• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಮೋದಿ ರಾಜಕೀಯ ಭಾಷಣವನ್ನು ಟ್ವೀಟ್ ಮಾಡುವ ಮೂಲಕ ಬಿಜೆಪಿ ಗುಲಾಮಗಿರಿಗೆ ಬಿತ್ತೇ PMO?

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
December 8, 2021
in ಅಭಿಮತ
0
ಮೋದಿ ರಾಜಕೀಯ ಭಾಷಣವನ್ನು ಟ್ವೀಟ್ ಮಾಡುವ ಮೂಲಕ ಬಿಜೆಪಿ ಗುಲಾಮಗಿರಿಗೆ ಬಿತ್ತೇ PMO?
Share on WhatsAppShare on FacebookShare on Telegram

ಪ್ರಧಾನಮಂತ್ರಿ ಕಚೇರಿ ಎಂಬುದು ಒಂದಿದೆ. ಅಲ್ಲಿ ಬರೀ ಗುಜರಾತ್‌ ಮೂಲದ ಐ.ಎ.ಎಸ್‌ಗಳು ತುಂಬಿಕೊಂಡಿದ್ದು, ಅವರೆಲ್ಲ ಮೋದಿ ಮತ್ತು ಬಿಜೆಪಿಯ ಗುಣಗಾನ ಮಾಡುತ್ತ ಗುಲಾಮರಂತೆ ವರ್ತಿಸುತ್ತಿದ್ದಾರೆ.

ADVERTISEMENT

ನಿನ್ನೆ ಪ್ರಧಾನಿ ಮಹಾಶಯರು ಉತ್ತರಪ್ರದೇಶದಲ್ಲಿ ಭಾಷಣ ಮಾಡಿದ್ದಾರೆ. ಸಮಾಜವಾದಿ ಪಕ್ಷದವರನ್ನು ಹೀಗಳೆಯುತ್ತ, ʼಲಾಲ್‌ ಟೋಪಿʼ ( ಕೆಂಪು ಟೊಪ್ಪಿಗೆ) ಜನರನ್ನು ನಂಬಬೇಡಿ, ಅವರು ಭಾರಿ ಡೇಂಜರ್‌ʼ ಅಂದಿದ್ದಾರೆ.

ಇರಲಿ, ರಾಜಕಾರಣದಲ್ಲಿ ಇಂತಹ ಟೀಕೆ ಸಹಜ. ಆದರೆ ಪ್ರಧಾನಿ ಕಚೇರಿ ಈ ವಿವಾದಾತ್ಮಕ ರಾಜಕೀಯ ಹೇಳಿಕೆಯನ್ನು ಟ್ವೀಟ್‌ ಮಾಡುವ ಮೂಲಕ ತಾನು ಮೋದಿ ಮತ್ತು ಬಿಜೆಪಿಯ  ಕಟ್ಟಾಳು ಎಂದು ಮತ್ತೊಮ್ಮೆ ಬಹಿರಂಗ ಪಡಿಸಿದೆ.

ಪಿಎಂಒ ಕಚೇರಿಯ ಅಧಿಕೃತ ಹ್ಯಾಂಡಲ್‌ನಿಂದ ಪ್ರಧಾನಿಯವರ “ಲಾಲ್ ಟೋಪಿ”  ಭಾಷಣದ ಟ್ವೀಟ್  ಅನ್ನು  ಪ್ರಸಾರ ಮಾಡಲಾಗಿದ್ದು , ಇದನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿವೆ. ನಿನ್ನೆ, ಪಿಎಂ ಮೋದಿಯವರು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಸಮಾಜವಾದಿ ಪಕ್ಷದ ನಾಯಕರು ಧರಿಸಿರುವ ಟ್ರೇಡ್‌ಮಾರ್ಕ್ ಕೆಂಪು ಟೋಪಿ (“ಲಾಲ್ ಟೋಪಿ” )” ಅಪಾಯದ ಸಂಕೇತ” ಎಂದು ಹೇಳಿದ್ದರು.

आज पूरा यूपी भली-भांती जानता है कि लाल टोपी वालों को लाल बत्ती से मतलब रहा है, आपकी दुख-तकलीफों से नहीं।

लाल टोपी वालों को सत्ता चाहिए, घोटालों के लिए, अपनी तिजोरी भरने के लिए, अवैध कब्जों के लिए, माफियाओं को खुली छूट देने के लिए: PM @narendramodi

— PMO India (@PMOIndia) December 7, 2021

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಧಿಕೃತ PMO ಟ್ವಿಟರ್ ಹ್ಯಾಂಡಲ್ ಸಮಾಜವಾದಿ ಪಕ್ಷದ ಕುರಿತು ಮೋದಿ ಮಾಡಿದ  ಲಾಲ್ ಟೋಪಿ” ಗೇಲಿಯನ್ನು ಟ್ವೀಟ್‌ ಮಾಡಿದ್ದು  ಹೊಸ ವಿವಾದಕ್ಕೆ ಕಾರಣವಾಗಿದೆ., ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಈ ನಡೆಯನ್ನು ತೀವ್ರವಾಗಿ ಖಂಡಿಸಿವೆ ಮುಂಬರುವ ರಾಜ್ಯ ಚುನಾವಣೆಗಳ ಪ್ರಚಾರದಲ್ಲಿ ಮೋದಿ ತೊಡಗಿದ್ದು, ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಮಂಗಳವಾರ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಅಖಿಲೇಶ್ ಯಾದವ್ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಅದರ ನಾಯಕರು ಧರಿಸಿರುವ “ಲಾಲ್ ಟೋಪಿ” ಅಥವಾ ಟ್ರೇಡ್‌ಮಾರ್ಕ್ ಕೆಂಪು ಟೋಪಿಯನ್ನು ಉಲ್ಲೇಖಿಸಿ, ಪಕ್ಷವು ಭಯೋತ್ಪಾದಕರ ಬಗ್ಗೆ ಮೃದುವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ್ದರು.

“ಲಾಲ್ ಟೋಪಿ ವಾಲೆ’ (ಕೆಂಪು ಟೋಪಿಗಳು) ಕೇವಲ ಕೆಂಪು ದೀಪಗಳಲ್ಲಿ (ಅಧಿಕಾರ) ಆಸಕ್ತಿ ಹೊಂದಿದ್ದಾರೆ ಎಂಬುದು ಇಡೀ ಯುಪಿಗೆ ತಿಳಿದಿದೆ, ಜನರ ದುಃಖ ಆ ಪಕ್ಷಕ್ಕೆ ಮುಖ್ಯವಲ್ಲ. ಅವರಿಗೆ ಹಗರಣಗಳನ್ನು ನಡೆಸಲು, ಅತಿಕ್ರಮಣಕ್ಕೆ, ಮಾಫಿಯಾಗಳಿಗೆ ಮುಕ್ತ ಚಾಲನೆ ನೀಡಲು ಮಾತ್ರ ಅಧಿಕಾರ ಬೇಕು. ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆ ಮಾಡಲು ರೆಡ್ ಕ್ಯಾಪ್‌ಗಳು ಸರ್ಕಾರ ರಚಿಸಲು ಬಯಸುತ್ತಾರೆ… ರೆಡ್ ಕ್ಯಾಪ್‌ಗಳು ಉತ್ತರ ಪ್ರದೇಶಕ್ಕೆ ರೆಡ್ ಅಲರ್ಟ್‌ಗಳು… ಅಪಾಯದ ಎಚ್ಚರಿಕೆ,” ಎಂದು ಅವರು ಹೇಳಿದ್ರರು.

 ಚುನಾವಣಾ ಭಾಷಣದ  ಮಾತುಗಳನ್ನು ಪ್ರಧಾನಿಯವರ ಅಧಿಕೃತ ಟ್ವಿಟರ್ ಹ್ಯಾಂಡಲ್ @PMOIndia ನಲ್ಲಿ ಪುನರುತ್ಪಾದಿಸಲಾಗಿದೆ.

ಪ್ರಧಾನಿಯವರ ಭಾಷಣವನ್ನು ಅವರ ಅಧಿಕೃತ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವುದು ಇದೇ ಮೊದಲಲ್ಲ, ಆದರೆ ಇದು ಉಳಿದ ಪೋಸ್ಟ್‌ಗಳಿಗಿಂತ  ಹೆಚ್ಚು ಅನಪೇಕ್ಷಿತವಾಗಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.. ತಮ್ಮ ಪ್ರತಿಸ್ಪರ್ಧಿಗಳ ಮೇಲೆ ನೇರ ದಾಳಿ ನಡೆಸಲು ಯುಪಿಯಲ್ಲಿ ಅವರ ಇತ್ತೀಚಿನ ಸರ್ಕಾರಿ ಸಮಾರಂಭಗಳನ್ನು ಬಳಸಿಕೊಂಡು ಪಿಎಂ ರಾಜಕೀಯ ಮತ್ತು ಪಿಎಂಒ  ಕಚೇರಿಯ ನಡುವಿನ ಗೆರೆಗಳನ್ನು ಅಸ್ಪಷ್ಟಗೊಳಿಸಿದ್ದಾರೆ.

ಅಖಿಲೇಶ್ ಯಾದವ್ ಅವರು ತಮ್ಮ “ಲಾಲ್ ಟೋಪಿ” ಧರಿಸಿಯೇ  ತಮ್ಮ ಪ್ರತ್ಯುತ್ತರವನ್ನು ನೀಡಿದ್ದಾರೆ..

“ಪ್ರಧಾನಿ ಭಾಷೆಯನ್ನು ಹಾಳು ಮಾಡುತ್ತಿದ್ದಾರೆ.  ಅವರ ನಾಲಿಗೆ ಎಲ್ಲೆಲ್ಲೋ ಹೊರಳುತ್ತಿದೆ. ಬಂಗಾಳದ ಜನರು ಮಾಡಿದಂತೆಯೇ ಉತ್ತರ ಪ್ರದೇಶದ ಜನರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಪಿಎಂ ಸ್ಪಷ್ಟವಾಗಿ ಭಯಭೀತರಾಗಿದ್ದಾರೆ” ಎಂದು ಹೇಳಿದ್ದಾರೆ

ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದು, “ಪ್ರಧಾನಿ ಕಚೇರಿಯು ತೆರಿಗೆ ಪಾವತಿದಾರರ ಹಣದಿಂದ ನಡೆಯುತ್ತಿದೆ ಮತ್ತು ಐಎಎಸ್ ಅಧಿಕಾರಿಗಳಿಂದ ತುಂಬಿದೆ. @PMOIndia ಅನ್ನು ರಾಜಕೀಯ ಪ್ರೇರಿತ ಲಾಲ್ ಟೋಪಿ ಟ್ವೀಟ್‌ಗಳಿಗೆ ಹೇಗೆ ಬಳಸಲಾಗಿತು? ಪಿಎಂಒ ಕಚೇರಿಯ ಪ್ರತಿಯೊಬ್ಬರ ಮೆದುಳನ್ನು ಕೇಸರಿ ಸಾಸ್‌ನಲ್ಲಿ ಹುರಿಯಲಾಗಿದೆಯೇ?

ಪ್ರಧಾನಿಯವರ ಅಧಿಕೃತ ಹ್ಯಾಂಡಲ್‌ನಿಂದ ಈ ರೀತಿಯ ಭಾಷೆಯ ಬಳಕೆ ತಪ್ಪಾಗಿದೆ. ಪಿಎಂ ಮೋದಿ ಸ್ವತಃ ಕಾಲಾ ಟೋಪಿ (ಕಪ್ಪು ಟೋಪಿ) ಧರಿಸುತ್ತಾರೆ, ಮತ್ತು ಅವರ ಪಕ್ಷ ಮತ್ತು ಅವರ ಕ್ಯಾಬಿನೆಟ್ ಸಹ ಧರಿಸುತ್ತದೆ” ಎಂದು ಎಎಪಿಯ ಸಂಜಯ್ ಸಿಂಗ್ ಹೇಳಿದ್ದಾರೆ. “ಈ ಕಪ್ಪು ಟೋಪಿ ಧರಿಸಿದ ಜನರು ತಮ್ಮ ಕಪ್ಪು ಚಿಂತನೆ ಮತ್ತು ಕಪ್ಪು ಕಾನೂನುಗಳನ್ನು ಬಳಸುತ್ತಾರೆ. ಅವರು ಲಾಲ್ ಕಿಲಾ (ಕೆಂಪು ಕೋಟೆ) ಅನ್ನು ಕಾಲಾ ಕಿಲಾ ಎಂದು ಮರುನಾಮಕರಣ ಮಾಡಿದರೆ ನನಗೆ ಆಶ್ಚರ್ಯವಾಗುವುದಿಲ್ಲ. ಅವರು ಆಗಸ್ಟ್ 15 ರಂದು ಕಾಲಾ ಕಿಲಾದಲ್ಲಿ ಧ್ವಜಾರೋಹಣ ಮಾಡುತ್ತಾರೆಯೇ? ಎಂದು ಎಎಪಿ ಸಂಸದ ಪ್ರಶ್ನಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆಗಳು ನಡೆಯಲಿರುವ ಉತ್ತರ ಪ್ರದೇಶದಲ್ಲಿ  ಈಗ ರಾಜಕೀಯ ಚಟುವಟಿಕೆ ಹೆಚ್ಚಿವೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅಖಿಲೇಶ್ ಯಾದವ್ ಪ್ರಬಲ ಸವಾಲನ್ನು ಒಡ್ಡಿದ್ದರು.

PM’s office paid for by tax payer’s money & staffed by IAS officers.

How on earth can @PMOIndia handle be used for political lal topi tweets?

Have everyone’s brains been fried in saffron sauce?

— Mahua Moitra (@MahuaMoitra) December 8, 2021

ಎನ್‌ಡಿಟಿವಿಯ ಶ್ರೀನಿವಾಸನ್‌ ಜೈನ್‌ ಕೂಡ ಟ್ವೀಟ್‌ ಮಾಡಿದ್ದು, ಪಿಎಂಒ ಕಚೇರಿ ಘನತೆಯನ್ನು ಕಳೆದುಕೊಂಡಿದೆ ಎಂದಿದ್ದಾರೆ.

ನಮ್ಮ ಪ್ರಶ್ನೆ ಇಷ್ಟೇ: ಪಿಎಂಒ ಕಚೇರಿ ಮೋದಿ ಅಪ್ಪನ ಆಸ್ತಿಯಾ? ಬಿಜೆಪಿಯ ಗುಲಾಮನಾ?

Tags: PM's Laal Topi Tweet From Official Handle Provokes Opposition Attackನರೇಂದ್ರ ಮೋದಿ
Previous Post

ರೇಸ್ ಕೊರ್ಸ್ ನಲ್ಲಿರುವ ಕಾಂಗ್ರೆಸ್ ಭವನದ ಎದುರು ಮೌಂಟ್ ಕಾರ್ಮಲ್ ವಿದ್ಯಾರ್ಥಿಗಳ ಪ್ರತಿಭಟನೆ..!

Next Post

ಸೇನಾ ಹೆಲಿಕಾಪ್ಟರ್ ಪತನ: ಮೋದಿ ಜನರಿಗೆ ವಿವರ ನೀಡಲಿ ಎಂದ ಸುಬ್ರಮಣಿಯನ್ ಸ್ವಾಮಿ

Related Posts

ಭಾರತದಲ್ಲಿ ಸಮಕಾಲೀನ ಪ್ರಭುತ್ವ..
Top Story

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

by ಪ್ರತಿಧ್ವನಿ
March 21, 2026
0

ವಿಶೇಷ ಲೇಖನ : ನಾ ದಿವಾಕರ, ಹಿರಿಯ ಲೇಖಕರು.. ಭಾಗ 1  1947ರಲ್ಲಿ ಬ್ರಿಟೀಷ್‌ ವಸಾಹತುಶಾಹಿಯಿಂದ ವಿಮೋಚನೆ ಪಡೆಯುವ ಸಂದರ್ಭದಲ್ಲಿ ದೇಶದ ರಾಜಕೀಯ ವಿಶ್ಲೇಷಕರನ್ನು ಮತ್ತು ನಾಯಕರನ್ನು...

Read moreDetails
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

ಕನ್ಯಾಕುಮಾರಿ- ಕಾಶ್ಮೀರ ರೈತ ಜಾಗೃತಿ ಯಾತ್ರೆ: MSPಗೆ ಸಿಗಲಿರುವುದೇ ಕೇಂದ್ರದ ಅಸ್ತು?

February 3, 2026
ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

ಕುಟುಂಬ ರಾಜಕಾರಣ: ಭಾರತೀಯ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಭೀಕರ ದಾಳಿ! 

January 26, 2026
Next Post
ಸೇನಾ ಹೆಲಿಕಾಪ್ಟರ್ ಪತನ: ಮೋದಿ ಜನರಿಗೆ ವಿವರ ನೀಡಲಿ ಎಂದ ಸುಬ್ರಮಣಿಯನ್ ಸ್ವಾಮಿ

ಸೇನಾ ಹೆಲಿಕಾಪ್ಟರ್ ಪತನ: ಮೋದಿ ಜನರಿಗೆ ವಿವರ ನೀಡಲಿ ಎಂದ ಸುಬ್ರಮಣಿಯನ್ ಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada