ಗೌರವಾನ್ವಿತ ಹೈಕೋರ್ಟ್ ಆದೇಶ ಮಾಡಿದೆ. ಅದರ ಪೂರ್ಣ ಮಾಹಿತಿ ಸಿಕ್ಕಿಲ್ಲ.ನನಗೆ ಇರೋ ಮಾಹಿತಿ ಪ್ರಕಾರ ಡಿಸೆಂಬರ್ 31ರೊಳಗೆ ಚುನಾವಣೆ ಬಗ್ಗೆ ಹೇಳಿದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಕ್ಯಾಟಗಿರಿ, ಬ್ಯಾಕ್ ವರ್ಡ್ ಮೀಸಲಾತಿ ಕೊಡಬೇಕಿದೆ. ಅದಕ್ಕಾಗಿ ಕಮಿಟಿ ಮಾಡಬೇಕೋ ಅಥವಾ ಅಧಿಕಾರಿಗಳು ನಿರ್ಣಯ ಮಾಡಬೇಕೆ ಎನ್ನುವುದರ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಕೋರ್ಟ್ ನ ಆದೇಶ ಪ್ರತಿ ಪಡೆದು ತೀರ್ಮಾನ ಮಾಡುತ್ತೇವೆ. ಸರ್ಕಾರ ಚುನಾವಣೆ ಮಾಡಲು ಹಿಂದೇಟು ಹಾಕಲ್ಲ. ಸರ್ವ ಸಿದ್ಧತೆ ಮಾಡಿಕೊಂಡಿದ್ದೇವೆ ನಮ್ಮಲ್ಲಿ ಇಚ್ಛಾ ಶಕ್ತಿಯ ಕೊರತೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೋರ್ಟ್ ಆದೇಶದ ಮೇರೆಗೆ ಸರ್ಕಾರ ನ್ಯಾಯಯುತವಾಗಿ ಓಬಿಸಿ ಮೀಸಲಾತಿ ಮಾಡಬೇಕು. ಅದು ಸರ್ಕಾರದ ಉದ್ದೇಶ. ಮುಂದೆ ನೀಡುವ ಅಂತಿಮ ತೀರ್ಪು ನೋಡಿ ಅಂತಿಮ ತೀರ್ಮಾನ ಮಾಡುತ್ತೇವೆ. ಸರ್ಕಾರಕ್ಕೆ ಬಹಳ ಪೂರ್ಣವಾದ ಇಚ್ಚಾಶಕ್ತಿ ಇದೆ ಎಂದಿದ್ದಾರೆ.
ಅದಕ್ಕಾಗಿಯೇ ವಾರ್ಡ್ ಡಿ ಲಿಮಿಟೇಷನ್, ಮೀಸಲಾತಿ ನೀಡಲಾಗಿದೆ ಎಂದರು.






