
ಬೆಂಗಳೂರಿನಲ್ಲಿ ಪಟಾಕಿ ಸಿಡಿಸಲು ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ನಿಯಮ ಮೀರಿ ಪಟಾಕಿ ಹೊಡೆದವರಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಗುರುವಾರದಿಂದ ಶುಕ್ರವಾರ ಸಂಜೆ 5 ಗಂಟೆವರೆಗೂ 56 ಕೇಸ್‌ಗಳು ದಾಖಲು ಮಾಡಲಾಗಿದೆ.

ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ಕೊಡಲಾಗಿದೆ. ಆ ನಿಯಮ ಮೀರಿ ಪಟಾಕಿ ಸಿಡಿಸಿದವರ ಮೇಲೆ ಪೊಲೀಸರು ಕೇಸ್ ಹಾಕುತ್ತಿದ್ದಾರೆ. ಜೊತೆಗೆ ಅನಧಿಕೃತ ಪಟಾಕಿ ಮಾರಾಟ ಮತ್ತು ದಾಸ್ತಾನು ಮಾಡಿದವರ ಮೇಲೂ ಪ್ರಕರಣ ದಾಖಲಾಗ್ತಿದೆ.
ಬೆಂಗಳೂರು ಈಶಾನ್ಯ ವಿಭಾಗದಲ್ಲಿ 19 ಪ್ರಕರಣ, ಆಗ್ನೇಯ ವಿಭಾಗದಲ್ಲಿ 9, ವೈಟ್ ಫೀಲ್ಡ್ ವಿಭಾಗದಲ್ಲಿ 9, ಕೇಂದ್ರ ವಿಭಾಗದಲ್ಲಿ 9 ಕೇಸ್, ದಕ್ಷಿಣ ವಿಭಾಗದಲ್ಲಿ 4 ಕೇಸ್ ಹಾಗು ಪೂರ್ವ ವಿಭಾಗದಲ್ಲಿ 6 ಪ್ರಕರಣಗಳನ್ನು ಪೊಲೀಸ್ರು ದಾಖಲು ಮಾಡಿಕೊಂಡಿದ್ದಾರೆ..












