• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಮೂರನೇ ಅಲೆ ನಡುವೆಯೂ ಚುನಾವಣೆ ನಡೆಸಲು ಪ್ರಶಾಂತ್ ಕಿಶೋರ್ ಮಾಸ್ಟರ್‌ ಪ್ಲಾನ್!

ಪ್ರತಿಧ್ವನಿ by ಪ್ರತಿಧ್ವನಿ
January 7, 2022
in ರಾಜಕೀಯ
0
ಮೂರನೇ ಅಲೆ ನಡುವೆಯೂ ಚುನಾವಣೆ ನಡೆಸಲು ಪ್ರಶಾಂತ್ ಕಿಶೋರ್ ಮಾಸ್ಟರ್‌ ಪ್ಲಾನ್!
Share on WhatsAppShare on FacebookShare on Telegram

ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್  ಹಾಗೂ ಓಮಿಕ್ರಾನ್ ಪ್ರಕರಣಗಳು ಮೂರನೇ ಅಲೆಗೆ ಮುನ್ನುಡಿಯನ್ನು ಬರೆದಿವೆ. ಆದರೆ, ಈ ಮಧ್ಯೆ ಪಂಚರಾಜ್ಯ ಚುನಾವಣೆಗಳು ಸಹ ಸಮೀಪಿಸುತ್ತಿದ್ದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಸುವಂತೆ ಸಲಹೆ ನೀಡಿದ್ದಾರೆ.

ADVERTISEMENT

ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರ ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಗಳಿಗೆ ಇನ್ನು ಚುನಾವಣಾ ಆಯೋಗ ದಿನಾಂಕವನ್ನ ಘೋಷಿಸಿಲ್ಲ. ಈ ಪಂಚ ರಾಜ್ಯಗಳಲ್ಲಿನ ಕೋವಿಡ್ ಸ್ಥಿತಿಗತಿ ಹಾಗೂ ಲಸಿಕೆ ಅಭಿಯಾನದ ಕುರಿತು ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ಚುನಾವಣಾ ಆಯೋಗದ ಮುಂದೆ ವಿವರಿಸಿದ್ದರು. ಈ ರಾಜ್ಯಗಳಲ್ಲಿ ಲಸಿಕೆ ಅಭಿಯಾನವು ಕುಂಟುತ್ತಾ ಸಾಗಿದ್ದು ಲಸಿಕೆ ಅಭಿಯಾನವನ್ನು ಹೆಚ್ಚಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಶಾಂತ್, ʻಚುನಾವಣೆ ನಡೆಯುವ ರಾಜ್ಯಗಳಲ್ಲಿ ಆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.80ರಷ್ಟು ಜನರಿಗೆ ಲಸಿಕೆ ನೀಡಬೇಕು ಎಂದು ಆಯೋಗ ಅಲ್ಲಿನ ರಾಜ್ಯಸರ್ಕಾರಗಳಿಗೆ ಆದೇಶಿಸಬೇಕು. ದೇಶದಲ್ಲಿ ಸೋಂಕು ಹೆಚ್ಚುತ್ತಿರುವ ಸಮಯದಲ್ಲಿ ಚುನಾವಣೆ ನಡೆಸಲು ಇದು ಸುರಕ್ಷಿತ ಮಾರ್ಗ. ಸಾಂಕ್ರಾಮಿಕವು ಒಂದು ಶಾಪವಾಗಿಬಿಟ್ಟಿದೆ ಮತ್ತು ಜನರು ಸಹ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೇ ಇರುವುದು ದೇಶದಲ್ಲಿ ಕೋವಿಡ್ ಉಲ್ಬಣವಾಗುವುದಕ್ಕೆ ಕಾರಣʼ ಎಂದು ಟ್ವೀಟ್ ಮಾಡಿದ್ದಾರೆ.

https://twitter.com/PrashantKishor/status/1479353539222642689?s=20

ದೇಶದಲ್ಲಿ ಹೆಚ್ಚುತ್ತಿರುವ ಸೋಂಕಿನ ನಡುವೆ ಚುನಾವಣೆಯನ್ನು ಕೆಲವು ತಿಂಗಳುಗಳ ಕಾಲ ಮುಂದೂಡುವಂತೆ ಆಯೋಗಕ್ಕೆ ಅಲಹಾಬಾದ್ ಹೈಕೋರ್ಟ್ ಸಲಹೆ ನೀಡಿತ್ತು ಮತ್ತು ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿನ ಕೋವಿಡ್ ಸ್ಥಿತಿಗತಿ ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆಯನ್ನ ನೀಡಿತ್ತು.

ಈ ಪಂಚರಾಜ್ಯಗಳಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ನಡೆಸಿದ ಸಮಾವೇಶಗಳು ಕೋವಿಡ್ ಸೂಪರ್ ಸ್ರ್ಪೆಡರ್ ಆಗಲಿವೆ ಎಂದು ವ್ಯಾಪಕವಾಗಿ ಟೀಕೆಗಳು ಕೇಳಿ ಬಂದ ನಂತರ ರಾಜಕೀಯ ಪಕ್ಷಗಳು ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ರದ್ದುಗೊಳಿಸಿದ್ದವು.

ಆದರೆ, ಕೇಂದ್ರ ಸರ್ಕಾರವು ಚುನಾವಣಾ ಆಯೋಗಕ್ಕೆ ಓಮಿಕ್ರಾನ್ ಸೋಂಕಿನ ಪ್ರಕರಣಗಳು ಅಷ್ಟಾಗಿ ಕಾಣಿಸಿಕೊಳ್ಳದ ಕಾರಣ ಚುನಾವಣಾ ರ್ಯಾ್ಲಿಗಳ ಮೇಲೆ ಹೇರಿರುವ ನಿಷೇಧವನ್ನು ಹಿಂಪಡೆಯುವಂತೆ ಮನವಿ ಮಾಡಿದೆ.

ಡೆಲ್ಟಾಗೆ ಹೋಲಿಸಿದರೆ ಲಸಿಕೆ ಹಾಕಿಸಿಕೊಂಡವರಲ್ಲಿ ಓಮಿಕ್ರಾನ್ ಸೋಂಕಿನ ತೀವ್ರತೆ ಅಷ್ಟಾಗಿ ಪರಿಣಾಮವನ್ನು ಬೀರುವುದಿಲ್ಲ. ಆದರೆ, ರೂಪಾಂತರಿಯನ್ನು ಕಡೆಗಣಿಸುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹಳೇ ರೂಪಾಂತರಿಗಳಂತೆ ಓಮಿಕ್ರಾನ್ ಸಹ ಜನರನ್ನು ಆಸ್ಪತ್ರೆಗೆ ಅಲೆಯುವಂತೆ ಮಾಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಟೆಡ್ರೋಸ್ ಅದನಮ್ ಹೇಳಿದ್ದಾರೆ.


Tags: BJPCongress PartyCovid 19ಉತ್ತರಪ್ರದೇಶಉತ್ತರಾಖಂಡ್ಕರೋನಾಕೋವಿಡ್-19ಚುನಾವಣೆನರೇಂದ್ರ ಮೋದಿಪಂಜಾಬ್ಬಿಜೆಪಿಮಣಿಪುರಶಾಂತ್ ಕಿಶೋರ್
Previous Post

ಸೆನ್ಸಾರ್ ಮುಂದೆ ರಾಜಮಾರ್ತಾಂಡ : ಚಿರು ಸರ್ಜಾ ಚಿತ್ರ ಸದ್ಯದಲ್ಲೇ ತೆರೆಗೆ

Next Post

ದಾಖಲಾತಿಗಾಗಿ ದುಂಬಾಲು ಬೀಳುತ್ತಿರುವ ಪೋಷಕರು : ಭೀಮಾತೀರದ ಈ ಸರ್ಕಾರಿ ಮಾದರಿ ಶಾಲೆ ಹೇಗಿದೆ ಗೊತ್ತೇ?

Related Posts

DK Shivakumar Oath Taking Ceremony
Top Story

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಹೇಗಿರುತ್ತೆ : ಡಿಕೆ ಶಿವಕುಮಾರ್‌ ಏನಂದ್ರು..?

by ಪ್ರತಿಧ್ವನಿ
May 31, 2026
0

ಬೆಂಗಳೂರು : ಜೂನ್ 3ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮುಗಿದ ಬಳಿಕ ರೇಸ್ ಕೋರ್ಸ್ ರಸ್ತೆ ಬಳಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ...

Read moreDetails
“ಸಿದ್ದರಾಮಯ್ಯ ಅವ್ರನ್ನ ಡೀಡ್ ನಲ್ಲಿನ ವೈಫಲ್ಯಕ್ಕಾಗಿ ಟೀಕಿಸಬಹುದು, ಆದ್ರೆ ಇಂಟೆಂಟ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರೆ ಅನ್ಯಾಯ ಮಾಡಿದಂತೆ”

“ಸಿದ್ದರಾಮಯ್ಯ ಅವ್ರನ್ನ ಡೀಡ್ ನಲ್ಲಿನ ವೈಫಲ್ಯಕ್ಕಾಗಿ ಟೀಕಿಸಬಹುದು, ಆದ್ರೆ ಇಂಟೆಂಟ್ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರೆ ಅನ್ಯಾಯ ಮಾಡಿದಂತೆ”

May 31, 2026
ಬಂಗಾಳದಲ್ಲಿ ಹೆಚ್ಚಾಯ್ತು ಹಿಂಸಾಚಾರ : ಟಿಎಂಸಿ ಸಂಸದರ ಮೇಲೆ ಭೀಕರ ಹಲ್ಲೆ..

ಬಂಗಾಳದಲ್ಲಿ ಹೆಚ್ಚಾಯ್ತು ಹಿಂಸಾಚಾರ : ಟಿಎಂಸಿ ಸಂಸದರ ಮೇಲೆ ಭೀಕರ ಹಲ್ಲೆ..

May 31, 2026
ಸಿದ್ದರಾಮಯ್ಯ ರಾಜ್ಯಸಭೆಯಲ್ಲಿದ್ದು ಲೋಹಿಯಾ ಕನಸುಗಳ ಸಾಕಾರಕ್ಕೆ ಶ್ರಮಿಸಬೇಕು : ಮೋಹನ್‌ ಕೊಂಡಜ್ಜಿ ಒತ್ತಾಯ..

ಸಿದ್ದರಾಮಯ್ಯ ರಾಜ್ಯಸಭೆಯಲ್ಲಿದ್ದು ಲೋಹಿಯಾ ಕನಸುಗಳ ಸಾಕಾರಕ್ಕೆ ಶ್ರಮಿಸಬೇಕು : ಮೋಹನ್‌ ಕೊಂಡಜ್ಜಿ ಒತ್ತಾಯ..

May 31, 2026
ನಿಯೋಜಿತ ಸಿಎಂ ಡಿ ಕೆ ಶಿವಕುಮಾರ್‌ಗೆ ಸಂತೋಷ್‌ ಲಾಡ್‌ ಶುಭಾಶಯ : ಸಚಿವ ಸ್ಥಾನದ ಬಗ್ಗೆ ಏನಂದ್ರು..?

ನಿಯೋಜಿತ ಸಿಎಂ ಡಿ ಕೆ ಶಿವಕುಮಾರ್‌ಗೆ ಸಂತೋಷ್‌ ಲಾಡ್‌ ಶುಭಾಶಯ : ಸಚಿವ ಸ್ಥಾನದ ಬಗ್ಗೆ ಏನಂದ್ರು..?

May 31, 2026
Next Post
ದಾಖಲಾತಿಗಾಗಿ ದುಂಬಾಲು ಬೀಳುತ್ತಿರುವ ಪೋಷಕರು : ಭೀಮಾತೀರದ ಈ ಸರ್ಕಾರಿ ಮಾದರಿ ಶಾಲೆ ಹೇಗಿದೆ ಗೊತ್ತೇ?

ದಾಖಲಾತಿಗಾಗಿ ದುಂಬಾಲು ಬೀಳುತ್ತಿರುವ ಪೋಷಕರು : ಭೀಮಾತೀರದ ಈ ಸರ್ಕಾರಿ ಮಾದರಿ ಶಾಲೆ ಹೇಗಿದೆ ಗೊತ್ತೇ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada