ಪಿ ಸಿ ಓ ಎಸ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಕಾಡ್ತಾ ಇದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಲೈಫ್ ಸ್ಟೈಲ್ ಹೆರಿಡಿಟಿ ಹಾಗೂ ಹಾಗೂ ನಾವು ಸೇವಿಸುವಂತಹ ಆಹಾರ ಕೂಡ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅಂದ್ರೆ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಮೇಲೆ ಎಫೆಕ್ಟ್ ಆಗುವಂತಹ ಹಾರ್ಮೋನಲ್ ಡಿಸಾರ್ಡರ್.ಇನ್ನು ಅಂಡಾಶಯಗಳು, ಹಾರ್ಮೋನುಗಳು ಮತ್ತು ಇತರ ದೈಹಿಕ ವ್ಯವಸ್ಥೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ . ಇನ್ನು ಪಿ ಸಿ ಓ ಎಸ್ ಸಮಸ್ಯೆ ಇದ್ದವರಿಗೆ ಕಾಡುವಂತ ಕಾಮನ್ ಸಿಂಟಮ್ಸ್ ಯಾವುದು.

ಇರ್ರೆಗುಲರ್ ಪಿರೇಡ್ಸ್
ಪಿ ಸಿ ಓ ಎಸ್ ತೊಂದರೆ ಇದ್ದವರಲ್ಲಿ ಮುಟ್ಟು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ, ಹಾಗೂ ಹಲವರಲ್ಲಿ ೨-೩ ತಿಂಗಳ ನಂತರ ಅಂದ್ರೆ ತುಂಬಾ ತಡವಾಗಿ ಮುಟ್ಟಾಗುತ್ತದೆ. ಇನ್ನು ಸಾಕಷ್ಟು ಮಹಿಳೆಯರಿಗೆ ಅಮೆನೋರಿಯಾ ಅಂದ್ರೆ ಪೀರಿಯಡ್ಸ್ ಆಗುವುದೆ ಇಲ್ಲ.

ತೂಕ ಹೆಚ್ಚಳ
ಈ ಸಮಸ್ಯೆಯಿಂದಾಗಿ ಇದ್ದಕ್ಕಿದ್ದ ಹಾಗೆ ಮಹಿಳೆಯರಲ್ಲಿ ತೂಕ ಹೆಚ್ಚಾಗುತ್ತದೆ. ಅದರಲ್ಲೂ ಕೆಲವರಂತೂ ವಿಪರೀತವಾಗಿ ವೇಯ್ಟಿಗೇನ್ ಮಾಡುತ್ತಾರೆ. ವಿಶೇಷವಾಗಿ ಮಧ್ಯಭಾಗದಲ್ಲಿ.ಅಂದ್ರೆ ಸೊಂಟದ ಭಾಗ ಹಾಗೂ ಹೊಟ್ಟೆಯ ಬೊಜ್ಜು ಹೆಚ್ಚಾಗುತ್ತದೆ.
ಮೊಡವೆ
ಪಿರೇಡ್ ಸಂದರ್ಭದಲ್ಲಿ ಅಥವಾ ದೇಹದಲ್ಲಿ ಉಷ್ಣತೆ ಹೆಚ್ಚಾದಾಗ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಹಾಗೆ ಪಿಸಿಒಎಸ್ ಸಮಸ್ಯೆ ಇದ್ದವರಲ್ಲೂ ಕೂಡ ಮೊಡವೆಗಳು ವಿಪರೀತವಾಗಿ ಕಾಣಿಸಿಕೊಳ್ಳುತ್ತದೆ, ಮುಖದಲ್ಲಿ ಮಾತ್ರ ವಲ್ಲದೆ ಎದೆಯ ಭಾಗದಲ್ಲಿ ,ಬೆನ್ನಿನ ಭಾಗದಲ್ಲೂ ಕೂಡ ಮೊಡವೆ ಬರುತ್ತವೆ.

ಕೂದಲ ಬೆಳವಣಿಗೆ
ಪಿ ಸಿ ಓ ಎಸ್ ಸಮಸ್ಯೆ ಇದ್ದವರಲ್ಲಿ ಹಿಂಸೆ ಎನಿಸುವ ಒಂದು ಸಿಂಟಮ್ ಅಂದ್ರೆ ಕೂದಲ ಬೆಳವಣಿಗೆ ಹೆಚ್ಚಾಗುವುದು. ಅದು ಕೂಡ ಮುಖದ ಭಾಗದಲ್ಲಿ ಎದೆಯಲ್ಲಿ ಹಾಗೂ ಬೆನ್ನಿನಲ್ಲಿ ಕೂದಲು ಹೆಚ್ಚಾಗುತ್ತದೆ.

ಬಂಜೆತನ
ಪಿ ಸಿ ಓ ಎಸ್ ಸಮಸ್ಯೆ ಇದ್ದವರಿಗೆ ಪ್ರಮುಖವಾಗಿ ಕಾಡುವುದು ಬಂಜೆತನ. ಮಕ್ಕಳಾಗಲು ತುಂಬಾನೇ ಕಷ್ಟವಾಗುತ್ತದೆ. ಹಾಗಾಗಿ ಪಿಸಿಒಎಸ್ ಸಮಸ್ಯೆ ಸಿಂಟಮ್ಸ್ ಗೊತ್ತಾದ ತಕ್ಷಣವೆ ಟ್ರೀಟ್ಮೆಂಟ್ ತೆಗೆದುಕೊಳ್ಳುವುದು ಉತ್ತಮ.
ಮೂಡ್ ಸ್ವಿಂಗ್ಸ್
ನೈಸರ್ಗಿಕವಾಗಿ ದೇಹದಲ್ಲಿ ಆಗಬೇಕಾದ ಅಂತಹ ಕೆಲವು ಕಾರ್ಯಗಳು ಸರಿಯಾಗಿ ಆಗದಿದ್ದಾಗ ಮೂಡ್ ಸ್ವಿಂಗ್ಸ್ ಹೆಚ್ಚಾಗುತ್ತದೆ. ಖಿನ್ನತೆ, ಮತ್ತು ಆತಂಕಕ್ಕೆ ಒಳಗುತ್ತಾರೆ.