ಬ್ರಿಟಿಷರ ಕಾಲದಲ್ಲಿ ರಾಜಪಥವನ್ನು ಕಿಂಗ್ಸ್ ವೇ ಎಂದು ಕರೆಯಲಾಗುತ್ತಿತ್ತು. ಇದೀಗ, ರಾಜ್ಪಥ್ ಮತ್ತು ಸೆಂಟ್ರಲ್ ವಿಸ್ಟಾಗೆ ಸಂಬಂಧಿಸಿದಂತೆ ಕೇಂದ್ರದ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಈಗ ರಾಜ್ಪಥ್ ಮತ್ತು ಸೆಂಟ್ರಲ್ ವಿಸ್ಟಾವನ್ನು ಮರು ನಾಮಕರಣ ಮಾಡಲು ಕೇಂದ್ರ ಸರ್ಕಾರ ತಯಾರಿ ನಡೆಸಿದೆ. ಈ ಕುರಿತಂತೆ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಸುದ್ದಿ ಸಂಸ್ಥೆ ಎಎನ್ಐ ರಾಜ್ಪಥ್ ಮತ್ತು ಸೆಂಟ್ರಲ್ ವಿಸ್ಟಾಗೆ ‘ಕರ್ತವ್ಯ ಪಥ್’ ಎಂದು ಮರು ನಾಮಕರಣ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.

ರಾಜ್ಪಥ್ ಮತ್ತು ಸೆಂಟ್ರಲ್ ವಿಸ್ಟಾಗೆ ಮರು ನಾಮಕರಣ ಮಾಡಿದ ನಂತರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯಿಂದ ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ಪ್ರದೇಶವನ್ನು ಈಗ ‘ಕರ್ತವ್ಯ ಪಥ್’ ಎಂದು ಕರೆಯಲಾಗುವುದು.
ನವದೆಹಲಿ ಮುನ್ಸಿಪಲ್ ಕೌನ್ಸಿಲ್ ಸೆಪ್ಟೆಂಬರ್ 7 ರಂದು ರಾಜಪಥ್ ಮತ್ತು ಸೆಂಟ್ರಲ್ ವಿಸ್ಟಾ ಲಾನ್ ಅನ್ನು ‘ಕರ್ತವ್ಯಪಥ್’ ಎಂದು ಮರುನಾಮಕರಣ ಮಾಡುವ ಬಗ್ಗೆ ವಿಶೇಷ ಸಭೆಯನ್ನು ಕರೆದಿದೆ. ಸಭೆಯಲ್ಲಿ ಪ್ರಸ್ತಾವನೆಯನ್ನು ಪರಿಷತ್ತಿನ ಮುಂದೆ ಇಡಲಾಗುವುದು.






