ಸಿಸಿಬಿ (CCB) ವಶದಲ್ಲಿ ನಟಿ ಹೇಮಾ (Actress Hema) ನಾನೇನು ತಪ್ಪು ಮಾಡಿಲ್ಲ ಎಂದು ಹೈಡ್ರಾಮಾ ನಡೆಸಿದ್ದಾರೆ. ನನ್ನನು ಈಗಲೇ ಕರೆತಂದಿದ್ದಾರೆ, ನಾನು ನಿಜವಾಗಿ ಹೈದ್ರಾಬಾದ್ (Hydrabad) ನಿಂದಲೇ ವಿಡಿಯೋ ಕಳುಹಿಸಿದ್ದು , ಸಿಸಿಬಿಯವರು ನೋಡಿ ಹೇಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಹೈಡ್ರಾಮಾ ಮಾಡಿದ್ದಾರೆ.
ಅವತ್ತು ನಾನು ಬರ್ತ್ ಡೇ ಕೇಕ್ ಕಟ್ ಮಾಡಿ ಹೈದ್ರಾಬಾದ್ ಗೆ ಬಂದುಬಿಟ್ಟೆ, ನಮ್ಮ ಮನೆಯಿಂದ ಬಿರಿಯಾನಿ ವಿಡಿಯೋ ಹಾಕಿದ್ದೆ. ನಾನು ಡ್ರಗ್ಸ್ (Drugs) ತಗೋಂಡಿಲ್ಲ ಎಂದು ನಟಿ ಹೇಮಾ ಹೇಳಿದ್ದಾರೆ. ಆನೇಕಲ್ ನಲ್ಲಿ ಕೋರ್ಟ್ ಗೆ ಹಾಜರುಪಡಿಸುವ ಮೊದಲು ಹೇಮಾ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.
ಮೇ 19 ರಂದು ಹೆಬ್ಬಗೋಡಿ ಬಳಿ ರೇವ್ ಪಾರ್ಟಿ (Rev party) ನಡೆದಿದ್ದ ಪ್ರಕರಣಕ್ಕೆ ಸಂಭಂದಿಸಿ ನಟಿ ಹೇಮಾಗೆ ನೋಟೀಸ್ ನೀಡಿದ್ದ ಸಿಸಿಬಿ , ಇಂದು ಆನೇಕಲ್ ನ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್ , ಜೂನ್ 14 ರವರೆಗೆ 12 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಆನೇಕಲ್ JMFC ಕೋರ್ಟ್ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.