• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಪ್ರಜ್ವಲ್​ ಪೆನ್​​ ಡ್ರೈವ್​.. ಪ್ರಚಾರಕ್ಕಾಗಿ ತನಿಖೆ.. ತಪ್ಪಿತಸ್ಥರಿಗೆ ಶಿಕ್ಷೆ ಅನುಮಾನ..

ಪ್ರತಿಧ್ವನಿ by ಪ್ರತಿಧ್ವನಿ
May 9, 2024
in ಕರ್ನಾಟಕ
0
ಸಿಎಂ ಗೆ ಈಗ ಒಕ್ಕಲಿಗರ ಮೇಲೆ ಮಮತೆ ಬಂದಿದೆ.. ಒಂದು ಕಾಲದಲ್ಲಿ ಸಿದ್ದರಾಮಯ್ಯ ದೇವೇಗೌಡ್ರ ಭಜನೆ ಮಾಡ್ತಿದ್ರು : HDK ಕಿಡಿ
Share on WhatsAppShare on FacebookShare on Telegram

ಕಾಂಗ್ರೆಸ್ ಸರ್ಕಾರದ ವಿರುದ್ಧ ದೂರು ನೀಡಲು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಿರ್ಧಾರ. ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ರಾಜ್ಯಪಾಲರಿಗೆ ಮನವಿ ಕೊಡ್ತಿದ್ದೇವೆ. SIT ತನಿಖೆ ಯಾವ ರೀತಿ ಹಾದಿ ತಪ್ತಾ ಇದೆ ಅನ್ನೋದನ್ನು ರಾಜ್ಯಪಾಲರ ಗಮನಕ್ಕೆ ತರ್ತೇವೆ ಎಂದಿದ್ದಾರೆ. ನಿಜಕ್ಕೂ ಈ ತನಿಖೆಗೆಯಿಂದ ಯಾರಿಗೆ ಶಿಕ್ಷೆ ಆಗಬೇಕು ಅವರಿಗೆ ಆಗುತ್ತಾ ಅನ್ನೋ ಅನುಮಾನವಿದೆ. ನಾನು ಮೊದಲ ದಿನದಿಂದಲೂ ಹೇಳ್ತಿದ್ದೇನೆ, ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು ಅಂತ. ಅದರೆ ಇಲ್ಲಿ ನಡೆಯುತ್ತಿರುವ ವಾತಾವರಣ ನೋಡಿದರೆ, ಇವರಿಗೆ ಶಿಕ್ಷೆ ಕೊಡಿಸುವುದಕ್ಕಿಂದ ಪ್ರಚಾರ ಪ್ರೀತಿ ಇದೆ ಎನಿಸುತ್ತದೆ ಎಂದಿದ್ದಾರೆ.

ADVERTISEMENT

ಈಗಾಗಲೇ 15 ದಿವಸ ಆಯ್ತು, ತನಿಖೆಯಲ್ಲಿ ಇವರ ಸಾಧನೆ ಏನು..? ಎಂದು ಪ್ರಶ್ನೆ ಮಾಡಿರುವ ಕುಮಾರಸ್ವಾಮಿ, ನಿನ್ನೆ ಸಚಿವ ಕೃಷ್ಣ ಬೈರೇಗೌಡರು, ನಮ್ಮ ಮಂಡ್ಯ ಸಚಿವರಾದ ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಎಂಸಿ ಸುಧಾಕರ್ ಎಲ್ಲಾ ಒಕ್ಕಲಿಗ ಮಂತ್ರಿಗಳು ಬಂದಿದ್ದಾರೆ. ಈ ಹಿಂದೆ ಇದೇ ರೀತಿ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದಾಗಲೂ ಬಿಜೆಪಿ ಸ್ನೇಹಿತರು ಒಕ್ಕಲಿಗರನ್ನ ಛೂ ಬಿಟ್ಟಿದ್ದರು. ಈಗಲೂ ಅದೇ ತಂತ್ರಗಾರಿಕೆಯನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಕೆಕೆ ಗೆಸ್ಟ್ ಹೌಸ್​ನಲ್ಲಿ ಸಂತ್ರಸ್ತರನ್ನ ಇಟ್ಟಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಿಡ್ನಾಪ್ ಆಗಿದ್ದಾರೆ ಎನ್ನಲಾದ ಮಹಿಳೆ ಕುಟುಂಬ ಸದಸ್ಯರನ್ನ ಕೆಕೆ ಗೆಸ್ಟ್​ನಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆ ಮಾಹಿತಿ ಹೇಳಿದ್ದೀನಿ. ಕಿಡ್ನಾಪ್ ಆದ ಮಹಿಳೆಯನ್ನ ಕರೆದುಕೊಂಡು ಬಂದು ಎಷ್ಟು ದಿನ ಆಯ್ತು..? ನ್ಯಾಯಾಧೀಶರ ಎದುರು 164 ಹೇಳಿಕೆ ತೆಗೆದುಕೊಂಡಿದ್ದಾರಾ..? ಜಡ್ಜ್ ಮುಂದೆ ಹಾಜರುಪಡಿಸಿದ್ದಾರಾ..? ಯಾಕೆ ಕೋರ್ಟ್​ ಮುಂದೆ ಹಾಜರುಪಡಿಸಿಲ್ಲ..? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಕಿಡ್ನಾಪ್ ಆದ ಮಹಿಳೆ ತೋಟದ ಮನೆಯಲ್ಲಿ ಇದ್ರು ಅಂತಾ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಅದ್ರೆ ಯಾಕೆ ಇನ್ನೂ ಮಹಜರ್ ಮಾಡಿಲ್ಲ..? ಆ ಮಹಿಳೆ ತೋಟದ ಮನೆಯಿಂದ ಕರೆದುಕೊಂಡು ಬಂದ್ರಾ? ಎಲ್ಲಿಂದ ಕರೆದುಕೊಂಡು ಬಂದ್ರು ಅಂತಾ ಯಾಕೆ‌ ಅಧಿಕೃತವಾಗಿ ಹೇಳಿಲ್ಲ..? ಇಲ್ಲಿಯವರೆಗೆ ಎಲ್ಲಿಂದ ಕರೆದುಕೊಂಡು ಬಂದಿದ್ದೇವೆ ಎಂದು ಹೇಳಿಲ್ಲ. ರೇವಣ್ಣ ಕಿಡ್ನ್ಯಾಪ್ ಮಾಡಿದ್ದಾರೋ..? ಇಲ್ಲವೋ ಹೇಳಬೇಕು ಅಲ್ವಾ..? ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸೋಕೆ ಸೋಮವಾರದ ತನಕ ಸಮಯ ಬೇಕಂತೆ..! ಇದರ ಅರ್ಥ ರೇವಣ್ಣ ಅವರನ್ನ ಸೋಮವಾರದವರೆಗೆ ಜೈಲಿನಲ್ಲಿ ಇಡಬೇಕು ಎನ್ನುವುದು ಆಗಿದೆ. ಹಠ ಸಾಧನೆ ಆಗಬೇಕು ಅಷ್ಟೆ. ಇದರಲ್ಲಿ ಯಾರು ತಪ್ಪಿತಸ್ಥ ಅವರಿಗೆ ಶಿಕ್ಷೆ ಆಗುವುದು ಇವರಿಗೆ ಬೇಕಿಲ್ಲ. ಜೂನ್ 4 ರ‌ ನಂತರ ಈ ವಿಚಾರ ಚರ್ಚೆಯಲ್ಲಿ ಇರುತ್ತೋ? ಇಲ್ಲವೋ? ನೋಡಿ ಎಂದು ವ್ಯಂಗ್ಯಭರಿತ ಮಾತುಗಳಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

Tags: congressGovernorkumaraswamyPrajwal Revanna
Previous Post

ಅಪಹರಣದ ಕೇಸ್ ನಲ್ಲಿ ಜೈಲುಪಾಲಾಗಿರುವ ಶಾಸಕ ಅಧಿಕಾರಿಗಳಿಗೆ ಹೇಳಿದ್ದೇನು?

Next Post

ಸುಪ್ರಿಯಾ ಶ್ರೀನೇಟ್ ಅವರಿಂದ ಕಾಂಗ್ರೆಸ್ ಮಹತ್ವದ ಪತ್ರಿಕಾ ಗೋಷ್ಠಿ

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post

ಸುಪ್ರಿಯಾ ಶ್ರೀನೇಟ್ ಅವರಿಂದ ಕಾಂಗ್ರೆಸ್ ಮಹತ್ವದ ಪತ್ರಿಕಾ ಗೋಷ್ಠಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada