ಹಾಸನದ (Hassan) ಅಶ್ಲೀಲ ಪೆನ್ ಡ್ರೈವ್ (Pendrive) ಹಂಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಅರಕಲಗೂಡಿನ ಜೆಡಿಎಸ್ (Jds) ಶಾಸಕ ಎ ಮಂಜು (A manju) ಮೇಲೆ ಸ್ಪೋಟಕ ಆರೋಪ ಕೇಳಿಬಂದಿದೆ . ಕುಮಾರಸ್ವಾಮಿಯವರು (Kumaraswamy) ಹೇಳಿದ ಆ ಮಹಾನಾಯಕ ಎ ಮಂಜು ಇರಬಹುದು ಎಂದು ನವೀನ್ ಗೌಡ ಫೇಸ್ಬುಕ್ನಲ್ಲಿ (Facebook) ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ನವೀನ್ ಗೌಡ (Naveen gowda) ಏಪ್ರಿಲ್ 21ನೇ ತಾರೀಕು ಶಾಸಕರನ್ನ ಮಾರುತಿ ಕಲ್ಯಾಣ ಮಂಟಪದಲ್ಲಿ ಭೇಟಿಯಾಗಿ ,ಈ ಪೆನ್ ಡ್ರೈವ್ ಅನ್ನ ಅರಕಲಗೂಡಿನ ಜೆಡಿಎಸ್ ಶಾಸಕ ಎ ಮಂಜು ಅವರಿಗೆ ನೀಡಿದ್ದೆ . ಆ ನಂತರವೇ ಪೆನ್ ಡ್ರೈವ್ ವೈರಲಾಗಿದೆ (viral) ಎಂದು ಪೋಸ್ಟ್ ಮಾಡಿದ್ದಾರೆ.
ಅಷ್ಟಕ್ಕೂ ಈಗಾಗಲೇ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಆರೋಪವನ್ನ ಎದುರಿಸುತ್ತಿರುವ ನವೀನ್ ಗೌಡ ಈ ಆರೋಪ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎ ಮಂಜು, ಇದು ತಲೆ ಬುಡವಿಲ್ಲದ ಆರೋಪ .ಒಂದು ವೇಳೆ ಏಪ್ರಿಲ್ 21ರಂದು ನನಗೆ ಪೆನ್ ಡ್ರೈವ್ ನೀಡಿದ್ದರೆ ಉಳಿದ ಜಿಲ್ಲೆಗಳಲ್ಲಿ ಹೇಗೆ ಪೆನ್ ಡ್ರೈವ್ ಹಂಚಿಕೆಯಾಯಿತು ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

ಒಟ್ಟಾರೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಪೆನ್ ಡ್ರೈವ್ ಪ್ರಕರಣ ಇದೀಗ ಅರಕಲಗೂಡಿನ ಜೆಡಿಎಸ್ ಶಾಸಕ ಎ ಮಂಜು ಅವರ ಬುಡಕ್ಕು ಬಂದಂತಿದೆ. ಈ ಆರೋಪದ ಸತ್ಯತೆ ತನಿಖೆಯ ಮೂಲಕ ಹೊರ ಬೀಳಬೇಕಿದೆ.











