ಯಾವ ಕಾಂಗ್ರೆಸ್ ಸಿಎಂ ಈ ರೀತಿ ಮಾಡಿರಲಿಲ್ಲ ಈ ಮನೆಹಾಳು ಕೆಲಸ ಮಾಡಿದ್ದು ಇವರೇ ಸರ್ಕಾರದ ದುಡ್ಡು ತೆಗೆದು ಇವರ ಮನೆಗೆ ಕೊಟ್ಟಿದ್ದು ಇವರೇ ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತೆ ಟ್ಯಾಕ್ಸ್ ಪೇಯರ್ಸ್ ಇಂದ ಹಣ ಬರುತ್ತದೆ ಅವರು ಪಾರ್ಟಿ ಆಫೀಸಿನಿಂದ ಕೊಟ್ಟಿದ್ರೆ ತೊಂದರೆ ಇಲ್ಲ.

ಕೊಡ್ತಿರೋದು ಸರ್ಕಾರದ ಹಣ ಇದನ್ನ ಪ್ರಶ್ನೆ ಮಾಡಬೇಕೋ ಬೇಡ್ವೋ? ಐದು ವರ್ಷಕ್ಕೆ ೬೦ ಕೋಟಿ (60 Crores) ಹಣ ಖರ್ಚಾಗುತ್ತೆ ತಾಲೂಕಿಗೆ ಎಂಎಲ್ಎ(MLA) ನೇ ಸುಪ್ರೀಂ ನಾವು ಎಲೆಕ್ಟೆಡ್ ಬಾಡಿ ನಾವು ನಾಮಿನೇಟ್ ಆಗಿ ಬಂದವರಲ್ಲ ನಾಮಿನೇಟ್ ಮಾಡೋರ ಕೈಕೆಳಗೆ ಕೂರಬೇಕಾ? ನಾವೇ ಸರ್ವೆಂಟ್ ಗಳಾ?
ಪ್ರಜಾಪ್ರಭುತ್ವದಲ್ಲಿ ಎಲೆಕ್ಟ್ ಆಗಿ ಬಂದಿದ್ದೇವೆ
ಇವರೇ ಗೂಟ ಹೊಡೆದು ಕೂರ್ತಾರೋ ೩೦ ವರ್ಷಗಳಲ್ಲಿ ಯಾರೂ ಕೂತಿಲ್ಲ ಮೂರು ವರ್ಷದ ನಂತರ ನಾವೇ ಬರ್ತೇವೆ ಈ ಸಿಎಂ ಯಾವಾಗ ಹೋಗ್ತಾರೋ ಗೊತ್ತಿಲ್ಲ ಯಾವಾಗ ಹೊಸ ಸಿಎಂ ಬರ್ತಾರೋ ಗೊತ್ತಿಲ್ಲ ಎಂದು ಕೈ ನಾಯಕರ ಕಾಲೆಳೆದ ಆರ್.ಅಶೋಕ್ ( R Ashok).
ಶಾಸಕರ ವೇತನ ಹೆಚ್ಚಳದ ಬಗ್ಗೆ ಪ್ರಸ್ತಾಪ

ಶಾಸಕರ ವೇತನ ಹೆಚ್ಚಳ ಅಂತ ಬರ್ತಿದೆ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಹೆಡ್ ಲೈನ್ ಆಗ್ತಿದೆ ನಮ್ಮ ಗಮನಕ್ಕೆ ಬಾರದೆ ಯಾವಾಗ ಚರ್ಚಿಸಿದ್ರೋ ಗೊತ್ತಿಲ್ಲ ಚರ್ಚೆ ವೇಳೆ ಆರ್.ಅಶೋಕ್ ಪ್ರಸ್ತಾಪ ಈ ವೇಳೆ ನಾನು ಎಲ್ಲಿಯೂ ಕೇಳಿಲ್ಲ ನಾನು ಪಗಾರ ಏರಿಕೆ ಮಾಡಿ ಅಂತ ಹೇಳಿಲ್ಲ ಪತ್ರಿಕೆಗಳ ವರದಿ ಬಗ್ಗೆ ಶಾಸಕ ಅರವಿಂದ ಬೆಲ್ಲದ್ (Aavind Bellad) ಸ್ಪಷ್ಟನೆ ಈ ವೇಳೆ ಮಧ್ಯ ಪ್ರವೇಶಿಸಿದ ಹೆಚ್.ಕೆ.ಪಾಟೀಲ್(H K Patil) , ನಿಮ್ಮ ಅಧ್ಯಕ್ಷತೆಯಲ್ಲಿ ಸಭೆ ಆಯ್ತು ಆಗ ಈ ವಿಚಾರ ಪ್ರಸ್ತಾಪ ಆಯ್ತು ಕೆಲವು ಶಾಸಕರು ಪ್ರಸ್ತಾಪ ಮಾಡಿದ್ರು ಇಷ್ಟು ವರ್ಷಗಳಿಂದ ವೇತನ ಹೆಚ್ಚಿಸಿಲ್ಲ ಅಂತ ಅದು ಮಾಧ್ಯಮಗಳಲ್ಲಿ ಬಂದಿದೆ.
ಅಶೋಕ್ ಮಾತಿಗೆ ಪ್ರಿಯಾಂಕ್ ಖರ್ಗೆ (Priyanka Kharge) ಆಕ್ಷೇಪ

ನೀವು ನಮ್ಮ ಬಗ್ಗೆ ಮಾತನಾಡ್ತೀರಲ್ಲ ಪಕ್ಕದ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ (BJP Govt In Maharastra) ಇದೆ ಅಲ್ಲಿನ ಮಿನಿಸ್ಟರ್ ಗೆ ಆರ್ ಎಸ್ ಎಸ್ (RSS)ನವರು ಪಿಎಗಳು ಅವರಿಗೆ ಸರ್ಕಾರದ ಹಣ ಕೊಡ್ತಿಲ್ವೇ? ಸಚಿವರ ಹಿಂದೆ ಮುಂದೆ ಎಲ್ಲಾ ಅವರೇ ಇದ್ದಾರೆ ಇದರ ಬಗ್ಗೆ ಯಾಕೆ ಮಾತನಾಡ್ತಿಲ್ಲ ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ್ ಆಕ್ರೋಶ

ಪ್ರಿಯಾಂಕ್ ಮಾತಿಗೆ ಬಿಜೆಪಿ ಶಾಸಕರ ಅಸಮಾಧಾನ, ಸದನದ ಬಾವಿಗಿಳಿದು ಪ್ರತಿಭಟನೆ ಬಿಜೆಪಿ ಶಾಸಕರ ಪ್ರತಿಭಟನೆ,ಘೋಷಣೆ ಗದ್ದಲದ ಮಧ್ಯೆ ಪ್ರಶ್ನೋತ್ತರಕ್ಕೆ ಸ್ಪೀಕರ್ ಅವಕಾಶ.
ಕ್ಷೇತ್ರದ ಸಮಸ್ಯೆ ಪ್ರಸ್ತಾಪಿಸಿದ ಅಲ್ಲಮಪ್ರಭು ಪಾಟೀಲ್ (Allama prabhu Patil)

ನಷ್ಟದಲ್ಲಿ ಸಿಲುಕಿಕೊಂಡ ರಾಜ್ಯ ಸರ್ಕಾರದ ಸಾರ್ವಜನಿಕ ಉದ್ದಿಮೆಗಳು 125 ಸಾರ್ವಜನಿಕ ಉದ್ದಿಮೆಗಳ ಪೈಕಿ 16 ಉದ್ದಿಮೆಗಳು ಬಾಗಿಲು ಬಂದ್ ನಷ್ಟದಲ್ಲಿ ನಡೆಯುತ್ತಿರುವ 34 ಸಾರ್ವಜನಿಕ ಉದ್ದಿಮೆಗಳು ಟಿಎ ಸರವಣ ಹಾಗೂ ಕೆಎಸ್ ನವೀನ್ ಪ್ರಶ್ನೆಗೆ ಸರ್ಕಾರದ ಉತ್ತರ ನಷ್ಟದಲ್ಲಿ ಇರುವ ಉದ್ದಿಮೆಗಳ ಪೈಕಿ ಬಿಎಂಟಿಸಿ ಕೆಎಸ್.ಆರ್.ಟಿಸಿ (KSRTC) ಕೂಡ ಸೇರ್ಪಡೆ ನಷ್ಟದಲ್ಲಿ ನಡೆಯುತ್ತಿರುವ ಐದು ವಿದ್ಯುತ್ ಸರಬರಾಜು ಕಂಪನಿಗಳು 34 ಅಭಿವೃದ್ಧಿ ನಿಗಮ ಸಾರ್ವಜನಿಕ ಉದ್ದಿಮೆಗಳು ಆರ್ಥಿಕ ಸಂಕಷ್ಟದಲ್ಲಿ ನಷ್ಟದಲ್ಲಿರುವ ಹಿನ್ನೆಲೆಯಲ್ಲಿ 16 ಕ್ಕೂ ಹೆಚ್ಚು ಸರ್ಕಾರಿ ಸಾರ್ವಜನಿಕ ಉದ್ದಿಮೆಗಳನ್ನು ಬಾಗಿಲು ಮುಚ್ಚಿರುವ ಸರ್ಕಾರ ಬೆಂಗಳೂರು ಉಪನಗರ ರೈಲು ಕಂಪನಿ, ಬೆಂಗಳೂರು ವಿಮಾನ ನಿಲ್ದಾಣ (Bangalore Airport) ರೈಲು ಸಂಪರ್ಕ ನಿಗಮ ಕೂಡ ಕ್ಲೋಸ್ ಆರ್ಥಿಕವಾಗಿ ಭಾರೀ ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮೆಗಳನ್ನು ನಡೆಸುವ ಕುರಿತು ಮೌಲ್ಯಮಾಪನ ಕೈಗೊಳ್ಳಲು ಸೂಚನೆ ನೀಡಿರುವ ಸರ್ಕಾರ.

ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದ ಪ್ರಿಯಾಂಕ್ ಖರ್ಗೆ
ಗ್ರಾಮೀಣಾಭಿವೃದ್ಧಿ ವಿವಿ ತಿದ್ದುಪಡಿ ವಿಧೇಯಕ ಮಂಡನೆ ವಿವಿ ಹೆಸರು ಬದಲಾಯಿಸುವ ವಿಧೇಯಕ ಮಹಾತ್ಮಗಾಂಧಿ (Mahathma Gandhi) ಎಂದು ಹೆಸರು ಬದಲಾವಣೆ ವಿಧೇಯಕ