ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಆರ್ಥಿಕ ಮಾದರಿ ಪಾಕಿಸ್ತಾನದಲ್ಲಿ ಚರ್ಚೆಯಾಗಿದೆ.
ಪ್ರಧಾನಿ ಮೋದಿಯವರ ಆರ್ಥಿಕ ಮಾದರಿಯಿಂದ ಪಾಕಿಸ್ತಾನ ಪ್ರಾಂತ್ಯದ 1 ನೇ ಮಹಿಳಾ ಮುಖ್ಯಮಂತ್ರಿ ಮರ್ಯಮ್ ನವಾಜ್ (Maryam Nawaz) ಪ್ರಭಾವಿತರಾಗಿದ್ದಾರೆ. ಹೀಗಾಗಿಯೇ ಮೋದಿಯವರ ಆರ್ಥಿಕ ಮಾದರಿಯಂತೆಯೇ ಕಾರ್ಯಕ್ರಮಗಳನ್ನು ಜಾರಿಗೆ ತರುವ ಗುರಿಯನ್ನು ಮರ್ಯಮ್ ನವಾಜ್ ಹೊಂದಿದ್ದಾರೆ. ಆದರೆ ಈ ಬಗ್ಗೆ ಪಿಒಕೆ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಅವರು, ನೀತಿಗಳ ಅನುಷ್ಠಾನದ ಪ್ರಾಯೋಗಿಕತೆಯ ಬಗ್ಗೆ ಪ್ರಶ್ನೆಯನ್ನು ಎತ್ತಿದ್ದಾರೆ.
ಪಂಜಾಬ್ ಪ್ರಾಂತ್ಯವನ್ನು ಆರ್ಥಿಕ ಕೇಂದ್ರವನ್ನಾಗಿ ಪರಿವರ್ತಿಸಲು ನೀತಿಗಳನ್ನು ರೂಪಿಸುವುದಾಗಿ ಮರ್ಯಮ್ ನವಾಜ್ ಹೇಳಿದ್ದಾರೆ.
![](https://pratidhvani.com/wp-content/uploads/2024/02/1500x900_1248535-pti02262024000159b-1024x614.jpg)
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ (Punjab Province) ಮೊಟ್ಟ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (PML-N) ಪಕ್ಷದ ಮರಿಯಂ ನವಾಜ್ (Maryam Nawaz) ಅವರು ಆಯ್ಕೆಯಾಗಿದ್ದಾರೆ.
ಇದರೊಂದಿಗೆ ಪಾಕಿಸ್ತಾನದ ಪ್ರಾಂತ್ಯವೊಂದಕ್ಕೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ ಮರಿಯಂ ನವಾಜ್ ಪಾತ್ರರಾಗಿದ್ದಾರೆ. ಇದುವರೆಗೆ ಪಾಕಿಸ್ತಾನದ ಇತಿಹಾಸದಲ್ಲೇ ಯಾವುದೇ ಪ್ರಾಂತ್ಯಕ್ಕೆ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿರಲಿಲ್ಲ. ಈಗ ಮರಿಯಂ ನವಾಜ್ ಅವರು ಇತಿಹಾಸ ಸೃಷ್ಟಿಸಿದ್ದಾರೆ.
#national #pmmodi #narendramodi #MaryamNawaz #PunjabProvince