ಯುದ್ದ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಹಾಗೂ ಸ್ಥಳಾಂತರ ವಿಚಾರದಲ್ಲಿ ತೀವ್ರ ಮುಜುಗರಕ್ಕೀಡಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇದೀಗ ಭಾರೀ ಸುದ್ದಿಯಲ್ಲಿದೆ.
ಉಕ್ರೇನ್ನಲ್ಲಿರುವ ವಿದ್ಯಾರ್ಥಿಗಳು ಹಾಗೂ ನಾಗರೀಕರ ಮೇಲೆ ದೌರ್ಜನ್ಯ, ಗಡಿ ಭಾಗದಲ್ಲಿ ತಾರತಮ್ಯ ನೀತಿಗಳ ವಿರುದ್ದ ದೇಶಾದ್ಯಂತ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇದು ದೇಶದ ಏರುತ್ತಿರುವ ಶಕ್ತಿಯ ಸೂಚನೆ ಎಂದು ಹೇಳಿದ್ದಾರೆ.
ಹೌದು, ಇಂದು ಉತ್ತರಪ್ರದೇಶದ ಸೋನೆಭದ್ರೆಯಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯರನ್ನು ವಾಪಸ್ ತಾಯ್ನಾಡಿಗೆ ಕರೆತರುವುದಕ್ಕೆ ತಮ್ಮ ಸರ್ಕಾರ ಯಾವ ಪ್ರಯೋಗ ಮಾಡುವುದಕ್ಕು ಸಿದ್ದ ಎಂದು ಹೇಳಿದ್ದಾರೆ.
ಉಕ್ರೇನ್ನಿಂದ ಭಾರತೀಯರ ಸ್ಥಳಾಂತರಿಸುತ್ತಿರುವುದನ್ನು ನೋಡಿದರೆ ವಿಶ್ವದಲ್ಲಿ ಭಾರತದ ಶಕ್ತಿ ಏರುತ್ತಿರುವುದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಹೇಳಿದ್ದಾರೆ. ನಾಗರೀಕರನ್ನು ವಾಪಸ್ ಕರೆತರುವ ಸಲುವಾಗಿ ಸರ್ಕಾರವು ನಾಲ್ವರು ಮಂತ್ರಿಗಳನ್ನು ನೇಮಿಸಿದೆ ಮತ್ತು IAFಅನ್ನು ನಿಯೋಜಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಸ್ವಪಕ್ಷಿಯರಿಂದಲೇ ತೀವ್ರ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮೋದಿ ಈ ರೀತಿ ಹೇಳಿದ್ದಾರೆ.
ಪ್ರಧಾನಿ ಮೋದಿ ಮಾತನಾಡುವ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆ ಪಟ್ಟಿಯನ್ನು ಜನರು ಒದಿದ್ದಾರೆ ಮತ್ತು ಯೋಗಿ ಆದಿತ್ಯನಾಥ್ ಅಡಿಯಲ್ಲಿ ಉತ್ತರ ಪ್ರದೇಶ ಅಗಾಧವಾದ ಪ್ರಗತಿಯನ್ನು ಸಾಧಿಸಿದೆ. ಕುಟುಂಬ ರಾಜಕಾರಣಕ್ಕೆ ನೀವು ಅವಕಾಶ ಕೊಡಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ದೇಶವನ್ನು ಅವಮಾನಿಸುವ ಅವಕಾಶವನ್ನು ಕುಟುಂಬ ರಾಜಕಾರಣ ಮಾಡುವವರು ಅನೇಕ ಭಾರೀ ಸದುಪಯೋಗ ಪಡಿಸಿಕೊಂಡಿದ್ದಾರೆ. ಅವರು ಅಧಿಕಾರದಲ್ಲಿ ಇದ್ದ ವೇಳೆ ನಿಮ್ಮಗಾಗಿ ಏನನ್ನು ಮಾಡಿಲ್ಲ ನೀವು ಅವರನ್ನು ಯಾವುದೇ ಕಾರಣಕ್ಕು ಬೆಂಬಲಿಸಬಾರದು ಎಂದು ಮನವಿ ಮಾಡಿದ್ದಾರೆ.
ಹಾಲಿ ನಡೆಯುತ್ತಿರುವ ಚುನಾವಣೆ ಉತ್ತರಪ್ರದೇಶದ ಭವಿಷಯವನ್ನು ನಿರ್ಧರಿಸಲಿದೆ ನಮ್ಮ ಸರ್ಕಾರವು ಸಮಾಜದ ಬಡ ಜನರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದೇವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ದೇಶಾದ್ಯಂತ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜನರಿಂದ ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಮೋದಿ ಸರ್ಕಾರ ವಿಷಯಾಂತರ ಮಾಡಲು ಮುಂದಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ.