ಶುದ್ಧಗಾಳಿ ಸೂಚ್ಯಂಕದಲ್ಲಿ ದೆಹಲಿ ಅತೀ ಹೆಚ್ಚು ಕಳಪೆಯಿಂದ ಕೂಡಿದ್ದು, ಬೆಂಗಳೂರು ಉತ್ತಮ ಸ್ಥಾನದಲ್ಲಿದೆ.
ವಾಯು ಮಾಲಿನ್ಯ ಕುರಿತ ಬೆಳವಣಿಗೆಗಳನ್ನು ಗಮನಿಸಿದರೆ ಕೆಲವೊಂದು ನಗರಗಳ ಪರಿಸ್ಥಿತಿ ತಳಮಟ್ಟದಲ್ಲಿದೆ. ನಗರಗಳಲ್ಲಿ ಉಂಟಾಗುವ ವಾಹನದಟ್ಟಣೆ ಜೊತೆ ಪರಿಸರ ಸಂಪೂರ್ಣವಾಗಿ ಕಲುಷಿತಗೊಳ್ಳುತ್ತಿದ್ದು, ಇದರಿಂದ ವಾತಾವರಣದಲ್ಲಿ ವಿಷಾನಿಲ ತುಂಬಿಕೊಂಡು ವಾಯುಮಾಲಿನ್ಯ ಉಂಟಾಗುತ್ತಿದೆ. ಇದು ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಸದ್ಯ ಕೆಲವೊಂದು ನಗರಗಳಲ್ಲಿ ಶುದ್ಧಗಾಳಿ ಸೂಚ್ಯಂಕಗಳನ್ನು ಗಮನಿಸಬಹುದು. ಮುಖ್ಯವಾಗಿ ಹೆಚ್ಚಿನ ವಾಯುಮಾಲಿನ್ಯ ಹೊಂದಿರುವ ನಗರವಾದ ದೆಹಲಿ ಇದ್ದು, 425 ಸೂಚ್ಯಂಕ ಹೊಂದಿದೆ. ಇದು ಸಹಜವಾಗಿ ತೀವ್ರ ಮಟ್ಟದಲ್ಲಿ ವಾತಾವರಣ ಬದಲಾಗಿದ್ದು, ಆತಂಕ ಮೂಡಿಸಿದೆ.
ಮುಂಗೇರ್ 410 ಸೂಚ್ಯಂಕ ಹೊಂದಿದ್ದು, ಇಲ್ಲೂ ಹವಾಮಾನ ಬದಲಾಗಿದೆ. ಮೀರತ್ ನಲ್ಲಿ 386 ರಷ್ಟು ಬಹಳ ಕಳಪೆಯಿದ್ದು, ಹೌರತ್ ನಲ್ಲಿ 351. ಫರೀದಾಬಾದ್ ನಲ್ಲಿ 340. ಸಿಂಗ್ರವುಲಿ ಯಲ್ಲಿ 305 ಕಳಪೆ ಮಟ್ಟದಲ್ಲಿ ವಾಯುಮಾಲಿನ್ಯ ಉಂಟಾಗಿದೆ.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯ ತಾರಕಕ್ಕೇರುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ದೇಶದಲ್ಲಿ ಹೆಚ್ಚಾಗಿ ವಾಯುಕಲುಷಿತಗೊಳ್ಳುವ ನಗರವೆಂದರೆ ದೆಹಲಿ. ಇದೀಗ ಕೊರೋನಾ ಹಾವಳಿಯೂ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಆರೋಗ್ಯ ಸ್ಥಿತಿ ಮತ್ತಷ್ಟು ಕುಸಿದಿದೆ.
ದೆಹಲಿಯ ಜಹಾಂಗೀರ್ ಪುರಿ ಹಾಗೂ ಆನಂದ್ ವಿಹಾರದಲ್ಲಿ 427, 412 ಸೂಚ್ಯಂಕವಿದ್ದು, ವಾಯಮಾಲಿನ್ಯದ ತೀವ್ರತೆ ಹೆಚ್ಚಾಗಿದೆ. ಇನ್ನು ದೆಹಲಿಯ ಪಂಜಾಬಿಬಾಗ್, ವಾಜಿಪುರ್ , ರೋಹಿಣಿ, ಪಾಟ್ ಪರ್ಗಂಜ್ ಸ್ಥಳಗಳಲ್ಲಿ ಬಹಳ ಕಳಪೆ ಮಟ್ಟದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುನ್ನೂರರ ಗಡಿ ದಾಟಿದೆ.
ಕೆಲವೊಂದು ನಗರಗಳು ಅತ್ಯುತ್ತಮ ಶುದ್ಧಗಾಳಿ ಹೊಂದುವುದರಲ್ಲಿ ಹೆಸರುಗಳಿಸಿವೆ. ಇಂದು ಶಿಲ್ಲಾಂಗ್ ನಲ್ಲಿ ಕೇವಲ 14 ಗುಣಮಟ್ಟದ ಸೂಚ್ಯಂಕವಿದ್ದು, ಉತ್ತಮವಾಗಿದೆ. ಮುಂಬೈನಲ್ಲಿ 24, ಐಜಾವಲ್ 26, ಬೆಂಗಳೂರಿನಲ್ಲಿ 28, ಚಾಮರಾಜನಗರ 29, ಚೆನ್ನೈ 30 ಸೂಚ್ಯಂಕ ಹೊಂದಿದೆ.