂತಹ ವಾತಾವರಣದಿಂದ ರವೀಶ್‌ ಈಗ ಹೊರ ಹೋಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ರವೀಶ್‌ ಅವರ ಮುಂದಿನ ನಡೆಯೇನು ಎನ್ನುವುದರ ಬಗ್ಗೆ ಅವರ ಅಭಿಮಾನಿಗಳು ಈಗಾಗಲೇ ಚರ್ಚೆಗಳನ್ನು ನಡೆಸುತ್ತಿದ್ದಾರೆ.

"Not all battles are fought for victory. Some are fought to tell the world that someone was there on the battlefield." – Ravish Kumar

Dear @ravishndtv sir, history will remember you. Thanks for your service. pic.twitter.com/UoKGGuUltp

— Kaushik Raj (@kaushikrj6) November 30, 2022

 ರಾಮನ್ ಮ್ಯಾಗಸೆಸೆ ಪ್ರಶಸ್ತಿ ವಿಜೇತ ಸುದ್ದಿ ನಿರೂಪಕ ಹಮ್ ಲೋಗ್, ರವೀಶ್ ಕಿ ವರದಿ, ದೇಶ್ ಕಿ ಬಾತ್ ಮತ್ತು ಪ್ರೈಮ್ ಟೈಮ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

ಸರ್ಕಾರವನ್ನು ಟೀಕಿಸಲು, ಪ್ರಶ್ನಿಸಲು ಎಂದೂ ಹಿಂಜರಿಯದಿದ್ದ ರವೀಶ್‌ ಕುಮಾರ್‌ ಅವರ ಜರ್ನಲಿಸಂ ಶೈಲಿಗಾಗಿಯೇ ಅವರಿಗೆ ಅಪಾರ ಅಭಿಮಾನಿ ವರ್ಗಗಳಿವೆ. ಕಾಸು ಕೊಟ್ಟು ಎನ್‌ಡಿಟಿವಿಯನ್ನಷ್ಟೇ ಖರೀದಿಸಬಹುದು , ರವೀಶ್‌ ಕುಮಾರ್‌ ರನ್ನಲ್ಲ ಎಂದು ಅವರ ಅಭಿಮಾನಿಗಳು ರವೀಶ್‌ ಕುಮಾರ್‌ ಅವರ ರಾಜಿನಾಮೆಯನ್ನು ಸಂಭ್ರಮಿಸುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಎನ್‌ಡಿಟಿವಿಯನ್ನು ಹೇಗಾದರೂ ಖರೀದಿಸಬೇಕೆಂದು ಹರಸಾಹಸ ಪಟ್ಟಿದ್ದ ಅದಾನಿ ಸಮೂಹವು ಕೊನೆಗೂ ತನ್ನ ಪ್ರಯತ್ನದಲ್ಲಿ ಗೆಲುವು ಸಾಧಿಸಿಕೊಂಡಿದೆ.  RRPR ಶೇ.99.9 ರಷ್ಟು ಷೇರುಗಳನ್ನು ಅದಾನಿ ಗ್ರೂಪ್‌ನ ವಿಶ್ವಪ್ರಧನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್‌ಗೆ (VCPL) ವರ್ಗಾಯಿಸಿದ ಬೆನ್ನಲ್ಲೇ ಪ್ರಣಯ್‌ ರಾಯ್‌ ಮತ್ತು ರಾಧಿಕಾ ರಾಯ್‌ ರಾಜಿನಾಮೆ ವರದಿಯಾಗಿತ್ತು. ಅದರ ನಂತರ ಅದಾನಿ ಗ್ರೂಪ್ ಎನ್‌ಡಿಟಿವಿಯಲ್ಲಿ 29.18 ಶೇಕಡಾ ಪಾಲನ್ನು ಪಡೆದುಕೊಂಡಿತು.

https://twitter.com/iamsinghharleen/status/1598021321791004672

ಇದರ ಹೊರತಾಗಿ, ಅದಾನಿ ಗ್ರೂಪ್ 26 ರಷ್ಟು ಷೇರುಗಳಿಗೆ ಮುಕ್ತ ಕೊಡುಗೆಯೊಂದಿಗೆ ಬಂದಿದ್ದು, ಅದರ ಅಡಿಯಲ್ಲಿ ಕಂಪನಿಯು ಎನ್‌ಡಿಟಿವಿಯ ಒಂದು ಕೋಟಿ 67 ಲಕ್ಷ ಷೇರುಗಳನ್ನು ಖರೀದಿಸಲು ಉಪಕ್ರಮವನ್ನು ತೆಗೆದುಕೊಂಡಿದೆ. ಓಪನ್ ಆಫರ್‌ಗೆ ಕೊನೆಯ ದಿನಾಂಕ ಡಿಸೆಂಬರ್ 5 ಆಗಿದೆ. ಈ ಮುಕ್ತ ಕೊಡುಗೆಗಾಗಿ ಅದಾನಿ ಗ್ರೂಪ್ ಪ್ರತಿ ಷೇರಿಗೆ 294 ರೂ. ನಿಗದಿ ಪಡಿಸಿದ್ದಾರೆ.

ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಕಳೆದ ಆಗಸ್ಟ್‌ನಲ್ಲಿ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತ್ತು. ಮಹೇಂದ್ರ ನಹತಾ ಎಂಬುವವರಿಗೆ ಸೇರಿದ ವಿಸಿಪಿಎಲ್ ಸಂಸ್ಥೆ 2009-10ರಲ್ಲಿ ಆರ್‌ಆರ್‌ಪಿಆರ್‌ಗೆ 404 ಕೋಟಿ ರೂ ಸಾಲ ನೀಡಿತ್ತು.  ತನ್ನ ಗಮನಕ್ಕೆ ಬಾರದೆಯೇ ವಿಸಿಪಿಎಲ್ ಸಂಸ್ಥೆಯನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡಲಾಗಿದೆ ಎಂಬುದು ಎನ್‌ಡಿಟಿವಿ ಸಂಸ್ಥಾಪಕರಾದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಆಕ್ಷೇಪ ವ್ಯಕ್ತಪಡಿಸಿದ್ದರು.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

Tagaru Palya Muhurtha: ಟಗರು ಪಲ್ಯ ಡಾಲಿ ಜೊತೆ ನಟಿ ತಾರಮ್ಮನ ಮಾತುಕತೆ! | Daali | Taramma | Pratidhvani

Next Post

ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

Related Posts

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?
Top Story

ಗ್ರಾಹಕರ ಜೇಬು ಸುಡುತ್ತಿದೆ ಇಂಧನ ದರ ಏರಿಕೆ : ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಎಷ್ಟು ಹೆಚ್ಚಳ ಗೊತ್ತಾ..?

by ಪ್ರತಿಧ್ವನಿ
May 23, 2026
0

 ಬೆಂಗಳೂರು : ದೇಶಾದ್ಯಂತ ಇಂದು ಬೆಳಂಬೆಳಿಗ್ಗೆ ವಾಹನ ಸವಾರರಿಗೆ ಮತ್ತೊಮ್ಮೆ ಪೆಟ್ರೋಲ್‌, ಡೀಸೆಲ್ ಏರಿಕೆಯ ಬಿಸಿ ತಟ್ಟಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿಯೇ ಇಂಧನ ಕಂಪನಿಗಳು ಮೂರನೇ...

Read moreDetails
ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

May 20, 2026
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
Next Post
ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada