ಚೈನಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕೋವಿಡ್ ಸಂಖ್ಯೆ ಜಾಸ್ತಿಯಾಗಿದೆ ವಿದೇಶಗಳಿಂದ ಭಾರತಕ್ಕೆ ಬರುವವರ ಮೇಲೆ ಕಣ್ಗಾವಲು ಇಡಲಾಗಿದೆ ವಿಮಾನದಲ್ಲಿ ಬೇರೆ ದೇಶದಿಂದ ಬಂದವರಿಗೆ ಕೋವಿಡ್ ಲಕ್ಷಣಗಳು ಕಂಡುಬಂದರೆ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಆಸ್ಪತ್ರೆ ಸಿದ್ಧಮಾಡಲಾಗಿದೆ ಎಂದು ಕಂದಾಯ ಆರ್.ಅಶೋಕ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿಯ ಕುರಿತು ಸಭೆ ಬಳಿಕ ಮಾತನಾಡಿದ ಆರ್.ಅಶೋಕ್ ರೋಗ ಲಕ್ಷಣಗಳು ಇದ್ರೆ ಆಸ್ಪತ್ರೆ ಯಲ್ಲಿ ಅಡ್ಮಿಟ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಥಿಯೇಟರ್ ಗಳಲ್ಲಿ ಮಾಸ್ಕ್ ಕಡ್ಡಾಯ. ಎಲ್ಲಾ ಥಿಯೇಟರ್ ಮಾಲೀಕರಿಗೆ ಸೂಚನೆ ಕೊಡಲಾಗಿದೆ. ಶಾಲಾ – ಕಾಲೇಜುಗಳು ಥರ್ಮಲ್ ಟೆಸ್ಟ್ ಮಾಡುವುದು, ಕೈಗೆ ಸ್ಯಾನಿಟೈಜ್ ಮಾಡಬೇಕು, ಕ್ಲಾಸ್ ರೂಮ್ ಒಳಗೆ ಮಾಸ್ಕ್ ಧರಿಸಬೇಕು ಎಂದು ಹೇಳಿದ್ದಾರೆ.
ಹೋಟೆಲ್ ಗಳಲ್ಲಿ ಕೆಲಸ ಮಾಡುವವರು ಎರಡು ಡೋಸ್ ಲಸಿಕೆ ಕಡ್ಡಾಯ ಹಾಕಿರಲೇಬೇಕು ಮೂರನೇ ಡೋಸ್ ಹಾಕಿಕೊಂಡ್ರೆ ಒಳ್ಳೆಯದು ಟೇಬಲ್ ನಲ್ಲಿ ಕುಳಿತುಕೊಳ್ಳಲು ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ.

ರಾತ್ರಿ 1 ಗಂಟೆ ವರೆಗೆ ಮಾತ್ರ ಹೊಸ ವರ್ಷ ಸಂಭ್ರಮಕ್ಕೆ ಅವಕಾಶ
ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವರು ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು ಎಲ್ಲಿ ಸಂಭ್ರಮಾಚರಣೆ ಮಾಡ್ತಾರೋ ಅಲ್ಲಿ ಎಲ್ಲ ಕಡೆಯೂ ಇದು ಅನ್ವಯ ರೆಸ್ಟೋರೆಂಟ್ 1 ಗಂಟೆ ವರೆಗೆ ಮಾತ್ರ ತೆಗಿಬೇಕು ಎಂದು ಸೂಚಿಸಿದ್ದಾರೆ.
ನಿಯಮ ಉಲ್ಲಂಘನೆ ಮಾಡಿದವರ ಬಗ್ಗೆ ಸದ್ಯಕ್ಕೆ ಏನು ದಂಡ ಹಾಕುವ ಬಗ್ಗೆ ನಿರ್ಧಾರ ಮಾಡಿಲ್ಲ ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಮುಖ್ಯಮಂತ್ರಿ ಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸಭೆ ಬಳಿಕೆ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.






