ವಿಧಾನಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆರವರನ್ನು ಹಂಗಾಮಿ ಸಭಾಪತಿಯಾಗಿ ನೇಮಕ ಮಾಡಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಆದೇಶಿಸಿದ್ದಾರೆ.
ಮೇಲ್ಮನೆ ಸಬಾಪತಿ ಕರ್ತವ್ಯಗಳನ್ನು ನಿರ್ವಹಿಸುವುದ್ಕಾಗಿ ಮಲ್ಕಾಪುರೆರನ್ನು ನೇಮಿಸಿರುವುದಾಗಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಭಾರತ ಸಂವಿಧಾನದ 184ನೇ ವಿಧಿ ಷರತ್ತು (1)ರ ಅನ್ವಯ ಹಂಗಾಮಿ ಸಭಾಪತಿಯನ್ನು ನೇಮಕ ಮಾಡಲಾಗಿದೆ. ಮೇ 17ರಿಂದ ರಾಜ್ಯಪಾಲರ ಆದೇಶ ಜಾರಿಗೆ ಬರಲಿದೆ. ಸದನವು ಅಧ್ಯಕ್ಷರನ್ನು ನೇಮಕ ಮಾಡುವವರೆಗು ಮಲ್ಕಾಪುರೆ ಸಭಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.
