
ಬೀದರ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಜಟಾಪಟಿ ಜೋರಾಗಿದೆ.. ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಉಗ್ರ ಹೋರಾಟ ಮಾಡ್ತಿದೆ.. ಕಲಬುರಗಿ ಕಲಬುರಗಿಯ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ಬಿಜೆಪಿ ಪ್ರಯತ್ನಿಸಿದ್ದ.. ಕಲಬುರಗಿಯ ಜಗತ್ ಸರ್ಕಲ್‌ನಿಂದ ಬಿಜೆಪಿ ಪಾದಯಾತ್ರೆ ಮೂಲಕ ಹೋರಾಟ ಮಾಡಿದೆ.. ಸಾವಿರಾರು ಕಾರ್ಯಕರ್ತರೊಂದಿಗೆ ಪ್ರತಿಭಟನಾ ಮೆರವಣಿಗೆ ಮಾಡಿದ ಬಿಜೆಪಿ ನಾಯಕರು, ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ರು.. ಪ್ರಿಯಾಂಕ್ ಖರ್ಗೆ ಮನೆಗೆ ಮುತ್ತಿಗೆ ಹಿನ್ನೆಲೆ ಕಲಬುರಗಿ ಡಿಸಿ ಕಚೇರಿ ಎದುರು ಪೊಲೀಸರು ತಡೆದು ಬಿಜೆಪಿ ನಾಯಕರನ್ನು ವಶಕ್ಕೆ ಪಡೆದರು.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಕಾಂಗ್ರೆಸ್ ವಿಭಿನ್ನವಾಗಿ ಕೌಂಟರ್ ಮಾಡಿದೆ.. ಪ್ರಿಯಾಂಕ್ ಖರ್ಗೆ ಮನೆ ಮುತ್ತಿಗೆಗೆ ಬಂದ ಬಿಜೆಪಿ ನಾಯಕರಿಗೆ ಎಳೆನೀರು ಹಾಗೂ ಟೀ ವ್ಯವಸ್ಥೆ ಮಾಡಲಾಗಿತ್ತು.. ಈ ಮೊದಲೇ ಸುದ್ದಿಗೋಷ್ಠಿ ನಡೆಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, ಪ್ರತಿಭಟನೆಗೆ ಬಂದವರಿಗೆ ಟೀ ವ್ಯವಸ್ಥೆ ಮಾಡ್ತೇವೆ ಎಂದು ವ್ಯಂಗ್ಯವಾಡಿದ್ರು.. ಅದ್ರಂತೆ ಇಂದು ಪ್ರಿಯಾಂಕ್ ಖರ್ಗೆ ಬೆಂಬಲಿಗರು ಟೀ, ಎಳನೀರಿನ ವ್ಯವಸ್ಥೆ ಮಾಡಿದ್ದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುವ ವೇಳೆ ಕಲಬುರಗಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯದಲ್ಲಿ ಇರೋದು ಪರ್ಸಂಟೇಜ್ ಸರ್ಕಾರ. ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರ ಜಾಸ್ತಿ ಆಗಿದೆ. ಕಾಮಗಾರಿ ಅಕ್ರಮ, ಕಂಟ್ರಾಕ್ಟರ್ ಬಳಿ ಸುಲಿಗೆ ಮಾಡೋದು ಮನೆ ಮಾತಾಗಿದೆ. ಸಚಿನ್ ಇಡೀ ಕುಟುಂಬ ನೋವಿನಲ್ಲಿ ಇದ್ದು, ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ಹೀಗೆ ಮುಂದುವರಿದರೆ ಕರ್ನಾಟಕ ಬಿಹಾರ ತರ ಆಗಲಿದೆ ಎಂದಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಎಂಎಲ್ಸಿ ರವಿಕುಮಾರ್, ರಾಜೀನಾಮೆ ಕೊಡೋ ಪ್ರಶ್ನೆ ಇಲ್ಲ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆದರೆ ಅವರು ರಾಜೀನಾಮೆ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.. ಇನ್ನು ಅವ್ರ ಮನೆಗೆ ಎಳನೀರು ಕುಡಿಯೋಕೆ, ಕಾಫಿ ಕುಡಿಯೋಕೆ ಹೋಗ್ತಿಲ್ಲ ಅಂತ ಕೌಂಟರ್ ನೀಡಿದ್ರು.

ಕಾನೂನು ಕಾಂಗ್ರೆಸ್ನವರಿಗೂ ಒಂದೇ ಇರೋದು ಎಂದು ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಸಿ.ಟಿ.ರವಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಎಂಬ ಕಾರಣಕ್ಕೆ ನನಗೆ ಕಾನೂನು ಅನ್ವಯ ಆಗಲ್ಲ ಆಗಲ್ಲ. ಸಂವಿಧಾನವೂ ಅನ್ವಯ ಆಗಲ್ಲವೆಂದು ಅವರು ಭಾವಿಸಿರಬಹುದು. ಈಶ್ವರಪ್ಪನವರ ರಾಜೀನಾಮೆಯನ್ನ ಕೇಳಿ ಪಡೆದಿದ್ರಲ್ಲ, ಯಾವ ಸಾಕ್ಷಿ ಇತ್ತು..? ರಾಜ್ಯ ಸರ್ಕಾರ ಪ್ರಕರಣವನ್ನ ನ್ಯಾಯಯುತ ತನಿಖೆಗೆ ಸಿಬಿಐಗೆ ಕೊಡಲಿ ಅಂತ ಆಗ್ರಹಿಸಿದ್ದಾರೆ.