ಕರ್ನಾಟಕ ರತ್ನ ಪವರ್ಸ್ಟಾರ್ ಡಾ. ಪುನೀತ್ ರಾಜಕುಮಾರ್ ಜನ ಮಾನಸದಲ್ಲಿ ಇನ್ನು ಅಚ್ಚಲಿದಿದ್ಧಾರೆ. ಅವರ ನೆನಪು ಇನ್ನೂ ಯಾರ ಮನಸಲ್ಲೂ ಮನದಲ್ಲೂ ಮಾಸಿಲ್ಲ ಹೀಗಿರುವಾಗಲೇ ಅವರ ಅಂಗ ರಕ್ಷಕರಾಗಿದ್ದ ಚಲಪತಿ ಅಪ್ಪು ನೆನಪಲ್ಲೇ ಊರು ತೊರೆದಿದ್ದಾರೆ.
ಹೌದು, ಹಲವು ಸಭೆ ಸಮಾರಂಭಗಳಲ್ಲಿ ಅಭಿಮಾನಿಗಳು ಎಷ್ಟೇ ಇದ್ದರೂ ಸಹ ಅದನ್ನು ಲೆಕ್ಕಿಸದೆ ಅಪ್ಪುರವರ ಮೇಲೆ ಒಂದು ನೊಣವನ್ನು ಅವರ ಮೈ ಮೇಲೆ ಕೂರಲು ಸಹ ಬಿಡುತ್ತಿರಲಿಲ್ಲ. ಅಂತಹ ಚಲಪತಿ ಅಪ್ಪು ಇಲ್ಲದ ನೋವಿನಲ್ಲೇ ಕೆಲಸ ತೊರೆದಿದ್ದಾರೆ.
ಕಳೆದ ಆರು ತಿಂಗಳಿನಿಂದ ಅಪ್ಪು ಇಲ್ಲದಿರದ ನೋವು ಚಲಪತಿರವರನ್ನು ತೀವ್ರವಾಗಿ ಭಾದಿಸುತ್ತಿದ್ದು ಅವರು ಇಲ್ಲದ ಮನೆಯಲ್ಲಿ ನನಗೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ.
ಅಪ್ಪು ಸರ್ ನಮನ್ನೆಲ್ಲ ಬಿಟ್ಟು ಹೋದ ನಂತರ ನಾನು ಅಶ್ವಿನಿ ಮೇಡಂ ಬಳಿ ಕೆಲಸ ಮಾಡಿದೆ. ನಾನಗಲ್ಲೆ ಕೆಲಸ ಬಿಟ್ಟು ಒಂದು ತಿಂಗಳಾಗಿದೆ. ಅಪ್ಪು ನೆನಪಿನಲ್ಲೇ ದಿನ ಕಳೆಯುತ್ತಿದ್ದೇನೆ ಅವರ ಮನೆಯಲ್ಲಿ ನಾನು ಮಾಡುವಂತಹ ಕೆಲಸ ಏನು ಇರಲಿಲ್ಲ ನನಗೆ ಸುಮ್ಮನೆ ಕೂರುವುದು ಕಷ್ಟವಾಗಿತ್ತು ಹಾಗಾಗಿ ಕೆಲಸ ತೊರೆದು ಊರಿಗೆ ಬಂದಿದ್ಧೇನೆ ಅಪ್ಪು ಸರ್ ನನನ್ನು ಅವರ ಸಹೋದರನಂತೆ ನೋಡಿಕೊಳ್ಳುತ್ತಿದ್ದರು ಎಂದು ಚಲಪತಿ ಭಾವುಕರಾಗಿ ಮಾತನಾಡಿದ್ದಾರೆ.