ಇತ್ತೀಚೆಗಷ್ಟೇ ಪುನರಾರಂಭಗೊಂಡಿರುವ ಗುಜರಾತ್ನ ಮೋರ್ಬಿಯಲ್ಲಿರುವ ತೂಗು ಸೇತುವೆ ಕುಸಿದು ಬಿದ್ದಿದ್ದು ಕನಿಷ್ಟ 30 ಮಂದಿ ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಸೇತುವೆ ಕುಸಿಯುವಾಗ ಸೇತುವೆ ಮೇಲೆ ಸುಮಾರು 500 ಮಂದಿ ಇದ್ದರು ಎಂದು ಮಾಧ್ಯಮಗಳು ವರದಿ ಹೇಳಿದೆ.
ವರದಿಗಳ ಪ್ರಕಾರ, ತೂಗು ಸೇತುವೆ ಕುಸಿದಿದ್ದರಿಂದ, ಸುಮಾರು 100 ಜನರು ಇನ್ನೂ ನೀರಿನಲ್ಲಿ ಸಿಲುಕಿದ್ದಾರೆಂದು ಅಂದಾಜಿಸಲಾಗಿದೆ.
ಮೋರ್ಬಿ ತೂಗು ಸೇತುವೆಯು ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದು, ದುರಸ್ತಿ ಮತ್ತು ನವೀಕರಣದ ನಂತರ, ಕೇವಲ ನಾಲ್ಕು ದಿನಗಳ ಹಿಂದೆ, ಅಕ್ಟೋಬರ್ 26 ರಂದು ಗುಜರಾತಿ ಹೊಸ ವರ್ಷದ ಸಂದರ್ಭದಲ್ಲಿ ಪುನರಾರಂಭಿಸಲಾಗಿತ್ತು.
ಪ್ರಧಾನಿ ನರೇಂದ್ರ ಅವರು ತುರ್ತು ರಕ್ಷಣಾ ಕಾರ್ಯಾಚರಣೆಗೆ ಆದೇಶ ನೀಡಿದ್ದು, ಗಾಯಾಳುಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಅನೇಕ ಸ್ಥಳೀಯ ನಿವಾಸಿಗಳು ಸಹ ಸೇರಿಕೊಂಡಿದ್ದಾರೆ.