• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕರ್ನಾಟಕದಲ್ಲಿ ‘ಪುಷ್ಪ 2’ ಟಿಕೆಟ್ ದರ 200 ರೂ. ಮೀರುವಂತಿಲ್ಲ; ಹಾಗಿದ್ರೆ ಮಾತ್ರ ರಿಲೀಸ್​ಗೆ ಅವಕಾಶ

ಪ್ರತಿಧ್ವನಿ by ಪ್ರತಿಧ್ವನಿ
October 28, 2024
in Top Story, ಇತರೆ / Others, ಕರ್ನಾಟಕ
0
Share on WhatsAppShare on FacebookShare on Telegram

‘ಪುಷ್ಪ 2’ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲು ದೊಡ್ಡ ತೊಡಕು ಎದುರಾಗಿದೆ. ಕನ್ನಡ ಚಿತ್ರರಂಗದವರು ಏಕರೂಪ ಟಿಕೆಟ್ ದರವನ್ನು ಆಗ್ರಹಿಸುತ್ತಿದ್ದಾರೆ. ಪುಷ್ಪ 2 ಚಿತ್ರದ ಟಿಕೆಟ್ ದರವನ್ನು 200 ರೂಪಾಯಿಗಳಿಗಿಂತ ಹೆಚ್ಚು ನಿಗದಿಪಡಿಸಿದರೆ ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗುವುದಾಗಿ ಚಿತ್ರರಂಗದ ಮುಖಂಡರು ಎಚ್ಚರಿಸಿದ್ದಾರೆ.

ADVERTISEMENT

‘ಪುಷ್ಪ 2’ ಸಿನಿಮಾ ರಿಲೀಸ್​​ಗೆ ಇನ್ನು ಕೆಲವೇ ವಾರಗಳು ಬಾಕಿ ಉಳಿದಿವೆ. ಡಿಸೆಂಬರ್ 5ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಹೀಗಿರುವಾಗಲೇ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡಲು ದೊಡ್ಡ ತೊಡಕು ಉಂಟಾಗಿದೆ. ಈ ಚಿತ್ರದ ಬಿಸ್ನೆಸ್​ಗೆ ಕರ್ನಾಟಕದಲ್ಲಿ ದೊಡ್ಡ ಹೊಡೆತ ಉಂಟಾಗೋದು ಖಚಿತ ಎಂದು ಹೇಳಲಾಗುತ್ತಿದೆ.ಅಷ್ಟಕ್ಕೂ ಆಗಿದ್ದು ಏನು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಇತ್ತೀಚೆಗೆ ‘ಪುಷ್ಪ 2’ ಈವೆಂಟ್​ನಲ್ಲಿ ಕರ್ನಾಟಕ ಹಂಚಿಕೆದಾರ ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿದ್ದರು. ತೆಲುಗು ಮೂಲದ ಇವರು ‘ಪುಷ್ಪ 2’ ಚಿತ್ರ ಕರ್ನಾಟಕದಲ್ಲಿ ಭರ್ಜರಿ ಬಿಸ್ನೆಸ್ ಮಾಡಲಿದೆ ಎಂದು ಭವಿಷ್ಯ ನುಡಿದಿದ್ದರು. ಪರಭಾಷೆಯವರು ಸುಲಭದಲ್ಲಿ ಈ ರೀತಿ ಬಿಸ್ನೆಸ್ ಮಾಡಿಕೊಂಡು ಹೋಗುತ್ತಿರುವ ವಿಚಾರವನ್ನು, ಹಾಗೂ ಟಿಕೆಟ್​ ದರಕ್ಕೆ ಕಡಿವಾಣ ಇಲ್ಲದನ್ನು ಕನ್ನಡ ಚಲಚಿತ್ರ ವಾಣಿಜ್ಯ ಮಂಡಳಿ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಏಕರೂಪ ಟಿಕೆಟ್ ದರದ ಕೂಗು ಕೂಡ ಎದ್ದಿದೆ.

ಈ ಬಗ್ಗೆ ಮಾತನಾಡಿರುವ ಸಾರಾ ಗೋವಿಂದು ಅವರು, ‘ಮಲ್ಟಿಪ್ಲೆಕ್ಸ್​ನಲ್ಲಿ ರಜಿನಿಕಾಂತ್ ಚಿತ್ರಕ್ಕೆ 6 ಸ್ಕ್ರೀನ್ ಕೊಟ್ಟರೆ ಕನ್ನಡ ಸಿನಿಮಾಗೆ 2 ಸ್ಕ್ರೀನ್ ಕೊಡಲಾಗಿತ್ತು. ಟಿಕೆಟ್ ಬೆಲೆ 1500 ರೂಪಾಯಿ ನಿಗದಿ ಮಾಡಲಾಗಿತ್ತು. ಇದರಿಂದ ನಮ್ಮ ಬೇರೆ ಭಾಷೆ ಅವರು ಇಲ್ಲಿಂದ ಹಣ ತೆಗೆದುಕೊಂಡು ಹೋಗುತ್ತಿದ್ದಾರೆ. 2017ರಲ್ಲಿ ಸಿಎಂ ಬಳಿ ಮಾತನಾಡಿದಾಗ ಟಿಕೆಟ್ ದರ 200 ರೂಪಾಯಿ ಮೀರುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಮಲ್ಟಿಪ್ಲೆಕ್ಸ್ ಅವರು ಈ ಆದಶಕ್ಕೆ ತಡೆ ತಂದಿದ್ದರು’ ಎಂದಿದ್ದಾರೆ.

ವಿತರಕರಿಗೆ ಈಗೇ ಹೇಳ್ತೀವಿ. ಬೇರೆ ಭಾಷೆ ಸಿನಿಮಾಗೆ ಹೆಚ್ಚು ದುಡ್ಡು ಕೊಟ್ಟು ತರಬೇಡಿ. ಏಕೆಂದರೆ ಟಿಕೆಟ್ ದರ 200 ರೂಪಾಯಿ ಆಗುತ್ತದೆ. ಆಂಧ್ರ ಮತ್ತು ತಮಿಳುನಾಡಿನಲ್ಲಿ 180, 150 ಟಿಕೆಟ್ ದರ ಇದ್ದರೆ ಇಲ್ಲಿ 1200 ರೂಪಾಯಿ ಇದೆ. ಪುಷ್ಪ 2 ಚಿತ್ರಕ್ಕೆ 200 ರೂಪಾಯಿಗಿಂತ ಜಾಸ್ತಿ ದರ ಇಟ್ಟರೆ ಪರಿಣಾಮ ನೆಟ್ಟಗೆ ಇರಲ್ಲ. ಥಿಯೇಟರ್​ಗೆ ಮುತ್ತಿಗೆ ಹಾಕೋದು ಫಿಕ್ಸ್’ ಎಂದು ಸಾರಾ ಗೋವಿಂದು ಅವರು ಹೇಳಿದ್ದಾರೆ.

ಟಿಸಿ ವೆಂಕಟೇಶ್​ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ‘ನವೆಂಬರ್ 15ರ ಒಳಗೆ ಟಿಕೆಟ್ ವಿಚಾರದಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳದೇ ಇದ್ದರೆ ಪುಷ್ಪ ಚಿತ್ರವನ್ನು ರಿಲೀಸ್ ಮಾಡಲು ಬಿಡುವುದಿಲ್ಲ. 200 ರೂಪಾಯಿ ಟೆಕೆಟ್ ದರ ಫಿಕ್ಸ್ ಆದರೆ ಮಾತ್ರ ಪುಷ್ಪ ಸಿನಿಮಾ ರಿಲೀಸ್ ಮಾಡ್ತೇವೆ’ ಎಂದಿದ್ದಾರೆ ಅವರು.

Tags: # sandalwood #sandalwoodcinema #kannadafilmindustry #kicchasudeep #fans #socialmedia #goodnews #newupdate #pratidhvani #pratidhvanidigital #pratidhvaninews'Kannada Film Chamber gives warning.Pro-languagePushpa 2 movieRs 150 should not be exceeded.
Previous Post

ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಗುತ್ತಾ..? ಇವತ್ತು ಕೋರ್ಟ್‌ನಲ್ಲಿ ಆಗಿದ್ದೇನು..?

Next Post

ಡಾ.ರಾಜ್, ಪಾರ್ವತಮ ಪುತ್ಥಳಿ ಸಮೀಪವೇ ಪುನೀತ್ ಕಂಚಿನ ಪುತ್ಥಳಿ ಅನಾವರಣ

Related Posts

‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?
Top Story

ಸಾಮಾನ್ಯ ಭಕ್ತರಿಗೆ ಟಿಟಿಡಿಯಿಂದ ಬಂಪರ್ ಸಿಹಿಸುದ್ದಿ: ಶ್ರೀವಾರಿ ದರ್ಶನ ಇನ್ನಷ್ಟು ಸುಲಭ

by ಪ್ರತಿಧ್ವನಿ
May 22, 2026
0

ಕಲಿಯುಗದ ಪ್ರತ್ಯಕ್ಷ ದೈವ ತಿರುಪತಿ ದೇವರ ದರ್ಶನಕ್ಕಾಗಿ ಆಗಮಿಸುವ ಸಾಮಾನ್ಯ ಭಕ್ತರಿಗೆ ತಿರುಮಲದ ತಿರುಪತಿ ದೇವಸ್ಥಾನ ಮಹತ್ವದ ಸಿಹಿಸುದ್ದಿ ನೀಡಿದೆ. ಇನ್ಮುಂದೆ ಗಂಟೆಗಟ್ಟಲೆ ಕಾಯುವ ಅವಶ್ಯಕತೆ ಕಡಿಮೆಯಾಗಲಿದ್ದು,...

Read moreDetails
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

ಕಸಬ್ ಉದಾಹರಣೆ ನೀಡಿ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಪ್ರಶ್ನೆ ಹೀಗಿದೆ! ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ಗಂಭೀರ ವಾದ

May 22, 2026
‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದೆ ವಿದೇಶಿ ಸಂಪರ್ಕ? ನೆಟ್ಟಿಗರ ಪ್ರಶ್ನೆಗೆ ಸಂಸ್ಥಾಪಕ‌ ಹೇಳಿದ್ದೇನು‌?

May 22, 2026
ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

ಅಮೆರಿಕ ಗುಪ್ತಚರ ಇಲಾಖೆಯ ಎಚ್ಚರಿಕೆ: ಯುದ್ಧದ ಗಾಯ ಮರೆತು ಮತ್ತೆ ಬಲಗೊಳ್ಳುತ್ತಿರುವ ಇರಾನ್..!

May 22, 2026
ಗುಜರಾತ್-ಚೆನ್ನೈ ಕದನದ ಮೇಲೆ ಆರ್‌ಸಿಬಿ ಕಣ್ಣು: ಇಂದು ಸಿಎಸ್‌ಕೆ ಗೆದ್ದರೆ ಬೆಂಗಳೂರು ತಂಡಕ್ಕೆ ಲಾಭ?

‘ಕಾಕ್ರೋಚ್ ಜನತಾ ಪಾರ್ಟಿ’ಗೆ ಎಕ್ಸ್‌ನಲ್ಲಿ ಬ್ರೇಕ್..! ಯುವಕರ ಡಿಜಿಟಲ್ ಆಕ್ರೋಶಕ್ಕೆ ಸೆನ್ಸಾರ್‌?

May 21, 2026
Next Post

ಡಾ.ರಾಜ್, ಪಾರ್ವತಮ ಪುತ್ಥಳಿ ಸಮೀಪವೇ ಪುನೀತ್ ಕಂಚಿನ ಪುತ್ಥಳಿ ಅನಾವರಣ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada