Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಪಾಕ್ನಲ್ಲಿ ತಲೆದೂರಿದ ಆರ್ಥಿಕ ದಿವಾಳಿತನ; ಸಂಬಳ ಕೊಡಿ ಎಂದು ಇಮ್ರಾನ್ ಖಾನ್ಗೆ ತಮ್ಮದೇ ರಾಯಭಾರಿ ಕಚೇರಿಯಿಂದ ಟ್ವೀಟ್

ನಚಿಕೇತು

ನಚಿಕೇತು

December 5, 2021
Share on FacebookShare on Twitter

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಇಡೀ ಜಗತ್ತಿನ ಮುಂದೆ ನಗೆಪಾಟಲಕ್ಕೀಡಾಗಿದ್ದಾರೆ. ತಮ್ಮದೇ ರಾಯಭಾರಿ ಕಚೇರಿಯಿಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ರೋಲ್ ಆಗಿದ್ದಾರೆ. ಱಪ್ ಸಾಂಗ್ ಮೂಲಕ  ಸಂಬಳ ಕೊಡದೇ ಹೇಗೆ ಕೆಲಸ ಮಾಡಬೇಕೆಂದು ನಿರೀಕ್ಷಿಸುತ್ತೀರಿ ಅಂತಾ ಪಾಕ್ ಪ್ರಧಾನಿಯನ್ನ ಲೇವಡಿ  ಮಾಡಲಾಗಿದೆ.

ಇಮ್ರಾನ್‌ ಖಾನ್‌ರವರೇ, ಕಳೆದ 3 ತಿಂಗಳಿಂದ ಸಂಬಳ ಪಡೆಯದೆ ನಿಮಗಾಗಿ ಕೆಲಸ ಮಾಡುತ್ತಿದ್ದೇವೆ. ಇನ್ನೆಷ್ಟು ದಿನ ನಾವು ಹೀಗೆ  ಕೆಲಸ ಮಾಡ್ತೀವಂತಾ ನಿರೀಕ್ಷೆ ಮಾಡ್ತೀರಿ? ಶುಲ್ಕ ಕಟ್ಟದ ಕಾರಣಕ್ಕೆ ನಮ್ಮ ಮಕ್ಕಳನ್ನು ಶಾಲೆಯಿಂದ ಹೊರ ಹಾಕಲಾಗಿದೆ. ಇದೇನಾ ನಿಮ್ಮ #NayaPakistan, ಅರ್ಥಾತ್ ಹೊಸ ಪಾಕಿಸ್ತಾನ? ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ರನ್ನ ಖುದ್ದು ಪಾಕ್ ರಾಯಭಾರಿ ಕಚೇರಿಯೇ ಹೀಗೆ ಟ್ರೋಲ್ ಮಾಡಿದೆ. ಇನ್ನೆಷ್ಟು ದಿನ ಸಂಬಳ ಕೊಡದೇ ದುಡಿಸಿಕೊಳ್ತೀರಿ ಅಂತಾ  ಸರ್ಬಿಯಾದ ಪಾಕ್ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟ್ಟರ್ನಲ್ಲಿ ಲೇವಡಿ ಮಾಡಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಖುದ್ದು ಪಾಕ್ ಪ್ರಧಾನಿ ಇಮ್ರಾನ್ ಖಾನ್, ದೇಶವನ್ನು ನಡೆಸಲು ಸರ್ಕಾರದ ಬಳಿ ಹಣವಿಲ್ಲ ಅಂತಾ ಹೇಳಿದ್ದರು. ಸದ್ಯ ಪಾಕಿಸ್ತಾನದಲ್ಲಿ ಜನ ತಮ್ಮ ಮಾಸಿಕ ಖರ್ಚು ನಿಭಾಯಿಸಲು ಕೂಡ ಪರದಾಡ್ತಿದ್ದಾರಂತೆ. ಹೀಗಾಗಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಪಾಕ್ ನಾಗರೀಕರು ತೀರ ಕೋಪಗೊಂಡಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ತಮ್ಮ ರಾಯಭಾರಿ  ಕಚೇರಿಯಿಂದಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಟ್ರೋಲ್ ಆಗಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಲೇಖಕ ಸಲ್ಮಾನ್ ರಶ್ದಿ ಮೇಲೆ ದಾಳಿ ನಡೆಸಿದ 24 ವರ್ಷದ ವ್ಯಕ್ತಿ ಯಾರು?

ವೇದಿಕೆ ಮೇಲೆ ಚಾಕು ಇರಿತಕ್ಕೊಳಗಾದ ಸಲ್ಮಾನ್ ರಶ್ದಿ ಸ್ಥಿತಿ ಗಂಭೀರ, ಕಣ್ಣು ಕಳೆದುಕೊಳ್ಳುವ ಸಾಧ್ಯತೆ!

ಸೇನಾ ಶಿಬಿರದ ಮೇಲೆ ಆತ್ಮಾಹುತಿ ದಾಳಿ, 3 ಯೋಧರು ಹುತಾತ್ಮ



ಸೆರ್ಬಿಯಾದ ಪಾಕ್ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟ್ಟರ್ನಲ್ಲಿ ಪಾಕ್ ಪ್ರಧಾನಿಯನ್ನ ಅಣುಕಿಸಲಾಗಿದೆ. ರ್ಯಾಪ್ ಸಾಂಗ್ವೊಂದನ್ನ ಪೋಸ್ಟ್ ಮಾಡಿ ಮೂರು ತಿಂಗಳು ಸಂಬಳ ಕೊಡದೆ ದುಡಿಸಿಕೊಳ್ತಿರೋದಕ್ಕೆ ಲೇವಡಿ ಮಾಡಲಾಗಿದೆ.

ಇಮ್ರಾನ್‌ ಖಾನ್‌ರವರೇ, ಹಣದುಬ್ಬರದ ಹಿಂದಿನ ಎಲ್ಲಾ ದಾಖಲೆಗಳನ್ನೂ ನೀವು ಮುರಿದಿದ್ದೀರಿ. ಕಳೆದ 3 ತಿಂಗಳಿಂದ ಸಂಬಳ ಪಡೆಯದೆ ನಾವು ನಿಮಗಾಗಿ ಕೆಲಸ ಮಾಡುತ್ತಿದ್ದೇವೆ. ಇನ್ನೆಷ್ಟು ದಿನಗಳು ನಾವು ಹೀಗೆ ಸಂಬಳ ಪಡೆಯದೇ ಕೆಲಸ ಮಾಡಬೇಕು ಎಂದು ಪಾಕ್ ರಾಯಭಾರಿ ಕಚೇರಿ ಇಮ್ರಾನ್ ಖಾನ್ ವಿರುದ್ಧ ಆಕ್ರೋಶ ಹೊರಹಾಕಿದೆ.

ಪಾಕ್ ರಾಯಭಾರಿ ಕಚೇರಿಯಿಂದಲೇ ಇಂಥದ್ದೊಂದು ವಿಡಿಯೋ ಹೊರ ಬೀಳ್ತಿದ್ದಂತೆ, ಎಲ್ಲೆಡೆ ಈ ವಿಡಿಯೋ ವೈರಲ್ ಆಯ್ತು. ಆದ್ರೆ ವಿಡಿಯೋ ವೈರಲ್ ಆದ ಕೆಲವೇ ಗಂಟೆಯೊಳಗೆ ವಿಡಿಯೋವನ್ನ ಡಿಲೀಟ್ ಕೂಡ ಮಾಡಲಾಯ್ತು. ಸರ್ಬಿಯಾದ ಪಾಕ್ ರಾಯಭಾರಿ ಕಚೇರಿಯ ಟ್ವಿಟರ್ ಖಾತೆಯಲ್ಲೇ ಈ ಅಕೌಂಟ್ ಹ್ಯಾಕ್ ಮಾಡಲಾಗಿತ್ತು ಅಂತಾ ಸ್ಪಷ್ಟನೆಯನ್ನೂ ನೀಡಲಾಯ್ತು.

ಏನೇ ಹೇಳಿ, ಪಾಕ್ ರಾಯಭಾರಿ ಕಚೇರಿಯ ಈ ಒಂದು ವಿಡಿಯೋದಿಂದ ಪಾಕಿಸ್ತಾನ ಮತ್ತೊಮ್ಮೆ ಜಗತ್ತಿನ ಎದುರು ನಗೆಪಾಟಲಕ್ಕಿಡಾಗಿದೆ. ಪಾಕ್ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಕುಸಿದಿದೆ ಅಂತಾ ಜಗತ್ತಿನ ಎದುರು ಬಟಾಬಯಲಾಗಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಉಚಿತ ಶಿಕ್ಷಣ ವಿರುದ್ಧ ಇರುವವರು ದೇಶದ್ರೋಹಿಗಳು: ಅರವಿಂದ್‌ ಕೇಜ್ರಿವಾಲ್‌
ದೇಶ

ಉಚಿತ ಶಿಕ್ಷಣ ವಿರುದ್ಧ ಇರುವವರು ದೇಶದ್ರೋಹಿಗಳು: ಅರವಿಂದ್‌ ಕೇಜ್ರಿವಾಲ್‌

by ಪ್ರತಿಧ್ವನಿ
August 8, 2022
ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೧
ಅಭಿಮತ

ಅಗ್ನಿಪಥ್ ಯೋಜನೆಯು ಭಾರತೀಯ ಪ್ರಜಾಪ್ರಭುತ್ವದ ಶವಪೆಟ್ಟಿಗೆಗೆ ಹೊಡೆಯಲಿರುವ ಕೊನೆಯ ಮೊಳೆ? ಭಾಗ-೨

by ಡಾ | ಜೆ.ಎಸ್ ಪಾಟೀಲ
August 13, 2022
ದೆಹಲಿಯಲ್ಲಿ ಬೀಡು ಬಿಟ್ಟ ಮಹಾ ಸಿಎಂ – ಡಿಸಿಎಂ
ದೇಶ

ದೆಹಲಿಯಲ್ಲಿ ಬೀಡು ಬಿಟ್ಟ ಮಹಾ ಸಿಎಂ – ಡಿಸಿಎಂ

by ಪ್ರತಿಧ್ವನಿ
August 7, 2022
ಪರೇಶ್ ಮೆಸ್ತಾ ಕೊಲೆ ಆರೋಪಿಯನ್ನು ವಕ್ಫ್ ಬೋರ್ಡ್ ಹುದ್ದೆಗೆ ಆಯ್ಕೆ ಮಾಡಿದ್ದು ವಿರೋಧ ಪಕ್ಷದವರು : ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಕರ್ನಾಟಕ

ಪರೇಶ್ ಮೆಸ್ತಾ ಕೊಲೆ ಆರೋಪಿಯನ್ನು ವಕ್ಫ್ ಬೋರ್ಡ್ ಹುದ್ದೆಗೆ ಆಯ್ಕೆ ಮಾಡಿದ್ದು ವಿರೋಧ ಪಕ್ಷದವರು : ಸಚಿವ ಕೋಟಾ ಶ್ರೀನಿವಾಸ ಪೂಜಾರಿ

by ಪ್ರತಿಧ್ವನಿ
August 13, 2022
Uncategorized

Major Antivirus Courses

by ಶ್ರುತಿ ನೀರಾಯ
August 9, 2022
Next Post
ಉತ್ತರಪ್ರದೇಶದ ಲಕ್ನೋದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿದ ಯುವಕರ ಮೇಲೆ ಲಾಠಿ ಚಾರ್ಜ್ !

ಉತ್ತರಪ್ರದೇಶದ ಲಕ್ನೋದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಿದ ಯುವಕರ ಮೇಲೆ ಲಾಠಿ ಚಾರ್ಜ್ !

ನವೋದಯ ವಿದ್ಯಾಲಯದಲ್ಲಿ ಕೊರೋನಾ ಸ್ಫೋಟ-60 ಮಂದಿಗೆ ಪಾಸಿಟಿವ್ !

ನವೋದಯ ವಿದ್ಯಾಲಯದಲ್ಲಿ ಕೊರೋನಾ ಸ್ಫೋಟ-60 ಮಂದಿಗೆ ಪಾಸಿಟಿವ್ !

ಇಮ್ಮಡಿ ಪುಲಕೇಶಿ ಕೇಂದ್ರಿತ ʼಕನ್ನಡ ಹೆಮ್ಮೆʼಯ ಟ್ವಿಟರ್ ಅಭಿಯಾನ : ಶಿವಾಜಿ, ಟಿಪ್ಪು ಪ್ರಸ್ತಾಪಿಸಿ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿಗರು

ಇಮ್ಮಡಿ ಪುಲಕೇಶಿ ಕೇಂದ್ರಿತ ʼಕನ್ನಡ ಹೆಮ್ಮೆʼಯ ಟ್ವಿಟರ್ ಅಭಿಯಾನ : ಶಿವಾಜಿ, ಟಿಪ್ಪು ಪ್ರಸ್ತಾಪಿಸಿ ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿಗರು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist