ಬೀದರ್:- ರಸ್ತೆಗಳು ಚೆನ್ನಾಗಿ ಇದ್ದರೆ ಮಾತ್ರ ನಮ್ಮ ಭಾಗದ ಅಭಿವೃದ್ಧಿಯಾಗುತ್ತದೆ ಹಾಗಾಗಿ ಭಾಲ್ಕಿ ತಾಲ್ಲೂಕಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ಯಾಕೇಜ್ ಸಂಖ್ಯೆ 617 ರ ಅಡಿಯಲ್ಲಿನ ಕಾಮಗಾರಿಗಳ ಅಂದಾಜು 25 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಅರಣ್ಯ. ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಹೇಳಿದರು.ಅವರು ಸೋಮವಾರ ಭಾಲ್ಕಿ ತಾಲ್ಲೂಕಿನ ಲಂಜವಾಡ ಗ್ರಾಮದಲ್ಲಿ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಪ್ಯಾಕೇಜ್ ಸಂಖ್ಯೆ 617 ರ ಅಡಿಯಲ್ಲಿನ ರಸ್ತೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಸ್ತೆಗಳು ಚೆನ್ನಾಗಿ ಇಲ್ಲದಿದ್ದರೆ ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಲು, ಬಾಣಂತಿಯರಿಗೆ ಹೆರಿಗೆ ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಗಲ್ಲ ಮತ್ತು ಬಹಳಷ್ಟು ಅಪಘಾತಗಳು ಸಂಭವಿಸುತ್ತವೆ. ನಾನು ಶಾಸಕನಾಗಿದ್ದಾಗ ಲಂಜವಾಡ ರಸ್ತೆ ಹೇಗಿತ್ತು ಎಂದರೆ ಗಾಡಿಗಳು ಕೆಳಗೆ ಮೇಲೆ ಅಲುಗಾಡುತ್ತಿದ್ದವು ಯಾವಾಗ ವಾಹನಗಳು ಪಲ್ಟಿಯಾಗುತ್ತದೆ ಎಂದು ಭಯವಾಗುತ್ತಿತ್ತು ಎಂದರು.ಭಾಲ್ಕಿ-ಚಿAಚೋಳಿ ರಾಜ್ಯ ಹೆದ್ದಾರಿ 75 ರ ಆಯ್ದ ಭಾಗಗಳ ಸುಧಾರಣೆ 869 ಲಕ್ಷ ರೂ ಹಾಗೂ ಔರಾದ-ಸದಾಶಿವಗಡ್ ರಾಜ್ಯ ಹೆದ್ದಾರಿ 34 ರ ಆಯ್ದ ಭಾಗಗಳ ಸುಧಾರಣೆ 511 ಲಕ್ಷ ರೂ ಹಾಗೂ ಬಾಲಗಾಂವ (ಮಹಾರಾಷ್ಟ್ರ ಗಡಿ) ಯಿಂದ ಧರ್ಮಪೂರ (ತೆಲಂಗಾಣ ಗಡಿ) ವರೆಗೆ ರಸ್ತೆ ಸುಧಾರಣೆ 1120 ಲಕ್ಷ ರೂ. ಗಳ ಒಟ್ಟು 25 ಕೋಟಿ ರೂ. ಗಳ ಅಂದಾಜು ಮೊತ್ತದ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಹೇಳಿದರು.
ಲಂಜವಾಡ ಗ್ರಾಮದಲ್ಲಿ 81 ಲಕ್ಷದ ಸಿ.ಸಿ ರಸ್ತೆ. ಚರಂಡಿ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಿದ್ದೆನೆ. ಜಲ ಜೀವನ ಮಿಷನ್ 23 ಲಕ್ಷ ಅಂದಾಜು ವೆಚ್ಚದ ಕಾಮಗಾರಿ ಈಗಾಗಲೇ ಮುಗಿದಿದೆ. ಈ ಗ್ರಾಮಕ್ಕೆ ಪಶು ಚಿಕಿತ್ಸಾಲಯದ ಬೇಡಿಕೆ ಇರುವುದರಿಂದ ಅದನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಲಂಜವಾಡ ಗ್ರಾಮಕ್ಕೆ ನೀರು ಬರುತ್ತವೆ ಅದರ ಕಾರ್ಯಾರಂಭ ಮಾಡಿದ್ದೆನೆ ಎಂದರು.
ಲAಜವಾಡ ಗ್ರಾಮ ಪಂಚಾಯತಿಗೆ ಮನೆ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ಅವಶ್ಯಕತೆ ಇದ್ದಲ್ಲಿ ಎಲ್ಲಾ ಕಡೆ ಕೊಡುತ್ತೆವೆ ಜೋಪಡಿ ಮುಕ್ತ ಮಾಡುತ್ತೆವೆ. ಯಾವುದೇ ಪಕ್ಷ ನೋಡದೆ ಎಲ್ಲರಿಗೂ ಮನೆಗಳನ್ನು ಕೊಟ್ಟಿದ್ದೆವೆ. ಭಾಲ್ಕಿ ತಾಲ್ಲೂಕಿನ 120 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿಗೆ ಗುಣಮಟ್ಟದ ಕಾಮಗಾರಿ ಆಗುತ್ತದೆ. ನಾರಾಯಣಪೂರ ಜಲಾಶಯದಿಂದ ಬೀದರ ಜಿಲ್ಲೆಯ 800 ರಿಂದ 900 ಜನವಸತಿ ಪ್ರದೇಶಗಳಿಗೆ ನೀರು ತರಲು ದೂರದರ್ಶಿತ್ವ ಇಟ್ಟುಕೊಳ್ಳಲಾಗಿದೆ. ಅಧಿಕಾರಿಗಳು ಗುಣಾತ್ಮಕ, ಕ್ವಾಲಿಟಿ, ಕ್ವಾಂಟಿಟಿ ಕೆಲಸ ಕಾಮಗಾರಿಗಳನ್ನು ಮಾಡಬೇಕೆಂದು ಹೇಳಿದರು.
ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಹಣಮಂತ್ರಾಯ ಚವ್ಹಾಣ ಮಾತನಾಡಿ, ನಮ್ಮ ಗ್ರಾಮದಲ್ಲಿ ಸಚಿವರು ದೊಡ್ಡ ಮಟ್ಟದ ಕಾಮಗಾರಿಗಳನ್ನು ತಂದು ಉದ್ಘಾಟನೆ ಮಾಡುತ್ತಿದ್ದು. ಸಿ.ಸಿ.ರಸ್ತೆ, ಜಲಜೀವನ ಮಿಷನ್, ಪಶು ಚಿಕಿತ್ಸಾಲಯ ಉದ್ಘಾಟನೆ ನೆರವೇರಿಸಿದ್ದು ಎಲ್ಲಾ ಗ್ರಾಮಸ್ಥರ ಪರವಾಗಿ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆನೆ ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಲಂಜವಾಡ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಧಿಕಾ ಶುಕ್ರಚಾರ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಶಂಕರ ಕಾಮಶೆಟ್ಟಿ, ಪಶು ಇಲಾಖೆಯ ಉಪನಿರ್ದೆಶಕರಾದ ನರಸಪ್ಪ, ಭಾಲ್ಕಿ ತಹಶೀಲ್ದಾರ ಮಲ್ಲಿಕಾರ್ಜುನ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಲಂಜವಾಡ ಹಾಗೂ ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಉಪಸ್ಥಿತರಿದ್ದರು.