ಕರೋನ ಸಾಂಕ್ರಾಮಿಕ ಸಮಯದಲ್ಲಿ 4.9 ಮಿಲಿಯನ್ ಹೆಚ್ಚುವರಿ ಸಾವುಗಳು ಸಂಭವಿಸಿವೆ: ಅಧ್ಯಯನ

ಕರೋನಾ ಸೋಂಕಿನಿಂದ ಅತೀ ಹೆಚ್ಚಾಗಿ ಭಾದಿಸಲ್ಪಟ್ಟ ದೇಶಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಆದರೆ, ಹಿಂದಿನಿಂದಲೂ ಭಾರತದ ಕೋವಿಡ್ ಅಂಕಿ ಅಂಶಗಳ ಪಾರದರ್ಶಕತೆಯ ಕುರಿತು ಸಂಶಯಗಳು ಕೇಳುತ್ತಲೇ ಬರುತ್ತಿವೆ. ಬಿಹಾರ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ತಮ್ಮ ರಾಜ್ಯದ ಕೋವಿಡ್ ಸಾವುಗಳ ಸಂಖ್ಯೆಯನ್ನು ಪರಿಷ್ಕರಿಸಿದ ನಂತರ ಆಯಾ ರಾಜ್ಯಗಳ ಕೋವಿಡ್ ಸಾವುಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಈಗ ಬಂದಿರುವ ಹೊಸ ಅಧ್ಯಯನದ ಪ್ರಕಾರ ದೇಶದ ಅಧಿಕೃತ ಕೋವಿಡ್ ಸಾವುಗಳ ಸಂಖ್ಯೆಗಿಂತಲೂ ಹಲವು ಪಟ್ಟು ಹೆಚ್ಚು ಸಾವುಗಳು ಸಂಭವಿಸಿರುವ ಸಾಧ್ಯತೆಗಳಿವೆ.

ವಾಷಿಂಗ್ಟನ್ ಮೂಲದ Centre For Global

Development ಎಂಬ ಸಂಸ್ಥೆಯು ನಡೆಸಿದ ಅಧ್ಯಯನದಲ್ಲಿ ಈ ವಿಚಾರ ಬಹಿರಂಗವಾಗಿದೆ. ಭಾರತದ ಮಾಜಿ ಮುಖ್ಯ ಆರ್ಥಿಮ ಸಲಹೆಗಾರರಾದ ಅರವಿಂದ್ ಸುಬ್ರಹ್ಮಣ್ಯನ್ ಅವರನ್ನು ಒಲಗೊಂಡ ತಂಡವು ಈ ಅಧ್ಯವನ್ನು ನಡೆಸಿದೆ. ಭಾರತದಲ್ಲಿ ಸುಮಾರು 4.9 ಮಿಲಿಯನ್ ಕೋವಿಡ್ ಸಾವುಗಳು ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಅಧ್ಯಯನ ಹೇಳಿದೆ.
ಪ್ರಸ್ತುತ ಸುಮಾರು 4,14,000 ಅಧಿಕೃತ ಕೋವಿಡ್ ಸಾವುಗಳು ಸಂಭವಿಸಿರುವ ಕುರಿತು ಸರ್ಕಾರ ಮಾಹಿತಿ ನೀಡಿದೆ. ಇದರ ಹತ್ತು ಪಟ್ಟು ಹೆಚ್ಚು ಸಾವುಗಳು ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಅಧ್ಯಯನ ಹೇಳಿದೆ.

ದೇಶವೇ ಆತಂಕಪಡುವ ಮಟ್ಟಿಗೆ ಕಳೆದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರೋನಾ ಸೋಂಕಿನ ತೀವ್ರತೆ ಇತ್ತು. ಸುಮಾರು 1,70,000 ಜನ ಕೇವಲ ಮೇ ತಿಂಗಳಲ್ಲಿ ಸಾವನ್ನಪ್ಪಿದ್ದರು. ಇಗ ಅಧ್ಯಯನದ ವರದಿ ಹೇಳುವ ಪ್ರಕಾರ ಕೇವಲ ಸಾವಿಗಳಲ್ಲಿ ಅಲ್ಲ, ಬದಲಾಗಿ ಲಕ್ಷಗಳ ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ. ಈ ಸಂಖ್ಯೆ 3.4 ರಿಂದ 4.9 ಮಿಲಿಯನ್ ಗಳವರೆಗೆ ಹೋಗುವ ಸಂಭವವಿದೆ ಎಂದು ಹೇಳಿದೆ.

“ಎಲ್ಲಾ ಸಾವುಗಳು ಕೋವಿಡ್ ನಿಂದ ಉಂಟಾದ ಸಾವುಗಳೆಂದು ಹೇಳಲು ಸಾಧ್ಯವಿಲ್ಲ. ಆದರೆ, ಕರೋನಾ ಸೊಂಕು ದೇಶವನ್ನು ಪ್ರವೇಶಿಸುವ ಮೊದಲು ಸಂಭವಿಸುತ್ತಿದ್ದ ಸಾವುಗಳ ಸಂಖ್ಯೆ ಹಾಗೂ ಕರೋನಾ ದೇಶವನ್ನು ಪ್ರವೇಶಿಸಿದ ಬಳಿಕ ಉಂಟಾದ ಸಾವುಗಳ ಸಂಖ್ಯೆಯಲ್ಲಿ ಇರುವ ವ್ಯತ್ಯಾಸವನ್ನು ಈ ಅಧ್ಯಯನ ಕಂಡುಕೊಂಡಿದೆ,” ಎಂದು ಹೇಳಿದ್ದಾರೆ.

ಈ ವರದಿಯ ಕುರಿತು ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಈ ಹಿಂದೆ ನ್ಯೂಯಾರ್ಕ್ ಟೈಮ್ಸ್ ಕೂಡಾ ಇಂತಹುದೇ ವರದಿ ಪ್ರಕಟಿಸಿದಾಗ, ಸರ್ಕಾರ ಅದನ್ನು ವಿರೋಧಿಸಿತ್ತು. ಆರ ಲಕ್ಷ ಸಾವುಗಳು ಸಂಭವಿಸಿರುವ ಸಾಧ್ಯತೆಗಳಿವೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿತ್ತು. ಈ ಸಂಖ್ಯೆ ಸತ್ಯಕ್ಕೆ ದೂರ ಎಂದು ಸರ್ಕಾರ ಹೇಳಿತ್ತು.

Please follow and like us:

Related articles

Share article

Stay connected

Latest articles

Please follow and like us: