• Home
  • About Us
  • ಕರ್ನಾಟಕ
Wednesday, November 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು

ಪ್ರತಿಧ್ವನಿ by ಪ್ರತಿಧ್ವನಿ
November 3, 2025
in Top Story, ಕ್ರೀಡೆ, ವಿಶೇಷ
0
ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು
Share on WhatsAppShare on FacebookShare on Telegram

ಭಾರತೀಯರಿಗೆ ಕ್ರಿಕೆಟ್‌ ಎನ್ನುವುದು ಕೇವಲ ಆಟವಲ್ಲ ಅದೊಂದು ಭಾವನಾತ್ಮಕ ಸಂಬಂಧ. ದೇಶದ ಕೋಟ್ಯಂತರ ಜನರ ನಾಡಿಮಿಡಿತದಲ್ಲಿ ಕ್ರಿಕೆಟ್‌ ಸೇರಿಕೊಂಡಿದ್ದು, ಯುದ್ಧ ಹೊರತು ಪಡಿಸಿದರೆ ಬಹುಶಃ ಭಾರತೀಯರೆಲ್ಲಾ ಒಗ್ಗೂಡುವುದು ನಮ್ಮ ಕ್ರಿಕೆಟ್‌ ತಂಡದ ಗೆಲುವಿಗಾಗಿ ಮಾತ್ರ. ಇದೀಗ ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಭಾರತದ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಗರ್ಘಿಸಿದ ಭಾರತದ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ.

ADVERTISEMENT

ಎರಡು ಬಾರಿ ಫೈನಲ್‌ನಲ್ಲೇ ಸೋಲು ಕಂಡಿದ್ದ ಭಾರತ

ವಿಶ್ವಕಪ್​ ಗೆಲ್ಲಬೇಕು ಎನ್ನುವುದು ಭಾರತ ಮಾತ್ರವಲ್ಲ ಎಲ್ಲಾ ಕ್ರಿಕೆಟ್‌ ತಂಡಗಳ ಬಹುದೊಡ್ಡ ಕನಸು. ಅಂತೆಯೇ ಭಾರತದ ಮಹಿಳಾ ತಂಡ ಈ ಬಾರಿ ಚೊಚ್ಚಲ ಏಕದಿನ ವಿಶ್ವಕಪ್​ ಟ್ರೋಫಿ ಮುಡಿಗೇರಿಸಿಕೊಳ್ಳುವ ಮೂಲಕ ಅಸಂಖ್ಯಾತ ಕ್ರಿಕೆಟ್‌ ಪ್ರೇಮಿಗಳ ಕನಸನ್ನು ನನಸು ಮಾಡಿದ್ದಾರೆ. ಈ ಹಿಂದೆ ಎರಡು ಬಾರಿ ಫೈನಲ್ ಪ್ರವೇಶಿಸಿದ್ದ ಭಾರತದ ಮಹಿಳಾ ತಂಡ ಕಪ್‌ ಗೆಲ್ಲುವಲ್ಲಿ ವಿಫಲವಾಗಿತ್ತು. 2005 ಹಾಗೂ 2017ರಲ್ಲಿ ಏಕದಿನ ವಿಶ್ವಕಪ್​ ಅಂತಿಮ ಹಣಾಹಣಿಯಲ್ಲಿ ಸೋಲು ಕಂಡಿದ್ದ ಭಾರತ ತಂಡ ಬಾರಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ವಿಶ್ವಕಪ್ ಗೆದ್ದ ನಾಲ್ಕನೇ ದೇಶ ಭಾರತ

ಈ ಬಾರಿ ಭಾರತದ ಮಹಿಳಾ ತಂಡ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ವಿಶ್ವಕಪ್ ಗೆದ್ದ ನಾಲ್ಕನೇ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಿಳಾ ವಿಶ್ವಕಪ್‍ 1973ರಲ್ಲಿ ಆರಂಭವಾಗಿದ್ದು, ಈವರೆಗೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಹಾಗೂ ನ್ಯೂಜಿಲ್ಯಾಂಡ್ ಗೆಲುವು ಸಾಧಿಸಿ ಕಪ್‌ ತಮ್ಮದಾಗಿಸಿಕೊಂಡಿದ್ದರು. ಇದೀಗ ಭಾರತದ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ವಿಶ್ವಕಪ್ ಗೆದ್ದ ನಾಲ್ಕನೇ ದೇಶವಾಗಿ ಹೊರಹೊಮ್ಮಿದೆ. ಇದು ಕೇವಲ ಕ್ರಿಕೆಟ್‌ ತಂಡ, ಕ್ರಿಕೆಟ್‌ ಪ್ರೇಮಿಗಳು ಮಾತ್ರವಲ್ಲದೇ ಸಂಪೂರ್ಣ ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ.

ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಗರ್ಘಿಸಿದ ಭಾರತದ ವನಿತೆಯರು

ಟಾಸ್ ಸೋತ ಹರ್ಮನ್​ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಿದರು. ಮೈದಾನಕ್ಕೆ ಪ್ರವೇಶಿಸುತ್ತಿದ್ದಂತೆ ಆರ್ಭಟಿಸಲು ಆರಂಭಿಸಿದ ಭಾರತದ ವನಿತೆಯರು ಆರಂಭದಲ್ಲೇ ಗೆಲುವಿನ ಮುನ್ಸೂಚನೆ ನೀಡಿದ್ದರು. ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿದ್ದು, ಮೊದಲ ವಿಕೆಟ್​ ಪಥನಕ್ಕೆ 104 ರನ್​ಗಳ ಜೊತೆಯಾಟ ನಡೆಸಿದ್ದರು. ಶಫಾಲಿ ವರ್ಮಾ ಜೊತೆಗಿನ ಜೊತೆಯಾಟದಲ್ಲಿ ಉತ್ತಮ ಸಾಥ್‌ ನೀಡಿದ್ದ ಸ್ಮೃತಿ ಮಂದಾನ 45 ರನ್​ಗಳಿಸಿ ಕ್ಲೋಯ್‌ ಟ್ರಯಾನ್‌ ಬೌಲಿಂಗ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಬಳಿಕ ಅಖಾಡಕ್ಕಿಳಿದ ಶಫಾಲಿ ಮತ್ತು ಜೆಮಿಮಾ ರಾಡ್ರಿಗಸ್‌, 62 ರನ್​ಗಳ ಜೊತೆಯಾಟವಾಡಿದ್ದು, ಒಟ್ಟಾರೆ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಬರೋಬ್ಬರಿ 298 ರನ್‌ಗಳ ಟಾರ್ಗೆಟ್‌ ನೀಡಿದರು. ಏಳು ವಿಕೆಟ್‌ಗಳ ನಷ್ಟಕ್ಕೆ ಭಾರತ ಐವತ್ತು ಓವರ್‌ಗಳಲ್ಲಿ ಮೂನ್ನೂರರ ಸಮೀಪದ ಗುರಿಯನ್ನು ದಕ್ಷಿಣ ಆಫ್ರಿಕಾ ತಂಡಕ್ಕೆ ನೀಡಿದರು.

ಟೀಂ ಇಂಡಿಯಾ ಬೌರ್ಲಸ್‌ಗಳ ಅಬ್ಬರಕ್ಕೆ ನಡುಗಿದ ದಕ್ಷಿಣ ಆಫ್ರಿಕಾ

ಭರ್ಜರಿ ಬ್ಯಾಟಿಂಗ್‌ ಮಾಡಿದ ಭಾರತದ ಮಹಿಳಾ ತಂಡ ಬೌಲಿಂಗ್‌ನಲ್ಲೂ ಮೋಡಿ ಮಾಡಿದ್ದು, ಟೀಂ ಇಂಡಿಯಾ ಬೌರ್ಲಸ್‌ಗಳ ಅಬ್ಬರಕ್ಕೆ ದಕ್ಷಿಣ ಆಫ್ರಿಕಾದ ಆಟಗಾರರು ಮಂಡಿಯೂರಿದ್ದಾರೆ. ಭಾರತ ತಂಡದ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮಾ, ಶೆಫಾಲಿ ವರ್ಮಾ ಹಾಗೂ ಶ್ರೀ ಚರಣಿ ಬ್ಯಾಕ್‌ ಟು ಬ್ಯಾಕ್‌ ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು ಒಟ್ಟಾರೆ ದಕ್ಷಿಣ ಆಫ್ರಿಕಾ ಎದುರು ಗರ್ಘಿಸಿದ ಭಾರತದ ವನಿತೆಯರು 52 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತದ ಕ್ರಿಕೆಟ್‌ ಪ್ರೇಮಿಗಳ ಬಹು ವರುಷದ ಕನಸನ್ನು ನನಸು ಮಾಡಿದ್ದಾರೆ.

Tags: ICCICC Women’s World CupIndiaIndian women cricket teamsmriti mandhanaSouth AfricaWomen’s World CupWorld Cup
Previous Post

Darshan Case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ಗೆ ಇಂದು ಬಿಗ್‌ ಡೇ..

Next Post

ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

Related Posts

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 12, 2025
0

ನವದೆಹಲಿ: ಭಾರೀ ಕುತೂಹಲ ಮೂಡಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಎರಡೂ ಹಂತದ ಮತದಾನ ಪೂರ್ಣಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಕೂಡ ಪ್ರಕಟಗೊಂಡಿದೆ. ನಿನ್ನೆ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ...

Read moreDetails
ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

November 12, 2025
ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ

ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ

November 12, 2025
ಧರ್ಮಸ್ಥಳ ಕೇಸ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

ಧರ್ಮಸ್ಥಳ ಕೇಸ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

November 12, 2025
ಸಂತೋಷ್‌ ಲಾಡ್‌ V/S ವಿಜಯೇಂದ್ರ ವಾಕ್ಸಮರ: ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕಾಂಗ್ರೆಸ್‌ ಸಚಿವ

ಸಂತೋಷ್‌ ಲಾಡ್‌ V/S ವಿಜಯೇಂದ್ರ ವಾಕ್ಸಮರ: ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕಾಂಗ್ರೆಸ್‌ ಸಚಿವ

November 12, 2025
Next Post
ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

Recent News

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌
Top Story

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

by ಪ್ರತಿಧ್ವನಿ
November 12, 2025
ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?
Top Story

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

by ಪ್ರತಿಧ್ವನಿ
November 12, 2025
ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ
Top Story

ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ

by ಪ್ರತಿಧ್ವನಿ
November 12, 2025
ಧರ್ಮಸ್ಥಳ ಕೇಸ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು
Top Story

ಧರ್ಮಸ್ಥಳ ಕೇಸ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

by ಪ್ರತಿಧ್ವನಿ
November 12, 2025
ಸಂತೋಷ್‌ ಲಾಡ್‌ V/S ವಿಜಯೇಂದ್ರ ವಾಕ್ಸಮರ: ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕಾಂಗ್ರೆಸ್‌ ಸಚಿವ
Top Story

ಸಂತೋಷ್‌ ಲಾಡ್‌ V/S ವಿಜಯೇಂದ್ರ ವಾಕ್ಸಮರ: ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕಾಂಗ್ರೆಸ್‌ ಸಚಿವ

by ಪ್ರತಿಧ್ವನಿ
November 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನನಗೆ ನಂಬಿಕೆ ಇಲ್ಲ-ಡಿಸಿಎಂ ಡಿ.ಕೆ ಶಿವಕುಮಾರ್‌

November 12, 2025
ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

November 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!