• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Boss Movie Review: ಕೇಳಿದ ಕಥೆಯನ್ನು ನೋಡುವ ಮಜಾನೇ ಬೇರೆ!

ಚಿತ್ರ ವಿಮರ್ಶೆ: ವಿಜಯ್‌ ಭರಮಸಾಗರ

ಪ್ರತಿಧ್ವನಿ by ಪ್ರತಿಧ್ವನಿ
August 7, 2026
in Top Story, ವಿಶೇಷ, ಸಿನಿಮಾ
0
Boss Movie Review: ಕೇಳಿದ ಕಥೆಯನ್ನು ನೋಡುವ ಮಜಾನೇ ಬೇರೆ!
Share on WhatsAppShare on FacebookShare on Telegram
ADVERTISEMENT

ಚಿತ್ರ: ಬಾಸ್‌
ನಿರ್ದೇಶನ: ವಿ.ಲವ
ನಿರ್ಮಾಣ: ಸಿರಿ ಪ್ರೊಡಕ್ಷನ್
ತಾರಾಗಣ: ತನುಷ್‌ ಶಿವಣ್ಣ, ವಂದಿತಾ ಗೌಡ, ಪಾಯಲ್‌ ಚೆಂಗಪ್ಪ, ಸಂದೀಪ್ ನಿನಾಸಂ, ಭಾವನಾ ಸತ್ಯ ಇತರರು.

“ನೋಡು ನಾನ್ ಸಾಯೋವರೆಗೂ ನಿನ್ನ‌‌ನ್ನು ಮಗು ಥರ ನೋಡ್ಕೋತೀನಿ. ಹೇಗಾದರೂ ಮಾಡಿ ಬಚಾವ್ ಮಾಡು…”
ಆಕೆ ತನ್ನ ಪ್ರಿಯಕರನ ಮುಂದೆ ಗೋಳಾಡುತ್ತಲೇ ಈ ಡೈಲಾಗ್‌ ಹೇಳುವ ಹೊತ್ತಿಗೆ, ಅಲ್ಲೊಂದು ಮರ್ಡರ್‌ ಆಗಿರುತ್ತೆ. ಆ ಕೊಲೆಯ ಹಿಂದೆ ಅವಳಿಗೆ ಹಾಗು ಅವನಿಗೆ ಗೊತ್ತಿರುವ ಗ್ಯಾಂಗ್‌ ಕೈವಾಡ ಇರುತ್ತೆ. ಒಬ್ಬ ಜನಪ್ರಿಯ ವ್ಯಕ್ತಿಯ ಪ್ರೇಯಸಿಗೆ ಅಸಹ್ಯ ಮೆಸೇಜ್‌ ಮಾಡಿದ ಅನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಆ ಗ್ಯಾಂಗ್ ಕಿಡ್ನಾಪ್‌ ಮಾಡಿ ಥಳಿಸಿ, ಸಾಯಿಸಿದ ಘಟನೆ ಕುರಿತಾದ ಸಿನಿಮಾ ಕಥೆ ಇದು.

Boss | Honest Review By | Vijay Bharamasagara | Thanush | V lava | Vanditha Gowda |payalchengappa

ಇಷ್ಟು ಹೇಳಿದ ಮೇಲೆ ಕಥೆ ಯಾವುದು ಅಂತ ಸುಲಭವಾಗಿ ಅರ್ಥವಾದೀತು. ಯೆಸ್‌, ಇದು ನಟ ದರ್ಶನ್‌ ಅವರು ಜೈಲಿಗೆ ಸೇರಲು ಕಾರಣವಾದ ಒಂದು ಕೊಲೆಯ ಸುತ್ತ ನಡೆದ ಸಿನಿಮಾನಾ ಅನ್ನುವ ಪ್ರಶ್ನೆಗಳು ಅನೇಕರಿಗೆ ಇದ್ದವು. ದರ್ಶನ್‌ ವಿರುದ್ಧ ಮಾಡಿರುವ ಚಿತ್ರ ಇರಬಹುದಾ? ಅದು ಹಾಗಂತೆ, ಹೀಗಂತೆ ಅನ್ನುವ ಒಂದಷ್ಟು ಪ್ರಶ್ನೆಗಳಿದ್ದವು. ಆ ಚಿತ್ರ ಹೇಗೆಲ್ಲಾ ಮೂಡಿಬಂದಿರುತ್ತೆ ಎನ್ನುವ ಕುತೂಹಲವೂ ಇತ್ತು.

ಅಂತಹ ಪ್ರಶ್ನೆಗೆ ಈ “ಬಾಸ್‌” ಉತ್ತರ ಕೊಟ್ಟಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆ ಪ್ರಕರಣದಲ್ಲಿ ದರ್ಶನ್‌ ಸಿಲುಕಿದ್ದು ಹೇಗೆ? ಅವರನ್ನು ಕಿಡ್ನಾಪ್‌ ಮಾಡಿ ಬೆಂಗಳೂರಿನವರೆಗೆ ಕರೆತಂದಿದ್ದು ಯಾರು? ಈ ಪ್ರಕರಣದ ಮೂಲ ರೂವಾರಿ ಯಾರು? ಆ ಸ್ಟಾರ್‌ ಸಿಲುಕಿದ್ದ ಹೇಗೆ? ಅನ್ನುವ ಸ್ಟೋರಿ ಎಲ್ಲರಿಗೂ ಗೊತ್ತಿದೆ. ಆದರೆ, ಅದೇ ಕಥೆಗೆ ದೃಶ್ಯ ಕಟ್ಟಿಕೊಡುವ ಪ್ರಯತ್ನ ಇಲ್ಲಿ ಸಾರ್ಥಕ. ವಿಶೇಷವೆಂದರೆ ಇಲ್ಲಿ ಪೊಲೀಸ್‌ ಇಲಾಖೆಯ ಕಾರ್ಯವೈಖರಿ! ಅಲ್ಲೂ ಒಂದಷ್ಟು ತಪ್ಪು ಒಪ್ಪುಗಳಿವೆ. ಅದನ್ನಿಲ್ಲಿ ನೀಟ್‌ ಆಗಿ ಪ್ರೆಸೆಂಟ್‌ ಮಾಡಲಾಗಿದೆ. ಇದೊಂದು ಕ್ರೈಮ್‌ ಥ್ರಿಲ್ಲರ್‌ ಸಿನಿಮಾ. ಒಂದೇ ಮಾತಲ್ಲಿ ಹೇಳುವುದಾದರೆ, ಈ ಚಿತ್ರದಲ್ಲಿ ದರ್ಶನ್‌ ಅವರ ನಿಜಗುಣವನ್ನು ಚಿತ್ರಿಸಲಾಗಿದೆ. ದರ್ಶನ್‌ ಮಾಡಿದ್ದೇನು ಅನ್ನುವುದನ್ನೂ ಇಲ್ಲಿ ಎಳೆಎಳೆಯಾಗಿ ಬಿಂಬಿಸಲಾಗಿದೆ. ಒಂದು ಹೆಣ್ಣಿನಿಂದ ಏನೆಲ್ಲಾ ಆಯ್ತು ಅನ್ನುವುದನ್ನು ದೃಶ್ಯರೂಪದಲ್ಲಿ ತೋರಿಸುವ ಪ್ರಯತ್ನ ಇಲ್ಲಿ ಸಾರ್ಥಕ.

Renukaswamy case: ಸತ್ಯ ಹೇಳ್ತೀನಿ ಕ್ಷಮಿಸಬೇಕು ಅಂತ  ಕೊರ್ಟ್ ನಲ್ಲಿ ಪ್ರದೋಷ್ ಅರ್ಜಿ | Darshan | pratidhvani

ಬಹುತೇಕ ಜನರಿಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕೊಲೆಯ ಘಟನೆ ಬಗ್ಗೆ ಗೊತ್ತು. ಅದಕ್ಕೂ ಈ ಚಿತ್ರದ ಕಥೆಗೂ ಸಾಮ್ಯತೆ ಇದೆ. ಆದರೆ, ಚಿತ್ರತಂಡ ಆರಂಭದಿಂದಲೂ ಇದು ಅದಲ್ಲ, ಅದು ಇಲ್ಲಿರಲ್ಲ ಅಂದುಕೊಂಡೇ ಸಿನಿಮಾ ಮಾಡಿತ್ತು. ಕೊನೆಗೂ ಬಾಸ್‌ ದರ್ಶನವಾಗಿದೆ. ಇಲ್ಲಿ ಕೆಲವು ಸೂಕ್ಷ್ಮ ವಿಷಯಗಳಿವೆ. ಅದನ್ನು ತೆರೆಯ ಮೇಲೆ ನೋಡಬೇಕು. ಅಷ್ಟಕ್ಕೂ ಸಿನಿಮಾದ ಹೀರೋ ಪ್ರೇಯಸಿಗೆ ವ್ಯಕ್ತಿಯೊಬ್ಬ ಮೆಸೇಜ್‌ ಕಳಿಸಿ ಅಶ್ಲೀಲವಾಗಿ ಮಾತಾಡಿದ್ದು, ಕೆಟ್ಟದ್ದಾಗಿ ವರ್ತಿಸಿದ್ದು, ಆ ವ್ಯಕ್ತಿಯನ್ನು ಹುಡುಕಿ, ಸ್ಕೆಚ್‌ ಹಾಕಿ ಕಿಡ್ನಾಪ್‌ ಮಾಡಿಕೊಂಡು ಬಂದು, ಥಳಿಸಿದ್ದು, ನಂತರ ಆತ ಆ ಹೊಡೆತಕ್ಕೆ ಸತ್ತಿದ್ದು ಎಲ್ಲವನ್ನೂ ರೋಚಕವಾಗಿ ಇಲ್ಲಿ ತೋರಿಸಲಾಗಿದೆ.

Shree Chamundeshwari Karaga Mahotsava 2026 | Gilli Nata | Kiccha Sudeep| Dboss|CMKarnataka |DARSHAN

ಇಲ್ಲಿ ಮೊದಲರ್ಧಕ್ಕಿಂತ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತೆ. ದ್ವಿತಿಯಾರ್ಧ ಮುಂದೇನಾಗುತ್ತೆ ಎಂಬ ಕುತೂಹಲಕ್ಕೆ ಕರೆದೊಯ್ಯುತ್ತೆ. ಚಿತ್ರಕಥೆ ಇನ್ನಷ್ಟು ವೇಗ ಪಡೆದುಕೊಳ್ಳಬೇಕಿತ್ತು. ಕೆಲವು ಸಣ್ಣಪುಟ್ಟ ಕಂಟಿನ್ಯುಟಿ ಮಿಸ್‌ ಆಗಿದೆಯಾದರೂ, ಸಿನಿಮಾ ನೋಡಿಸಿಕೊಂಡು ಹೋಗುತ್ತೆ. ಒಂದು ಕ್ರೈಮ್‌ ಥ್ರಿಲ್ಲರ್‌ ಕಥೆಯಲ್ಲಿ ಏನಿರಬೇಕು, ಹೇಗಿರಬೇಕು ಎಂಬ ಅರಿವು ನಿರ್ದೇಶಕರಿಗಿದೆ. ಹಾಗಾಗಿ ಬಾಸ್‌ ಒಂದು ಕುತೂಹಲದ ಸಿನಿಮಾವಾಗಿ ಮೂಡಿಬಂದಿದೆ. ಇಲ್ಲಿ ಆಕ್ಷನ್‌ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ. ಅಂತಹ ಸಂದರ್ಭವೇ ಇಲ್ಲಿಲ್ಲ. ಕಾರಣ, ಕಥೆಯಲ್ಲಿ ಒಂದಷ್ಟು ತಿರುವುಗಳಿವೆ. ಮುಖ್ಯವಾಗಿ ಇಲ್ಲಿ ಅಚ್ಚರಿ ಎನ್ನುವ ಸಂಗತಿಗಳಿವೆ. ಅದೇ ಸಿನಿಮಾದ ಹೈಲೆಟ್.‌ ಆ ಸಂಗತಿ ಏನೆಂಬ ಕುತೂಹಲವಿದ್ದರೆ ಒಮ್ಮೆ ಸಿನಿಮಾ ನೋಡಲು ಅಡ್ಡಿ ಇಲ್ಲ.

DBoss ರಚಿತಾ ತಗೊಂಡ ಧಿಡೀರ್ ನಿರ್ಧಾರ.? Rachita Ram |Ramanagara karaga Utsava|  #pratidhvani #rachitaram

ಇದು ನಾವು-ನೀವೆಲ್ಲ ಕೇಳಿದ ಕಥೆಯಾದರೂ, ಸ್ವಲ್ಪ ಬದಲಾವಣೆಗಳು ಇಲ್ಲಿವೆ. ಇನ್ನು, ಸಿನಿಮಾದ ಆರಂಭ ಕೊಂಚ ವೇಗಮಿತಿ ಕಮ್ಮಿ ಎನಿಸುತ್ತೆ. ಇಲ್ಲಿ ಸಂಗೀತ ವೇಗವನ್ನು ಎತ್ತಿ ಹಿಡಿದಿದೆ. ಕ್ಯಾಮೆರಾ ಕೈಚಳಕದಲ್ಲೂ ಬಾಸ್‌ ಅಂದ-ಚೆಂದವಿದೆ. ತನುಷ್‌ ಶಿವಣ್ಣ ಇಲ್ಲಿ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನುಕಂಪ, ಪಶ್ಚಾತ್ತಾಪ ಸಂದರ್ಭದ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ವಂದಿತಾ ಪ್ರೇಯಸಿ ಪಾತ್ರಕ್ಕೆ ಸರಿಹೊಂದಿದ್ದಾರೆ. ಪಾಯಲ್‌ ಚೆಂಗಪ್ಪ ಕೂಡ ಗಮನಸೆಳೆಯುತ್ತಾರೆ. ಸಂದೀಪ್‌ ಅಮಾಯಕನಂತಿದ್ದರೂ, ರೊಚ್ಚಿಗೇಳಿಸುವ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ಬರುವ ಪೊಲೀಸ್‌ ಅಧಿಕಾರಿ ಪಾತ್ರಗಳು ಸೈ ಎನಿಸಿಕೊಂಡರೆ, ಗ್ಯಾಂಗ್‌ನಲ್ಲಿ ಕಾಣಿಸಿಕೊಳ್ಳುವ ಪಾತ್ರಗಳು ನ್ಯಾಯ ಸಲ್ಲಿಸಿವೆ. ಮುಖ್ಯವಾಗಿ ಇಡೀ ಸಿನಿಮಾ ಥ್ರಿಲ್‌ ಎನಿಸುತ್ತೆ. ಕಾರಣ, ಮರ್ಡರ್‌ ಸ್ಟೋರಿ. ಒಟ್ಟಾರೆ ಕೇಳಿದ್ದ ಕಥೆಯನ್ನು, ನೋಡುವ ಮಜಾನೇ ಬೇರೆ.

Kavya ಎಲ್ಲಿ ಎಂದು ಗಿಲ್ಲಿನ ಕೇಳಿದ ರಾಮನಗರ ಜನರು..! |  | Ramanagara karaga Utsava | pratidhvani
Previous Post

ಬೆಂಗಳೂರು ಅಭಿವೃದ್ಧಿ ಸಚಿವರೇ ಇಲ್ನೋಡಿ..! ಖಾತೆ ಬದಲಾವಣೆಗೆ 40 ಸಾವಿರ ಲಂಚ..?

Next Post

ಸ್ಟಾಕ್ ಮಾರ್ಕೆಟ್ ವಂಚನೆ ಬಗ್ಗೆ ಪ್ರಶ್ನಿಸಿದ ಕನ್ನಡಿಗರನ್ನೇ ನಿಂದಿಸಿದ ಮಹಿಳೆ: ಮುಂದೇನಾಯ್ತು..?

Related Posts

ಕರ್ನಾಟಕ ಕೈಮಗ್ಗಕ್ಕೆ ಹೊಸ ಚೈತನ್ಯ: ನೇಕಾರರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌, ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ
Top Story

ಕರ್ನಾಟಕ ಕೈಮಗ್ಗಕ್ಕೆ ಹೊಸ ಚೈತನ್ಯ: ನೇಕಾರರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌, ರಾಜ್ಯವ್ಯಾಪಿ ಅಭಿಯಾನಕ್ಕೆ ಚಾಲನೆ

by ಪ್ರತಿಧ್ವನಿ
August 7, 2026
0

ಬೆಂಗಳೂರು, ಆಗಸ್ಟ್ 7: ಕರ್ನಾಟಕದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಿ, ನೇಕಾರರ ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಂಬರುವ...

Read moreDetails
NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ: ತಿಂಗಳುಗಳ ಕಾಲ ನಡೆದಿತ್ತು ಸಂಚು! ಸಿಬಿಐ ಆರೋಪಪಟ್ಟಿಯಲ್ಲಿ ಸ್ಫೋಟಕ ಮಾಹಿತಿ

NEET-UG 2026 ಪ್ರಶ್ನೆಪತ್ರಿಕೆ ಸೋರಿಕೆ: ತಿಂಗಳುಗಳ ಕಾಲ ನಡೆದಿತ್ತು ಸಂಚು! ಸಿಬಿಐ ಆರೋಪಪಟ್ಟಿಯಲ್ಲಿ ಸ್ಫೋಟಕ ಮಾಹಿತಿ

August 7, 2026
ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

ವಿಜಯ್–ಸಂಗೀತಾ ದಾಂಪತ್ಯಕ್ಕೆ ಹೊಸ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ

August 7, 2026
ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

ಮೈದಾನದಲ್ಲೇ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾ**

August 7, 2026
ಜಾನಪದ ಹಾಡಿಗೆ ರ್‍ಯಾಪ್‌ ಟಚ್‌: ಸಿಟಿಲೈಟ್ಸ್‌ ಸಿನಿಮಾದ ಹೊಸ ಸಾಂಗ್‌ ರಿಲೀಸ್‌

ಜಾನಪದ ಹಾಡಿಗೆ ರ್‍ಯಾಪ್‌ ಟಚ್‌: ಸಿಟಿಲೈಟ್ಸ್‌ ಸಿನಿಮಾದ ಹೊಸ ಸಾಂಗ್‌ ರಿಲೀಸ್‌

August 7, 2026
Next Post
ಸ್ಟಾಕ್ ಮಾರ್ಕೆಟ್ ವಂಚನೆ ಬಗ್ಗೆ ಪ್ರಶ್ನಿಸಿದ ಕನ್ನಡಿಗರನ್ನೇ ನಿಂದಿಸಿದ ಮಹಿಳೆ: ಮುಂದೇನಾಯ್ತು..?

ಸ್ಟಾಕ್ ಮಾರ್ಕೆಟ್ ವಂಚನೆ ಬಗ್ಗೆ ಪ್ರಶ್ನಿಸಿದ ಕನ್ನಡಿಗರನ್ನೇ ನಿಂದಿಸಿದ ಮಹಿಳೆ: ಮುಂದೇನಾಯ್ತು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada