• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ತಾಯಿ ಭೇಟಿಗೆ ಆನಂದ್‌ ತೇಲ್ತುಂಬಡೆ ಎರಡು ದಿನಗಳ ಅವಕಾಶ ನೀಡಿದ ಬಾಂಬೆ ಹೈಕೋರ್ಟ್

Any Mind by Any Mind
March 2, 2022
in ದೇಶ
0
ತಾಯಿ ಭೇಟಿಗೆ ಆನಂದ್‌  ತೇಲ್ತುಂಬಡೆ ಎರಡು ದಿನಗಳ ಅವಕಾಶ ನೀಡಿದ ಬಾಂಬೆ ಹೈಕೋರ್ಟ್
Share on WhatsAppShare on FacebookShare on Telegram

ಎಲ್ಗರ್‌ ಪರಿಷತ್‌ ಪ್ರಕರಣ ಹಾಗೂ ಮಾವೋವಾದಿಗಳ ಜೊತೆಗೆ ಸಂಪರ್ಕ ಇಟ್ಟುಕೊಂಡ ಆರೋಪದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ, ಅಂಬೇಡ್ಕರ್‌ ವಾದಿ ಚಿಂತಕ ಆನಂದ್‌ ತೇಲ್ತುಂಬ್ಡೆ ಅವರು ತಮ್ಮ ತಾಯಿಯನ್ನು ಭೇಟಿಯಾಗಲು ಬಾಂಬೆ ಹೈಕೋರ್ಟ್‌ ಬುಧವಾರ ಅನುಮತಿ ನೀಡಿದೆ.

ADVERTISEMENT

ಎಲ್ಗರ್‌ ಪರಿಷತ್‌ ಪ್ರಕರಣದ ವಿಚಾರಣಾಧೀನ ಖೈದಿಯಾಗಿರುವ ತೇಲ್ತುಂಬ್ಡೆ ಅವರನ್ನು ಸದ್ಯ ಮುಂಬೈಯ ತಲೋಜಾ ಜೈಲಿನಲ್ಲಿ ಇರಿಸಲಾಗಿದ್ದು, ಕಳೆದ ನವೆಂಬರ್‌ನಲ್ಲಿ ತನ್ನ ಸಹೋದರ ಮಿಲಿಂದ್‌ ತೇಲ್ತುಂಬೆ ಮೃತಪಟ್ಟ ಹಿನ್ನೆಲೆಯಲ್ಲಿ ತನ್ನ ಭೇಟಿಗೆ ಅವಕಾಶ ಕೋರಿ ಅರ್ಜಿ ಹಾಕಿದ್ದರು.  

ತೇಲ್ತುಂಬೆ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಸ್‌ ಬಿ ಶುಕ್ರೆ ಹಾಗೂ ಜಿಎ ಸನಪ್‌ ಅವರಿರುವ ನ್ಯಾಯಪೀಠವು, ಮಾರ್ಚ್‌ 8 ರಿಂದ 10 ರ ನಡುವೆ ಎರಡು ದಿನಗಳ ಕಾಲ ತಾಯಿಯನ್ನು ಭೇಟಿಯಾಗಲು ಅನುಮತಿ ನೀಡಿದೆ.

ಆದರೆ, ತೇಲ್ತುಂಬ್ಡೆ ಅರ್ಜಿಗೆ ಆಕ್ಷೇಪ ಸಲ್ಲಿಸಿದ್ದ ಎನ್‌ಐಎ, ಮೃತಪಟ್ಟ ಮಿಲಿಂದ್‌ ತೇಲ್ತುಂಬ್ಡೆ ಒಬ್ಬ ಮಾವೋವಾದಿ ನಾಯಕ, ಅವರು ಹಲವಾರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ತೇಲ್ತುಂಬ್ಡೆ ಅರ್ಜಿಯನ್ನು ವಜಾಗೊಳಿಸಲು ಕೇಳಿತ್ತು.

ಆದರೆ, ಎನ್‌ಐಎ ಆಕ್ಷೇಪವನ್ನು ತಳ್ಳಿ ಹಾಕಿರುವ ನ್ಯಾಯಪೀಠವು, ʼಮನುಷ್ಯನೊಬ್ಬನ ಸಾವಾಗಿದೆ. ಸಾವು ಸಾವೇ, ಅವರ (ಮಿಲಿಂದ್‌ ತೇಲ್ತುಂಬ್ಡೆ) ವಿರುದ್ಧ ಆರೋಪಳಿರಬಹುದು, ಅವರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರಬಹುದು, ಏನೇ ಆದರೂ, ಅವರು ಅರ್ಜಿದಾರರ (ಆನಂದ್‌ ತೇಲ್ತುಂಬ್ಡೆಯ) ಸಹೋದರರೇ ಆಗಿದ್ದಾರೆ ಎಂದು ಹೇಳಿದೆ.

ತೇಲ್ತುಂಬ್ಡೆ ಅವರು ಮಾರ್ಚ್ 8 ಮತ್ತು 10 ರ ನಡುವೆ ಹಗಲಿನಲ್ಲಿ ಪೊಲೀಸ್ ಬೆಂಗಾವಲು ಜೊತೆಯಲ್ಲಿ ತಮ್ಮ ತಾಯಿಯನ್ನು ಭೇಟಿ ಮಾಡಬಹುದು ಹಾಗೂ ಬೆಂಗಾವಲು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು ಎಂದು ನ್ಯಾಯಾಲಯ ಹೇಳಿದೆ.

“ಅರ್ಜಿದಾರರಿಗೆ ಮಾರ್ಚ್ 8 ಮತ್ತು 9 ರಂದು ಚಂದ್ರಾಪುರದಲ್ಲಿ ಅವರ ತಾಯಿಯನ್ನು ಭೇಟಿ ಮಾಡಲು ಅವಕಾಶವಿದೆ. ಅವರ ತಾಯಿಯನ್ನು ಭೇಟಿ ಮಾಡುವ ಉದ್ದೇಶವನ್ನು ಸಾಧಿಸಲು, ಅವರನ್ನು ಪೊಲೀಸ್ ಬೆಂಗಾವಲುಗಳೊಂದಿಗೆ ಸೂಕ್ತ ಬಂದೋಬಸ್ತ್‌ನೊಂದಿಗೆ ಕರೆದೊಯ್ಯಬೇಕು. ಆದ್ದರಿಂದ ಮಾರ್ಚ್ 8 ಬೆಳಿಗ್ಗೆ ಅಥವಾ ಮಧ್ಯಾಹ್ನದ ವೇಳೆಗೆ ಚಂದ್ರಾಪುರಕ್ಕೆ ತಲುಪಬಹುದು. ನಂತರ, ಅರ್ಜಿದಾರರು ಸರಿಯಾದ ಸಮಯದಲ್ಲಿ ಮಾರ್ಚ್ 10 ರಂದು ಪೋಲೀಸ್ ಬೆಂಗಾವಲು ಜೊತೆಗೆ ಚಂದ್ರಾಪುರವನ್ನು ಬಿಡುತ್ತಾರೆ. ಹಾಗೂ, ಮಾರ್ಚ್ 10 ರಂದು ಹೊರಡುವ ಮೊದಲು ಸ್ವಲ್ಪ ಸಮಯ ಲಭ್ಯವಿದ್ದರೆ ಹಾಗೂ ಸಾಧ್ಯವಾದರೆ ಅರ್ಜಿದಾರರು ಮತ್ತೆ ತನ್ನ ತಾಯಿಯನ್ನು ಭೇಟಿಯಾಗಲು ಅನುಮತಿಸಬೇಕು” ಎಂದು ನ್ಯಾಯಪೀಠ ಆದೇಶಿಸಿದೆ.

Tags: BJPBombay High courtCongress Partyಆನಂದ್‌ ತೇಲ್ತುಂಬೆನರೇಂದ್ರ ಮೋದಿಬಾಂಬೆ ಹೈಕೋರ್ಟ್ಬಿಜೆಪಿ
Previous Post

Ukraine Vs Russia | ರಷ್ಯಾ ಸೇನೆಯೊಂದಿಗೆ ಸೆಣಸಾಡಲು No ಎಂದ ಜೋ ಬಿಡನ್!

Next Post

ಅತ್ತ ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟದಲ್ಲಿದ್ದರೆ, ಇತ್ತ ಚುನಾವಣಾ ಭಾಷಣದಲ್ಲಿ PM ಮೋದಿ ಹೇಳಿದ್ದೇ ಬೇರೆ!

Related Posts

Parents sell their one-month-old infant to buy gold jewelry and a smartphone
Top Story

SHOCKING : ಚಿನ್ನಾಭರಣ, ಸ್ಮಾರ್ಟ್‌ಫೋನ್‌ ಖರೀದಿಸಿಲು 1 ತಿಂಗಳ ಹಸುಗೂಸನ್ನೇ ಮಾರಿದ ಹೆತ್ತವರು.!

by ಪ್ರತಿಧ್ವನಿ
September 29, 2026
0

ಛತ್ರಪತಿ ಸಂಭಾಜಿನಗರ:  ದುಬಾರಿ ಸ್ಮಾರ್ಟ್‌ಫೋನ್ (Smartphone) ಮತ್ತು ಬಂಗಾರದ ಒಡವೆಗಳನ್ನು ಖರೀದಿಸುವ ದುರಾಸೆಗೆ ಬಿದ್ದು ಹೆತ್ತ ತಂದೆ-ತಾಯಿಯೇ ತಮ್ಮ ಕೇವಲ ಒಂದು ತಿಂಗಳ ಹಸುಗೂಸನ್ನು ಮಾರಾಟ ಮಾಡಿರುವ...

Read moreDetails
Gyanesh Kumar is a puppet of the Centre Mallikarjun Kharge

ಜ್ಞಾನೇಶ್ ಕುಮಾರ್ ಕೇಂದ್ರದ ಕೈಗೊಂಬೆ, ತಕ್ಷಣ ರಾಜೀನಾಮೆ ನೀಡಲಿ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ | Mallikarjun Kharge

September 29, 2026
Centre approves 1,650 new MBBS seats in Karnataka

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಕರ್ನಾಟಕದಲ್ಲಿ ಹೊಸ 1,650 ಹೊಸ MBBS ಸೀಟುಗಳಿಗೆ ಕೇಂದ್ರ ಅನುಮೋದನೆ | MBBS

September 29, 2026
Tomorrow is the last day for biometric Aadhaar authentication to avail the LPG subsidy

ಗ್ರಾಹಕರೇ ಗಮನಿಸಿ : ಎಲ್ ಪಿಜಿ ಸಬ್ಸಿಡಿ ಪಡೆಯಲು `ಬಯೋಮೆಟ್ರಿಕ್ ಆಧಾರ್ ದೃಢೀಕರಣ’ಕ್ಕೆ ನಾಳೆಯೇ ಲಾಸ್ಟ್ ಡೇಟ್ | LPG

September 29, 2026
10 Major Changes from October 1 Impact on Your Pocket Too

ಅಕ್ಟೋಬರ್ 1ರಿಂದ 10 ಪ್ರಮುಖ ಬದಲಾವಣೆಗಳು: ನಿಮ್ಮ ಜೇಬಿನ ಮೇಲೂ ಪರಿಣಾಮ | Rules Change

September 29, 2026
Next Post
ಅತ್ತ ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟದಲ್ಲಿದ್ದರೆ, ಇತ್ತ ಚುನಾವಣಾ ಭಾಷಣದಲ್ಲಿ PM ಮೋದಿ ಹೇಳಿದ್ದೇ ಬೇರೆ!

ಅತ್ತ ಉಕ್ರೇನ್ನಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟದಲ್ಲಿದ್ದರೆ, ಇತ್ತ ಚುನಾವಣಾ ಭಾಷಣದಲ್ಲಿ PM ಮೋದಿ ಹೇಳಿದ್ದೇ ಬೇರೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada