ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಇಡೀ ಜಗತ್ತಿನ ಮುಂದೆ ನಗೆಪಾಟಲಕ್ಕೀಡಾಗಿದ್ದಾರೆ. ತಮ್ಮದೇ ರಾಯಭಾರಿ ಕಚೇರಿಯಿಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ರೋಲ್ ಆಗಿದ್ದಾರೆ. ಱಪ್ ಸಾಂಗ್ ಮೂಲಕ ಸಂಬಳ ಕೊಡದೇ ಹೇಗೆ ಕೆಲಸ ಮಾಡಬೇಕೆಂದು ನಿರೀಕ್ಷಿಸುತ್ತೀರಿ ಅಂತಾ ಪಾಕ್ ಪ್ರಧಾನಿಯನ್ನ ಲೇವಡಿ ಮಾಡಲಾಗಿದೆ.
ಇಮ್ರಾನ್ ಖಾನ್‌ರವರೇ, ಕಳೆದ 3 ತಿಂಗಳಿಂದ ಸಂಬಳ ಪಡೆಯದೆ ನಿಮಗಾಗಿ ಕೆಲಸ ಮಾಡುತ್ತಿದ್ದೇವೆ. ಇನ್ನೆಷ್ಟು ದಿನ ನಾವು ಹೀಗೆ ಕೆಲಸ ಮಾಡ್ತೀವಂತಾ ನಿರೀಕ್ಷೆ ಮಾಡ್ತೀರಿ? ಶುಲ್ಕ ಕಟ್ಟದ ಕಾರಣಕ್ಕೆ ನಮ್ಮ ಮಕ್ಕಳನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಇದೇನಾ ನಿಮ್ಮ #NayaPakistan, ಅರ್ಥಾತ್ ಹೊಸ ಪಾಕಿಸ್ತಾನ? ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ರನ್ನ ಖುದ್ದು ಪಾಕ್ ರಾಯಭಾರಿ ಕಚೇರಿಯೇ ಹೀಗೆ ಟ್ರೋಲ್ ಮಾಡಿದೆ. ಇನ್ನೆಷ್ಟು ದಿನ ಸಂಬಳ ಕೊಡದೇ ದುಡಿಸಿಕೊಳ್ತೀರಿ ಅಂತಾ ಸರ್ಬಿಯಾದ ಪಾಕ್ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟ್ಟರ್ನಲ್ಲಿ ಲೇವಡಿ ಮಾಡಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಖುದ್ದು ಪಾಕ್ ಪ್ರಧಾನಿ ಇಮ್ರಾನ್ ಖಾನ್, ದೇಶವನ್ನು ನಡೆಸಲು ಸರ್ಕಾರದ ಬಳಿ ಹಣವಿಲ್ಲ ಅಂತಾ ಹೇಳಿದ್ದರು. ಸದ್ಯ ಪಾಕಿಸ್ತಾನದಲ್ಲಿ ಜನ ತಮ್ಮ ಮಾಸಿಕ ಖರ್ಚು ನಿಭಾಯಿಸಲು ಕೂಡ ಪರದಾಡ್ತಿದ್ದಾರಂತೆ. ಹೀಗಾಗಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಪಾಕ್ ನಾಗರೀಕರು ತೀರ ಕೋಪಗೊಂಡಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ತಮ್ಮ ರಾಯಭಾರಿ ಕಚೇರಿಯಿಂದಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ರೋಲ್ ಆಗಿದ್ದಾರೆ.
ಸೆರ್ಬಿಯಾದ ಪಾಕ್ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟ್ಟರ್ನಲ್ಲಿ ಪಾಕ್ ಪ್ರಧಾನಿಯನ್ನ ಅಣುಕಿಸಲಾಗಿದೆ. ರ್ಯಾಪ್ ಸಾಂಗ್ವೊಂದನ್ನ ಪೋಸ್ಟ್ ಮಾಡಿ ಮೂರು ತಿಂಗಳು ಸಂಬಳ ಕೊಡದೆ ದುಡಿಸಿಕೊಳ್ತಿರೋದಕ್ಕೆ ಲೇವಡಿ ಮಾಡಲಾಗಿದೆ.
ಇಮ್ರಾನ್ ಖಾನ್‌ರವರೇ, ಹಣದುಬ್ಬರದ ಹಿಂದಿನ ಎಲ್ಲಾ ದಾಖಲೆಗಳನ್ನೂ ನೀವು ಮುರಿದಿದ್ದೀರಿ. ಕಳೆದ 3 ತಿಂಗಳಿಂದ ಸಂಬಳ ಪಡೆಯದೆ ನಾವು ನಿಮಗಾಗಿ ಕೆಲಸ ಮಾಡುತ್ತಿದ್ದೇವೆ. ಇನ್ನೆಷ್ಟು ದಿನಗಳು ನಾವು ಹೀಗೆ ಸಂಬಳ ಪಡೆಯದೇ ಕೆಲಸ ಮಾಡಬೇಕು ಎಂದು ಪಾಕ್ ರಾಯಭಾರಿ ಕಚೇರಿ ಇಮ್ರಾನ್ ಖಾನ್ ವಿರುದ್ಧ ಆಕ್ರೋಶ ಹೊರಹಾಕಿದೆ.
ಪಾಕ್ ರಾಯಭಾರಿ ಕಚೇರಿಯಿಂದಲೇ ಇಂಥದ್ದೊಂದು ವಿಡಿಯೋ ಹೊರ ಬೀಳ್ತಿದ್ದಂತೆ, ಎಲ್ಲೆಡೆ ಈ ವಿಡಿಯೋ ವೈರಲ್ ಆಯ್ತು. ಆದ್ರೆ ವಿಡಿಯೋ ವೈರಲ್ ಆದ ಕೆಲವೇ ಗಂಟೆಯೊಳಗೆ ವಿಡಿಯೋವನ್ನ ಡಿಲೀಟ್ ಕೂಡ ಮಾಡಲಾಯ್ತು. ಸರ್ಬಿಯಾದ ಪಾಕ್ ರಾಯಭಾರಿ ಕಚೇರಿಯ ಟ್ವಿಟರ್ ಖಾತೆಯಲ್ಲೇ ಈ ಅಕೌಂಟ್ ಹ್ಯಾಕ್ ಮಾಡಲಾಗಿತ್ತು ಅಂತಾ ಸ್ಪಷ್ಟನೆಯನ್ನೂ ನೀಡಲಾಯ್ತು.
ಏನೇ ಹೇಳಿ, ಪಾಕ್ ರಾಯಭಾರಿ ಕಚೇರಿಯ ಈ ಒಂದು ವಿಡಿಯೋದಿಂದ ಪಾಕಿಸ್ತಾನ ಮತ್ತೊಮ್ಮೆ ಜಗತ್ತಿನ ಎದುರು ನಗೆಪಾಟಲಕ್ಕಿಡಾಗಿದೆ. ಪಾಕ್ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಕುಸಿದಿದೆ ಅಂತಾ ಜಗತ್ತಿನ ಎದುರು ಬಟಾಬಯಲಾಗಿದೆ. Health maintenance organizations (HMO), or HMOs, drugstore-catalog.com offer basic coverage for medical care (dental, vision, prescriptions, and some long-term care).