ಭಾರತದಲ್ಲಿ ನೂರಾರು ಜನರ ಮೊಬೈಲ್ ಸಂಖ್ಯೆಯನ್ನು ಪೆಗಾಸಸ್ ಸ್ಪೈವೇರ್ ಮಾಡಿ ಆಡಳಿತ ಸರ್ಕಾರಕ್ಕೆ ಸರಬರಾಜು ಮಾಡಿವೆ ಎಂಬ ಆರೋಪವನ್ನು ಜುಲೈ 28 ರಂದು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಐಟಿ ಸಂಸದೀಯ ಸಮಿತಿಯು ಕೈಗೆತ್ತಿಕೊಳ್ಳಲಿದೆ.
ಸ್ಥಾಯಿ ಸಮಿತಿಯು “ನಾಗರಿಕರ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆ” ಕುರಿತು ಚರ್ಚಿಸಲಿದ್ದು ಈ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ಗೃಹ ಸಚಿವಾಲಯ ಮತ್ತು ಸಂವಹನ ಸಚಿವಾಲಯದ ಪ್ರತಿನಿಧಿಗಳನ್ನು ಕರೆದು ಈ ವಿಷಯದ ಬಗ್ಗೆ ಕೇಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಸ್ರೇಲಿನ ಪೆಗಾಸಸ್ ಸ್ಪೈವೇರ್ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ರಾಜಕಾರಣಿಗಳ ಮೇಲೆ ಕಣ್ಣಿಡಲು ಬಳಸಲಾಗಿದ್ದು ಈ ಗೌಪ್ಯ ಮಾಹಿತಿಯನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡುತ್ತದೆ ಎಂಬ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಕಳೆದ ಎರಡು ದಿನಗಳಿಂದ ಸಂಸತ್ತನ ಆಧಿವೇಶನದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇತರ ವಿರೋಧ ಪಕ್ಷದ ರಾಜಕಾರಣಿಗಳು, ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್, ಇಬ್ಬರು ಕೇಂದ್ರ ಸಚಿವರು, ತೃಣಮೂಲ ಕಾಂಗ್ರೆಸ್ ಮುಖಂಡ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಸುಮಾರು 40 ಪತ್ರಕರ್ತರ ಸಂಖ್ಯೆಯನ್ನು “ಪೆಗಾಸಸ್ ಸ್ಪೈವೇರ್ ” ಮಾಡಿದೆ ಎಂದು ದಿ ವೈರ್, ವಾಷಿಂಗ್ಟನ್ ಪೋಸ್ಟ್ ಮತ್ತು ಇತರ ಖಾಸಗಿ ಮಾಧ್ಯಮಗಳು ಬಹಿರಂಗಪಡಿಸಿದ್ದಾರೆ. ಆದರೆ ಸೋರಿಕೆಯಾದ ಡೇಟಾಬೇಸ್‌ನಲ್ಲಿ ಕಂಡುಬರುವ ಎಲ್ಲಾ ಸಂಖ್ಯೆಗಳನ್ನು ಹ್ಯಾಕ್ ಮಾಡಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಸ್ನೂಪಿಂಗ್‌ನಲ್ಲಿ ಯಾವುದೇ ಪಾತ್ರವಿಲ್ಲ ಎಂದು ಹೇಳುವ ಮೂಲಕ ಆರೋಪವನ್ನು ಸರ್ಕಾರ ನಿರಾಕರಿಸಿದೆ. ಬೇಹುಗಾರಿಕೆ ವರದಿಗಳಲ್ಲಿ ಯಾವುದೇ ಅಂಶವಿಲ್ಲ ಮತ್ತ “ಅನಧಿಕೃತ ಕಣ್ಗಾವಲು ಸಂಭವಿಸುವುದಿಲ್ಲ.” ಎಂದು ಹೊಸ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ತಿನಲ್ಲಿ ಸೋಮವಾರ ಹೇಳಿದ್ದಾರೆ.
ಪೆಗಾಸಸ್ ಬಹಿರಂಗಪಡಿಸುವುದು “ಗಂಭೀರ ರಾಷ್ಟ್ರೀಯ ಭದ್ರತಾ ಕಾಳಜಿಯ” ವಿಷಯವಾಗಿದೆ ಮತ್ತು ಇದರ ಬಗ್ಗೆ ಸರ್ಕಾರ ವಿವರಣೆ ನೀಡುವ ಅಗತ್ಯವಿದೆ ಎಂದು ಶಶಿ ತರೂರ್ ಹೇಳಿದ್ದಾರೆ.
“ಭಾರತದಲ್ಲಿ ಪರೀಕ್ಷಿಸಿದ ಫೋನ್‌ಗಳು ಪೆಗಾಸಸ್‌ನ ಆಕ್ರಮಣವನ್ನು ಹೊಂದಿದ್ದವು ಎಂಬುದು ಸಾಬೀತಾಗಿದೆ. ಈ ಮಾಹಿತಿಯನ್ನು ಆಡಳಿತ ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆಯಾದ್ದರಿಂದ, ಯಾವ ಸರ್ಕಾರವನ್ನು ಪ್ರಶ್ನಿಸುವುದು? ಭಾರತ ಸರ್ಕಾರ ಇದನ್ನು ಮಾಡಿಲ್ಲ ಎಂದು ಹೇಳಿದರೆ, ಬೇರೆ ಯಾವ ಸರ್ಕಾರ ಇದನ್ನು ಮಾಡಿದೆ? ಇದು ಹೆಚ್ಚು ಗಂಭೀರವಾದ ರಾಷ್ಟ್ರೀಯ ಭದ್ರತಾ ಕಾಳಜಿಯಾಗಿದೆ “ಎಂದು ಶಶಿ ತರೂರ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.