ರಾಜ್ಯ ಸರ್ಕಾರದ ಗ್ಯಾರಂಟಿ ಸ್ಕೀಮ್ ಗಳ (Guarantee schemes) ಅನುಷ್ಠಾನದ ಪರಿಣಾಮ ತೆಲಂಗಾಣ ಸರ್ಕಾರದ (Telangana government) ಆರ್ಥಿಕ ಸ್ಥಿತಿ (Financial crisis) ಈಗ ಉತ್ತಮವಾಗಿಲ್ಲ ಎಂದು ಖುದ್ದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth reddy) ವಿಧಾನಸಭೆಯಲ್ಲಿ ಸದನದ ಮುಂದೆ ಒಪ್ಪಿಕೊಂಡಿದ್ದಾರೆ.

ಈ ಗ್ಯಾರಂಟಿ ಸ್ಕೀಮ್ ಗಳಿಂದಾಗಿ ತೆಲಂಗಾಣ ಸರ್ಕಾರ ಹೆಚ್ಚಿನ ಹಣ ಖರ್ಚು ಮಾಡಬೇಕಾಗಿದೆ.ಹೀಗಾಗಿ ಪ್ರತಿ ತಿಂಗಳ ಮೊದಲನೇ ತಾರೀಖು ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸಾಧ್ಯವಾಗುತ್ತಿಲ್ಲ.ಈ ಗ್ಯಾರಂಟಿ ಸ್ಕೀಮ್ ಗಳ ಕಾರಣ ತೆಲಂಗಾಣ ಕಾಂಗ್ರೆಸ್ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸ್ವತಃ ಹೇಳಿದ್ದಾರೆ.

ಆ ಮೂಲಕ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದ ಬಳಿಕ ಈಗ ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ ಕೂಡ ಗ್ಯಾರಂಟಿ ಸ್ಟೀಮ್ ಗಳಿಂದ ಸಂಕಷ್ಟ ಎದುರಾಗಿದೆ. ಇತ್ತ ಕರ್ನಾಟಕಟದ ಭವಿಷ್ಯ ಏನಪ್ಪ ಅಂತ ಜನಸಾಮಾನ್ಯರು ಯೋಚನೆಯಲ್ಲಿದ್ದಾರೆ.