ತಿರುಪತಿ ತಿರುಮಲದಲ್ಲಿ ನಡೆಯುವ ಬ್ರಹ್ಮರಥೋತ್ಸವಕ್ಕೆ TTD ತಯಾರಿ ಮಾಡಿಕೊಳ್ತಿದೆ. ಇಡೀ ದೇವಸ್ಥಾನವನ್ನು ಸ್ವಚ್ಛ ಮಾಡಲಾಗ್ತಿದೆ. ಇತ್ತೀಚಿಗೆ ತಿಮ್ಮಪ್ಪನ ಲಡ್ಡು ತಯಾರಿಕೆಗೆ ದನ ಹಾಗು ಹಂದಿ ಕೊಬ್ಬು ಬಳಸಿದ್ದಾರೆ ಅನ್ನೋ ಆರೋಪದ ಬಳಿಕ ಹೋಮ ಹವನ ಮಾಡಿ ಶುದ್ಧಿ ಕಾರ್ಯ ಮಾಡಲಾಗಿತ್ತು. ಇದೀಗ ನೀರಿನಿಂದ ತೊಳೆಯಲಾಗ್ತಿದೆ.
ನಾಳೆ ತಿರುಪತಿಗೆ ಭೇಟಿ ನೀಡಲಿರುವ ಡಿಸಿಎಂ ಪವನ್ ಕಲ್ಯಾಣ್, ನಾಳೆ ಸಂಜೆ 5 ಗಂಟೆಗೆ ಪಾದಯಾತ್ರೆ ಮೂಲಕ ತಿರುಮಲ ಬೆಟ್ಟ ಏರಲಿದ್ದಾರೆ. ನಾಳೆ ರಾತ್ರಿ ತಿರುಮಲದಲ್ಲೇ ಉಳಿಯುವ ಪವನ್ ಕಲ್ಯಾಣ್, ಅಕ್ಟೋಬರ್ 3ರಂದು ದೇವರ ದರ್ಶನ ಮಾಡಲಿದ್ದಾರೆ. ಆದರೆ ಪವನ್ ಕಲ್ಯಾಣ್ ಇತ್ತೀಚಿಗೆ ತಿರುಪತಿ ವಿಚಾರವಾಗಿ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಅಭಿಮಾನಿಗಳೇ ಅಚ್ಚರಿಗೆ ಒಳಗಾಗಿದ್ದಾರೆ.
ತಿರುಪತಿ ಲಡ್ಡು ತಯಾರಿಕೆಗೆ ಕೊಬ್ಬು ಬಳಕೆ ಮಾಡಲಾಗಿದೆ ಅನ್ನೋ ಆರೋಪದ ಬಗ್ಗೆ ತನಿಖೆ ಮಾಡಲು SIT ನೇಮಕ ಮಾಡಲಾಗಿತ್ತು.ಇದೀಗ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣಕ್ಕೆ ಆಂಧ್ರ ಸರ್ಕಾರ ಎಸ್ಐಟಿ ತನಿಖೆಯನ್ನು ಸ್ಥಗಿತ ಮಾಡಿ ಆದೇಶ ಹೊರಡಿಸಿದೆ.