ಬೆಳಗಾವಿ: ರೈತರು ಬೆಳೆದ ಫಸಲಿಗೆ ಒಳ್ಳೆಯ ಬೆಲೆ ಸಿಕ್ಕರೆ ರೈತರು ಪ್ರತಿಭಟನೆ ಮಾಡುವುದಿಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲರು ಹೇಳಿದ್ದಾರೆ. ಹೋರಾಟ ಎಂಬುದು ಒಂದು ನಿರಂತರ ಪ್ರಕ್ರಿಯೆ ಎಂದಿರುವ ಸಚಿವರು, ಬೆಲೆ ಎಂಬುದನ್ನು ಕೇಂದ್ರ ಸರ್ಕಾರ ನಿಗದಿ ಮಾಡುತ್ತದೆ.ಕೇಂದ್ರ ಸರ್ಕಾರ MSP ಜಾರಿಗೆ ಮಾಡಬೇಕಿತ್ತು.ರೈತರಿಗೆ ಬೆಲೆ ನಿಗದಿ ಆದಷ್ಟು ಬೇಗನೆ ಸಿಗಲಿ ಎಂದಿದ್ದಾರೆ.
ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರ ಕೂಡಿ ಮಾಡಲಿ ಎಂದಿರುವ ಸಚಿವರು, ಇದರಿಂದ ಪ್ರತಿಭಟನೆ ಎಂಬುದು ನಿಲ್ಲುತ್ತದೆ. ನಂದಿ ಸಕ್ಕರೆ ಕಾರ್ಖಾನೆ ದೇಶದಲ್ಲಿ ಮಾದರಿ ಸಕ್ಕರೆ ಕಾರ್ಖಾನೆ ಆಗಿದೆ. ಆದರೆ ಇವತ್ತು 60 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಈ ರೀತಿ ಅವ್ಯವಹಾರ ನಡೆಸಬಾರದು. ಸಂಸ್ಥೆಗಳು ಎಂಬುದು ಹಾಲು ಕೊಡುವ ಹಸು ಇದ್ದಹಾಗೆ. ಹಾಲು ಕೊಡುತ್ತದೆ ಎಂದು ಕೆಚ್ಚಲು ಕೊಯ್ಯಬಾರದು ಎಂದಿದ್ದಾರೆ.
ಸಕ್ಕರೆ ಕಾರ್ಖಾನೆ ವಿರುದ್ಧ ದೂರು ನೀಡಿದ ರೈತರಿಗೆ ಒಂದು ಲಕ್ಷ ರೂಪಾಯಿ ಘೋಷಣೆ ಮಾಡಿರುವ ಸಚಿವರು, ತೂಕದಲ್ಲಿ ಮೋಸ ಸಾಬೀತಾದರೆ ಅಂತಹ ರೈತರಿಗೆ ಸರ್ಕಾರದಿಂದ ಒಂದು ಲಕ್ಷ ರೂಪಾಯಿ ಹಣವನ್ನು ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಯಿಂದ ನೀಡಲಾಗುವುದು ಎಂದಿದ್ದಾರೆ. ಸಕ್ಕರೆ ಕಾರ್ಖಾನೆ ತ್ಯಾಜ್ಯದ ನೀರು ಹರಿಸಿದರೆ ಅದಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿದೆ.ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.ರೈತರು ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಗಳ ಮಾಲೀಕನಿಗೆ ಹೆದರುವ ಅಗತ್ಯವಿಲ್ಲ ಅಂತಾನೂ ತಿಳಿಸಿದ್ದಾರೆ.
ಸಕ್ಕರೆ ಇಲಾಖೆಯಿಂದ ಅವರ ಕಬ್ಬು ನಾವು ಕಟಾವು ಮಾಡಲಾಗುವುದು.ನಾವು ಆ ರೈತರಿಗೆ ನೆರವು ಆಗುತ್ತೇವೆ.ರೈತರು ಸಕ್ಕರೆ ಕಾರ್ಖಾನೆಗಳು ಮೊಸ ಮಾಡಿದರೆ ದೂರು ನೀಡಿ ಎಂದು ಬೆಳಗಾವಿಯಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲರು ಹೇಳಿದ್ದಾರೆ.