• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಬದಲಾವಣೆ; ಭಾರತದಲ್ಲಿ ಯಾವಾಗ ತೆರೆಗೆ ಬರಲಿದೆ?

ಪ್ರತಿಧ್ವನಿ by ಪ್ರತಿಧ್ವನಿ
August 8, 2026
in ಸಿನಿಮಾ
0
‘ರಾಮಾಯಣ’ ಸಿನಿಮಾ ಬಿಡುಗಡೆ ದಿನಾಂಕ ಬದಲಾವಣೆ; ಭಾರತದಲ್ಲಿ ಯಾವಾಗ ತೆರೆಗೆ ಬರಲಿದೆ?
Share on WhatsAppShare on FacebookShare on Telegram

ಬಾಲಿವುಡ್‌ನ ಬಹುನಿರೀಕ್ಷಿತ ಹಾಗೂ ಬಿಗ್‌ ಬಜೆಟ್‌ ಸಿನಿಮಾ ‘ರಾಮಾಯಣ’ ಈಗಾಗಲೇ ಟ್ರೇಲರ್ ಮೂಲಕ ಭಾರೀ ನಿರೀಕ್ಷೆ ಮೂಡಿಸಿದೆ. ಹಾಲಿವುಡ್‌ ಮಟ್ಟದ ತಂತ್ರಜ್ಞಾನ ಹಾಗೂ ಅದ್ಧೂರಿ VFX ಬಳಸಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಇದೇ ವೇಳೆ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.

ADVERTISEMENT

ಈ ಹಿಂದೆ ‘ರಾಮಾಯಣ’ ನವೆಂಬರ್‌ 6ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಇದೀಗ ಭಾರತದಲ್ಲಿ ಚಿತ್ರ ನವೆಂಬರ್‌ 6ರಂದು ಬಿಡುಗಡೆಯಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಕುರಿತು ಮಾಹಿತಿ ನೀಡಿದ್ದು, ಭಾರತದಲ್ಲಿ ದೀಪಾವಳಿ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತರಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

C. Joseph Vijay : ತಮಿಳುನಾಡಿನ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ.

ಮುಂಬೈನ ದಾದಾಸಾಹೇಬ್ ಫಾಲ್ಕೆ ಚಿತ್ರನಗರಿಯಲ್ಲಿ ನಡೆದ ಪ್ರೈಮ್ ಫೋಕಸ್ ಸ್ಟುಡಿಯೋಸ್‌ನ ಹಂತ-1 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಮಿತ್ ಮಲ್ಹೋತ್ರಾ, ವಿದೇಶಿ ಮಾರುಕಟ್ಟೆಯಲ್ಲಿ ನವೆಂಬರ್‌ 6ರಂದು ಚಿತ್ರ ಬಿಡುಗಡೆಯಾಗಲಿದ್ದು, ಭಾರತದಲ್ಲಿ ನವೆಂಬರ್‌ 8ರಂದು ತೆರೆಗೆ ಬರಲಿದೆ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ವಿದೇಶದಲ್ಲಿ ಎರಡು ದಿನ ಮೊದಲೇ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಭಾರತದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲೇ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ನವೆಂಬರ್‌ 8ರ ದಿನಾಂಕವನ್ನು ಆಯ್ಕೆ ಮಾಡಲಾಗಿದೆ.

Krishna Byre Gowda ಬೀದಿ ಬದಿ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದಿದ್ರಿ ಈಗೇನು ಮಾಡ್ತೀರಿ..? | JDS | Pratidhvani

ನಿರ್ಮಾಣವಾಗುತ್ತಿರುವ ‘ರಾಮಾಯಣ’ 2026ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ನಿರ್ಮಾಣ, ಪ್ರಮಾಣ ಹಾಗೂ VFXಗೆ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ.ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮ ಹಾಗೂ ಪರಶುರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಕನ್ನಡದ ನಟ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರವಿ ದುಬೆ, ಲಾರಾ ದತ್ತಾ, ಅರುಣ್ ಗೋವಿಲ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ರಾಘವ್ ಜುಯಲ್, ಶೀಬಾ ಚಡ್ಡಾ ಹಾಗೂ ಇಂದಿರಾ ಕೃಷ್ಣನ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜಟಾಯು ಪಾತ್ರಕ್ಕೆ ಅನುಪಮ್ ಖೇರ್ ಧ್ವನಿ ನೀಡಿದ್ದಾರೆ.

Lakshmana Savadi on MLA's Upset: ಕಾಂಗ್ರೆಸ್ ಶಾಸಕರ ಅಸಮಾಧಾನದ ಬಗ್ಗೆ ಸಚಿವ ಲಕ್ಷ್ಮಣ ಸವದಿ ರಿಯಾಕ್ಷನ್

ಇನ್ನು ಚಿತ್ರದ ಸಂಗೀತದ ಜವಾಬ್ದಾರಿಯನ್ನು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಒಟ್ಟಾಗಿ ವಹಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ಖ್ಯಾತ ಸಂಗೀತ ನಿರ್ದೇಶಕರು ಒಂದೇ ಸಿನಿಮಾಕ್ಕಾಗಿ ಜೊತೆಯಾಗಿ ಕೆಲಸ ಮಾಡುತ್ತಿರುವುದು ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.

Tags: AR RahmanBig Budget Moviebollywood moviesbollywood newsHans ZimmerIndian Cinemakannada cinemaMovie NewsNamit MalhotraRamayanaRamayana 2026Ramayana MovieRamayana Movie ReleaseRamayana Movie UpdateRamayana Release DateRamayana TrailerRanbir KapoorRanbir Kapoor Ramsai pallaviSunny DeolYashYash Ravana
Previous Post

ಬೆಂಗಳೂರು ಟ್ರಾಫಿಕ್‌ಗೆ AI ಅಸ್ತ್ರ; ಜಾಮ್ ನಿಯಂತ್ರಣಕ್ಕೆ ಪೊಲೀಸರ ಹೊಸ ಮಾಸ್ಟರ್ ಪ್ಲ್ಯಾನ್

Next Post

*ಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ*

Related Posts

ಗೃಹ ಜ್ಯೋತಿ ಪರಿಷ್ಕರಣೆ: ಫಲಾನುಭವಿಗಳ ಆತಂಕಕ್ಕೆ ಬ್ರೇಕ್‌ ಹಾಕಿದ ಸಚಿವ ಕೆ.ಜೆ ಜಾರ್ಜ್
Top Story

ಕೆಪಿಟಿಸಿಎಲ್‌ನ ‘ಡಾರ್ಕ್ ಫೈಬರ್’ ವಾಣಿಜ್ಯ ಬಳಕೆಗೆ: ₹130 ಕೋಟಿ ಹೆಚ್ಚುವರಿ ಆದಾಯದ ನಿರೀಕ್ಷೆ

by ಪ್ರತಿಧ್ವನಿ
August 8, 2026
0

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ತನ್ನ ವ್ಯಾಪ್ತಿಯಲ್ಲಿರುವ 6,119 ಕಿಲೋಮೀಟರ್ ಉದ್ದದ ಆಪ್ಟಿಕಲ್ ಗ್ರೌಂಡ್ ವೈರ್ (OPGW) ಫೈಬರ್ ಜಾಲದಲ್ಲಿನ ಹೆಚ್ಚುವರಿ 'ಡಾರ್ಕ್...

Read moreDetails
ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

August 7, 2026
ಜಾನಪದ ಹಾಡಿಗೆ ರ್‍ಯಾಪ್‌ ಟಚ್‌: ಸಿಟಿಲೈಟ್ಸ್‌ ಸಿನಿಮಾದ ಹೊಸ ಸಾಂಗ್‌ ರಿಲೀಸ್‌

ಜಾನಪದ ಹಾಡಿಗೆ ರ್‍ಯಾಪ್‌ ಟಚ್‌: ಸಿಟಿಲೈಟ್ಸ್‌ ಸಿನಿಮಾದ ಹೊಸ ಸಾಂಗ್‌ ರಿಲೀಸ್‌

August 7, 2026
Boss Movie Review: ಕೇಳಿದ ಕಥೆಯನ್ನು ನೋಡುವ ಮಜಾನೇ ಬೇರೆ!

Boss Movie Review: ಕೇಳಿದ ಕಥೆಯನ್ನು ನೋಡುವ ಮಜಾನೇ ಬೇರೆ!

August 7, 2026
ದರ್ಶನ್‌ಗೆ ಮತ್ತೆ ಸಂಕಷ್ಟ: ಇನ್ನಿಬ್ಬರು ಆರೋಪಿಗಳಿಂದ ಮಾಫಿ ಸಾಕ್ಷಿಗೆ ಅರ್ಜಿ

ದರ್ಶನ್‌ಗೆ ಮತ್ತೆ ಸಂಕಷ್ಟ: ಇನ್ನಿಬ್ಬರು ಆರೋಪಿಗಳಿಂದ ಮಾಫಿ ಸಾಕ್ಷಿಗೆ ಅರ್ಜಿ

August 7, 2026
Next Post
*ಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ*

*ಕ್ಲೀನ್ ಅಪ್ ಬೆಂಗಳೂರಿಗೆ ಆಂದೋಲನದ ರೂಪ ನೀಡಿದ ಬೆಸ್ಕಾಂ*

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada