ಜನರು ಬಯಸಿದರೆ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಾಲಿವುಡ್ ನಟಿ ಕಂಗನಾ ರಾಣವತ್ ಹೇಳಿದ್ದಾರೆ. ಈ ಮೂಲಕ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಅವರು, ರಾಜಕೀಯ ಪ್ರವೇಶಿಸುವ ಕುರಿತು ನಾನು ತುಂಬಾ ಆಸಕ್ತಿ ಹೊಂದಿದ್ದೇನೆ ಎಂದಿದ್ದಾರೆ.
ಪರಿಸ್ಥಿತಿ ಹೇಗಿರುತ್ತದೋ ಗೊತ್ತಿಲ್ಲ. ಒಂದು ವೇಳೆ ಸರಕಾರ ಬಯಸಿದರೆ ನಾನು ಅದರ ಭಾಗವಾಗಲು ಇಷ್ಟಪಡುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿಯಿಂದ ಸ್ಪರ್ಧಿಸುವ ಸೂಚನೆ ನೀಡಿದರು.
ಒಂದು ವೇಳೆ ಹಿಮಾಚಲ ಪ್ರದೇಶದ ಜನರು ನಾನು ರಾಜಕೀಯ ಪ್ರವೇಶಿಸುವುದನ್ನು ಇಷ್ಟಪಟ್ಟರೆ ಅದು ಸೌಭಾಗ್ಯ ಆಗುತ್ತದೆ ಎಂದು ಕಂಗನಾ ರಾಣವತ್ ಹೇಳಿದ್ದಾರೆ.