ಕರ್ನಾಟಕ-ಮಹಾರಾಷ್ಟ್ರ ನಡುವೆ ಭುಗಿಲೆದ್ದಿರುವ ಬೆಳಗಾವಿ ಗಡಿ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಧಮ್ಮು, ತಾಕತ್ತು ಇದ್ದರೆ ತೋರಿಸಿ ಎಂದು ಹರಿಹಾಯ್ದಿದ್ದಾರೆ.
ಭಾನುವಾರ ಮಹಾರಾಷ್ಟ್ರ ಮಾಜಿ ಸಿಎಂ ಉದ್ದವ್ ಠಾಕ್ರೆ ಬೆಳಗಾವಿಯನ್ನ ಕೇಂದ್ರಾಳಿಟ ಪ್ರದೇಶವನ್ನಾಗಿ ಘೋಷಿಸಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಇತ್ತೀಚಿನ ದಿನಗಳಲ್ಲಿ ಪುನಃ ಮಹಾರಾಷ್ಟ್ರದ ಹಲವು ಪಕ್ಷ ಮತ್ತು ಸರ್ಕಾರ ಜೊತೆಗೆ ಬಿಜೆಪಿ ಪಕ್ಷ ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಸೇರ್ಪಡೆಗೆ ಒತ್ತಾಯ ಇದೆ.
ಇದು ಅತ್ಯಂತ ದೇಶದ ಒಕ್ಕೂಟದ ವ್ಯವಸ್ಥೆಯನ್ನ ಅಡ್ಡಿ ಪಡಿಸುವಂತ ಅನಾಹುತ ತರುವಂತ ಜವಾಬ್ದಾರಿ ಒಂದು ದೇಶ ಒಂದು ಭಾಷೆ,ಒಂದು ದೇಶ ಒಂದು ಚುನಾವಣೆ ಅನ್ನೋ ಬಿಜೆಪಿ ನಾಯಕರು. ಒಂದು ಸ್ವಲ್ಪ ಕಾಮನ್ ಸೆನ್ಸ್ ಇದ್ರೆ ಇಂತಹ ವಿಷಯಗಳನ್ನ ಪ್ರವೆಕೆಟ್ ಮಾಡುವುದು ಸೂಕ್ತವಲ್ಲ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ಕರ್ನಾಟಕದ ಸ್ವತ್ತು ಬೆಳಗಾವಿಯಾಗಿದೆ ಇಲ್ಲಿ ಯಾವುದೇ ವಿವಾದ ಇಲ್ಲ ನಮ್ಮ ಮುಖ್ಯಮಂತ್ರಿ ಬೆಳಗಾವಿ ವಿವಾದ ಅಂತ ಪದ ಬಳಿಸಿದ್ದಾರೆ ತಕ್ಷಣವೇ ವಿವಾದ ಅನ್ನೋ ಪದವನ್ನು ಸಿಎಂ ವಾಪಸು ಪಡೆಯಬೇಕು ಇದು ವಿವಾದ ಅಲ್ಲ, ಬೆಳಗಾವಿ ವಿಷಯ ಎಂದು ಆಗ್ರಹಿಸಿದ್ದಾರೆ.
ಬೆಳಗಾವಿ ವಿಷಯವನ್ನ ಮಹಾರಾಷ್ಟ್ರ ಎತ್ತಿಕೊಂಡಿದ್ದಾರೆ ಅವರು ವಿವಾದ ಸೃಷ್ಟಿ ಮಾಡ್ಕೊಂಡ್ರೆ, ನಾವು ಯಾಕೆ ವಿವಾದ ಅಂತ ಅನ್ಕೊಳ್ಳೋಣಾ ಕರ್ನಾಟಕದ ಏಕೀಕರಣದಲ್ಲಿ ಕರ್ನಾಟಕದ ಭಾಗದ ತಿರ್ಮಾನವಾಗಿದೆ. ಇವತ್ತು ಕರ್ನಾಟಕ ರಾಜ್ಯಕ್ಕೆ ಬೆಳಗಾವಿಗೆ ಅತ್ಯಂತ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಗೆ ಕನ್ನಡಿಗರ ದುಡ್ಡನ್ನ ಬಂಡವಾಳ ಹಾಕಿದ್ದೇವೆ ಸಕ್ಕರೆ ಕಾರ್ಖಾನೆ ನಡೆಯುತ್ತಿದ್ರೆ ಕನ್ನಡಿಗ ಕೊಟ್ಟಿರುವಂತ ಕೊಡುಗೆ. ಮಹಾರಾಷ್ಟ್ರದಲ್ಲಿ ಪಕ್ಷಗಳು ಬೆಳಗಾವಿಯ ಆರ್ಥಿಕ ಶಕ್ತಿ ಗಮನಿಸಿ ಲಪಟಯಿಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಠಾಕ್ರೆ ಮಾತಿನ ಜಾಕ್ಟೆಗೆ ಸರ್ಕಾರ ಡ್ರಮ್ ಹೊಡೆಯಲು ಹೊರಟಿದ್ದಾರೆ ಇದು ಬಿಜೆಪಿಯ ನಾಚಿಗೆ ಗೇಡಿನ ಕೆಲಸ ಇದು ಈ ದೇಶದಲ್ಲಿ ಒಕ್ಕೂಟದ ವ್ಯವಸ್ಥೆ, ಪ್ರಜಾಪ್ರಭುತ್ವ, ಸಂವಿಧಾನದ ಗೌರವ ಕಾಪಾಡಬೇಕಾದ್ರೆ ಮಹಾರಾಷ್ಟ್ರದ ಸರ್ಕಾರ ಜವಾಬ್ದಾರಿಯುತವಾಗಿ ನಡೆಯುವುದನ್ನ ಕಲಿಯಬೇಕು ಎಂದು ಹೇಳಿದ್ದಾರೆ.






