• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

Punjab Election 2022 | ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಸ್‌ ಆಡುತ್ತಿದೆ : ಅರವಿಂದ್‌ ಕೇಜ್ರವಾಲ್‌ ಲೇವಡಿ

Any Mind by Any Mind
February 16, 2022
in ದೇಶ
0
Punjab Election 2022 | ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಸ್‌ ಆಡುತ್ತಿದೆ : ಅರವಿಂದ್‌ ಕೇಜ್ರವಾಲ್‌ ಲೇವಡಿ
Share on WhatsAppShare on FacebookShare on Telegram

ದೆಹಲಿ ಮುಖ್ಯಮಂತ್ರಿ ಭಯೋತ್ಪಾದಕರೊಂದಿಗೆ ನಂಟು ಹೊಂದಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಫಲಿತಾಂಶ ಉತ್ತರ ನೀಡಲಿದೆ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

ADVERTISEMENT

ಮಂಗಳವಾರ ಕೇಜ್ರಿವಾಲ್ ಅವರನ್ನು “ಭಯೋತ್ಪಾದಕರ ಮನೆಯಲ್ಲಿ ಕಾಣಬಹುದು” ಎಂದು ಗಾಂಧಿಯವರು ಕಿಡಿಕಾರಿದ್ದರು. ಕ್ವಿಂಟ್ ವರದಿ ಮಾಡಿದಂತೆ, ಖಲಿಸ್ತಾನ್ ನಾಯಕನ ಮನೆಯಲ್ಲಿ ದೆಹಲಿ ಸಿಎಂ ರಾತ್ರಿಯ ತಂಗಿದ್ದನ್ನು ಉಲ್ಲೇಖಿಸಿ ರಾಹುಲ್‌ ಅವರು “ಕಾಂಗ್ರೆಸ್ ಪಕ್ಷದ ನಾಯಕನು ಭಯೋತ್ಪಾದಕರ ಮನೆಯಲ್ಲಿ ಏನಾಗಿದ್ದರೂ ಕಾಣಿಸುವುದಿಲ್ಲ. ಎಎಪಿಯ ದೊಡ್ಡ ನಾಯಕ ಭಯೋತ್ಪಾದಕನ ಮನೆಯಲ್ಲಿ ಕಾಣುತ್ತಾರೆ, ಇದು ಸತ್ಯ.” ಎಂದಿದ್ದರು.

ಎಎಪಿ ಪಂಜಾಬ್‌ನಲ್ಲಿ ಪ್ರಮುಖ ಪ್ರತಿಸ್ಪರ್ಧಿ ಎನ್ನುವುದು ಮತ್ತೆ  ಸಾಬೀತಾಗುತ್ತಿದೆ. ಕೇಜ್ರಿವಾಲ್ ಅವರು ಭಾನುವಾರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗೆಲ್ಲುವ ವಿಶ್ವಾಸವನ್ನು ತಳ್ಳಿಹಾಕಿದ್ದಾರೆ. ಅಮೃತಸರದಲ್ಲಿ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷವು ಸರ್ಕಸ್ ಆಗಿ ಮಾರ್ಪಟ್ಟಿದೆ. ಚನ್ನಿ ಸಾಹೇಬರು ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲಲಿದ್ದಾರೆ. ಎಎಪಿ ಅವರನ್ನು ಸೋಲಿಸಲಿದೆ. ಅವರು ಎಂಎಲ್ಎ ಆಗಲು ಸಾಧ್ಯವಾಗದಿದ್ದಾಗ ಅವರು ಸಿಎಂ ಆಗುವ ಮಾತೆಲ್ಲಿ ಎಂದು ಲೇವಡಿ ಮಾಡಿದ್ದಾರೆ.

ಚನ್ನಿ ಸ್ಪರ್ಧಿಸುತ್ತಿರುವ ಚಮ್ಕೌರ್ ಸಾಹಿಬ್ ಮತ್ತು ಭದೌರ್ ಕ್ಷೇತ್ರಗಳಲ್ಲಿ ಆಪ್ ಮೂರು ಬಾರಿ ಸಮೀಕ್ಷೆ ನಡೆಸಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಚಮ್ಕೌರ್‌ನಲ್ಲಿ ತಮ್ಮ ಪಕ್ಷವು ಶೇಕಡಾ 52 ರಷ್ಟು ಮತಗಳನ್ನು ಪಡೆಯುತ್ತದೆ. ಚನ್ನಿ ಶೇಕಡಾ 35 ರಷ್ಟು ಮತಗಳನ್ನು ಪಡೆಯುತ್ತಾರೆ. ಭದೌರ್‌ನಲ್ಲಿ ಎಎಪಿ ಶೇಕಡಾ 48 ರಷ್ಟು ಮತಗಳನ್ನು ಪಡೆಯುತ್ತದೆ ಮತ್ತು ಚನ್ನಿ ಶೇಕಡಾ 30 ರಷ್ಟು ಮತಗಳನ್ನು ಪಡೆಯುತ್ತಾರೆ ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಮರಳು ಗಣಿಗಾರಿಕೆ ಆರೋಪದ ಮೇಲೆ ಪಂಜಾಬ್ ಸರ್ಕಾರದ ತನಿಖೆಯ ಬಗ್ಗೆ ಕೇಜ್ರಿವಾಲ್ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದರು. “ಚನ್ನಿ ಸಾಹೇಬರು ಸ್ವತಃ ತನಿಖೆ ಮಾಡಿದರೂ ಭಗವಂತ್ ಮಾನ್ ಸಿಎಂ ಆದಾಗ ಮರಳು ಗಣಿಗಾರಿಕೆ ಬಗ್ಗೆ ನ್ಯಾಯಯುತ ತನಿಖೆ ನಡೆಸುತ್ತಾರೆ. ಹಣವೆಲ್ಲ ಚನ್ನಿಗೆ ಸೇರಿದ್ದು ಎಂದು ಆತನ ಸಂಬಂಧಿ ತಪ್ಪೊಪ್ಪಿಕೊಂಡಿದ್ದರೂ ಇಡಿ ಆತನನ್ನು ಏಕೆ ಬಂಧಿಸುತ್ತಿಲ್ಲ? ಎಂದು ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

Tags: APPArvind KejriwalBhagwant MannCharanjit singh channiDelhi CMPPunjabpunjab election 2022Rahul Gandhiಅರವಿಂದ್‌ ಕೇಜ್ರಿವಾಲ್‌ಆಪ್‌ಕಾಂಗ್ರೆಸ್‌ಚರಣ್​​ಜೀತ್ ಸಿಂಗ್ ಚನ್ನಿದೆಹಲಿ ಸಿಎಂಪಂಜಾಬ್‌ ಚುನಾವಣೆಭಗವಂತ್ ಮಾನ್ರಾಹುಲ್‌ ಗಾಂಧಿ
Previous Post

ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವುದು ದೇಶ ದ್ರೋಹದ ಕೆಲಸ- ಸಿದ್ದರಾಮಯ್ಯ

Next Post

ನಿರ್ದೇಶನ ಅಂದ್ರೆ ತಪಸ್ಸು ಇದ್ದಂಗೆ- ಹರಿಸಂತು

Related Posts

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..
Top Story

ಮಹಿಳಾ ಮೀಸಲಾತಿ ಬಿಲ್‌ ವಿರೋಧಿಸುವವರನ್ನು ದೇಶದ ನಾರಿಯರು ಕ್ಷಮಿಸೋದಿಲ್ಲ : ವಿಪಕ್ಷಗಳಿಗೆ ಮೋದಿ ಮಾರ್ಮಿಕ ಸಂದೇಶ..

by ಪ್ರತಿಧ್ವನಿ
April 16, 2026
0

ನವದೆಹಲಿ :  ಕೇಂದ್ರ ಸರ್ಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದೆ. ವಿಪಕ್ಷಗಳ ಗದ್ದಲ ಹಾಗೂ ಕೋಲಾಹಲದ ನಡುವೆಯೇ ಕೇಂದ್ರ ಸಚಿವ ಅರ್ಜುನ್‌...

Read moreDetails
ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

April 16, 2026
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

April 14, 2026
Next Post
ನಿರ್ದೇಶನ ಅಂದ್ರೆ ತಪಸ್ಸು ಇದ್ದಂಗೆ- ಹರಿಸಂತು

ನಿರ್ದೇಶನ ಅಂದ್ರೆ ತಪಸ್ಸು ಇದ್ದಂಗೆ- ಹರಿಸಂತು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada