ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದ ಎಬ್ಬಿಸಿರುವ ಆರ್ ಎಸ್ ಎಸ್ ಚಡ್ಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಆರ್.ಅಶೋಕ್ ಅರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದರೆ ಹುಷಾರ್ ಎಂದು ಎಚ್ಚರಿಸಿದ್ದಾರೆ.
ಮುಂದುವರೆದು, ಈ ರೀತಿ ಸುಡೋರೆಲ್ಲ ಮನೆ ಸುಟ್ಟಿಕೊಂಡಿದ್ದಾರೆ. ಆಂಜನೇಯನ ಬಾಲಕ್ಕೆ ಬೆಂಕಿ ಬಿದ್ದು, ಇಡೀ ಲಂಕೆಯೇ ಸುಟ್ಡಿ ಹೋಯಿತು ಆಎಸ್‌ಎಸ್ ಶಕ್ತಿ ಏನು ಪ್ರಪಂಚಕ್ಕೆ ಕಾಂಗ್ರೆಸ್ ಗೆ ಗೊತ್ತಿದೆ.
ಪ್ಯಾಂಟೂ, ಚಡ್ಡಿ ಸುಡೋದನ್ನೆಲ್ಲ ಬಿಟ್ಡು ಬಿಡಿ ಆರ್ ಎಸ್ ಎಸ್ ತಂಟೆಗೆ ಬಂದ್ರೆ ಸುಟ್ಡು ಹೋಗ್ತಿರಿ ನೀವೆಲ್ಲರೂ ಚುನಾವಣೆಗೆ ಹೋಗ್ತಿದ್ದೀರಿ,ಸ್ವಲ್ಪ ಹುಷಾರಾಗಿರಿ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ

ನೀವು ಬಾದಾಮಿಯಲ್ಲಿ ಸ್ವಲ್ಪ ಅಂತರದಿಂದ ಗೆದ್ದಿದ್ದೀರಿ ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಕ್ಷೇತ್ರ ಹುಡುಕ್ತಿದ್ದೀರಿ ಇವಾಗ ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡಿದ್ರೆ, ನೀವು ಮುಂದಿನ ಚುನಾವಣೆ ಯಲ್ಲು ಸೋಲ್ತಿರಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ.
ಕೇವಲ ಸೋನಿಯ ಗಾಂಧಿ ಮೆಚ್ಚಿಸಲು ಹೋಗಿ, ನೀವು ಚುನಾವಣೆಯಲ್ಲಿ ಸುಟ್ಟು ಹೋಗ್ತಿರಿ ಹುಷಾರ್..! ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.






