ರೇಣುಕಸ್ವಾಮಿ ಕೊಲೆ ಕೇಸ್ ನಲ್ಲಿ (Renukaswamy murder case) ಅರೆಸ್ಟ್ ಆಗಿದ್ದ A2 ಆರೋಪಿ, ನಟ ದರ್ಶನ್ (Actor darshan) ಗನ್ ಲೈಸೆನ್ಸ್ ಅನ್ನು (Gun license) ಪೊಲೀಸರು ಅಮಾನತ್ತಿನಲ್ಲಿ ಇಟ್ಟಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಮುಗಿಯುವ ತನಕ ದರ್ಶನ್ ಯಾವುದೇ ಕಾರಣಕ್ಕೂ ತಮ್ಮ ಗನ್ ಬಳಸುವಂತಿಲ್ಲ.
ಈ ಬಗ್ಗೆ ನಟ ದರ್ಶನ್, ತಮಗೆ ಗನ್ ಅವಶ್ಯಕತೆಯಿದೆಎಂದು ಮನವಿ ಮಾಡಿಕೊಂಡರೂ ಸಹ, ದರ್ಶನ್ ಅವರ ಕೊಟ್ಟ ಕಾರಣ ಪರಿಗಣಿಸದೆ ಪೊಲೀಸರು ಅವರ ಲೈಸೆನ್ಸ್ ಅನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟಿದ್ದಾರೆ.
ಹೀಗಾಗಿ ನಟ ದರ್ಶನ್ ಗೆ ಕೂಡಲೇ ಗನ್ ಶರಣು ಮಾಡಲು ಸೂಚನೆ ನೀಡಲಾಗಿದ್ದು, ಆರ್.ಆರ್.ನಗರ ಪೊಲೀಸರಿಗೆ ದರ್ಶನ್ ಎರಡು ಗನ್ ಸರೆಂಡರ್ ಮಾಡಬೇಕಿದೆ.
ಸದ್ಯ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಇರುವ ನಟ ದರ್ಶನ್ ಜಮೀನಿನ ಮೇಲೆ ಹೊರಗಿದ್ದು,ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆ ಇರುತ್ತದೆ.ಹೀಗಾಗಿ ದರ್ಶನ್ ಗನ್ ವಾಪಸ್ ಪಡೆದು ಸ್ಟೇಷನ್ ನಲ್ಲಿ ಇಡಲಾಗುತ್ತದೆ.