ಸದ್ಯಕ್ಕೆ ರಾಹುಲ್ ಗಾಂಧಿ ವಿವಿಧ ವಿಚಾರಗಳಿಂದ ಸದ್ದು ಮಾಡ್ತಾ ಇದ್ದಾರೆ ಒಂದು ಕಡೆ ಜನಸಾಮಾನ್ಯರೊಂದಿಗೆ ಬೆರೆಯುವ ಮೂಲಕ ರಾಹುಲ್ ಗಾಂಧಿ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ಮೆಚ್ಚುಗೆಯನ್ನ ಪಡಿತಾ ಇದ್ದಾರೆ ಮತ್ತೊಂದು ಕಡೆಯಲ್ಲಿ ವಿವಿಧ ರೀತಿಯಾದ ಸಂಕಷ್ಟಗಳಿಗೆ ಕೂಡ ತುತ್ತಾಗುತ್ತಿದ್ದಾರೆ ಅದರಲ್ಲಿ ಪ್ರಮುಖವಾಗಿ ಅವರ ನೂತನ ಪಾಸ್ಪೋರ್ಟ್ ವಿಚಾರಕ್ಕೆ ಸಂಬಂಧಪಟ್ಟ ಹಾಗೆ..
ಹೆಚ್ಚು ಓದಿದ ಸ್ಟೋರಿಗಳು
ಹೌದು.. ರಾಜತಾಂತ್ರಿಕ ಪಾಸ್ಪೋರ್ಟ್ ಹೊಂದಿದ್ದ ರಾಹುಲ್ ಗಾಂಧಿಯವರು ಇದೀಗ ಅದನ್ನು ಹಿಂದಿರುಗಿಸಿ ಸಾಮಾನ್ಯ ಪಾಸ್ಪೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಹೊಸ ಪಾಸ್ಪೋರ್ಟ್ ನೀಡುವಂತೆ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ನೀಡುವಂತೆ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ದೆಹಲಿ ನ್ಯಾಯಾಲಯಕ್ಕೆ ಮನವಿಯನ್ನ ಸಲ್ಲಿಸಿದ್ದರು
ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ರಾಹುಲ್ ಗಾಂಧಿಗೆ ವಿದೇಶ ಪ್ರವಾಸಕ್ಕೆ ಅವಕಾಶ ನೀಡಿದರೆ, ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ ಅಡ್ಡಿಯಾಗಬಹುದು ಅಂತ ವಾದಿಸಿದ್ದಾರೆ.
ಇನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಅವರು ಇಂದು ವಿಚಾರಣೆ ನಡೆಸುವುದಾಗಿ ಹೇಳಿದ್ದು, ಪಾಸ್ಪೋರ್ಟ್ ಮಂಜೂರು ಮಾಡುವಂತೆ ರಾಹುಲ್ ಮಾಡಿದ ಮನವಿಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ಸುಬ್ರಮಣ್ಯ ಸ್ವಾಮಿಗೆ ಅವಕಾಶ ನೀಡಿದ್ದಾರೆ.

ಇನ್ನು ಈ ಬಗ್ಗೆ ಒಂದಷ್ಟು ಅಂಶಗಳನ್ನು ಹೊರಹಾಕಿರುವ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ
ಪಾಸ್ಪೋರ್ಟ್ ಅನ್ನು 10 ವರ್ಷಗಳವರೆಗೆ ವಿತರಿಸಲು ಅರ್ಜಿದಾರರಿಗೆ ಯಾವುದೇ ಮಾನ್ಯ ಅಥವಾ ಪರಿಣಾಮಕಾರಿ ಕಾರಣವಿಲ್ಲ. ಜೊತೆಗೆ 10 ವರ್ಷಗಳವರೆಗೆ ಪಾಸ್ಪೋರ್ಟ್ ನೀಡುವುದಕ್ಕಾಗಿ ಅರ್ಜಿಯು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಅನ್ನೋದನ್ನ ಕೂಡ ಉಲ್ಲೇಖ ಮಾಡಿದ್ದಾರೆ
ಇನ್ನು ಹಲಾವರು ಅಂಶಗಳನ್ನ ಉಲ್ಲೇಖಿಸಿರುವ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಅರ್ಜಿದಾರರ ಪಾಸ್ಪೋರ್ಟ್ಗಾಗಿ NOC 1 ವರ್ಷಕ್ಕಿಂತ ಹೆಚ್ಚಿರಬಾರದು ಮತ್ತು ವಾರ್ಷಿಕವಾಗಿ ಪರಿಶೀಲಿಸಬಹುದು ಅಥವಾ ನ್ಯಾಯಾಲಯವು ಸೂಕ್ತವೆಂದು ಪರಿಗಣಿಸಬಹುದು.
ಎಲ್ಲಾ ಇತರ ಮೂಲಭೂತ ಹಕ್ಕುಗಳಂತೆ ಪಾಸ್ಪೋರ್ಟ್ ಹೊಂದುವ ಹಕ್ಕು ಸಂಪೂರ್ಣ ಹಕ್ಕಲ್ಲ ಮತ್ತು ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಅಪರಾಧ ತಡೆಗಟ್ಟುವಿಕೆಯ ಹಿತಾಸಕ್ತಿಯಲ್ಲಿ ಸರ್ಕಾರವು ಹೇರಿರುವ ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ.
ಇನ್ನು ಸುಬ್ರಹ್ಮಣ್ಯ ಸ್ವಾಮಿ ಅವರು ಕೋರ್ಟ್ ಮುಂದಿಟ್ಟ ಪ್ರಮುಖ ಅಂಶಗಳನ್ನ ಗಮನಿಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ವೈಭವ್ ಮೆಹ್ತಾ, ಅವರು “ಜಾಮೀನು ಆದೇಶವು ಯಾವುದೇ ಪ್ರಯಾಣದ ನಿರ್ಬಂಧಗಳನ್ನು ವಿಧಿಸಿಲ್ಲ, . ಯಾವುದೇ ಪ್ರಯಾಣ ನಿರ್ಬಂಧಗಳಿಲ್ಲದ ಕಾರಣ ರಾಹುಲ್ ಗಾಂಧಿಯವರು ಅನುಮತಿ ಪಡೆಯದೆ ಹಲವಾರು ಬಾರಿ ಪ್ರಯಾಣಿಸಲು ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಿದ್ದಾರೆ. ಅಂತ ತಿಳಿಸಿದ್ರು ಜೊತೆಗೆ ಸ್ವಾಮಿಯವರು ಮಾಡಿದ ನಿರ್ಬಂಧಗಳ ವಿನಂತಿಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ…