
ಇಡಿ ರಾಜ್ಯದ ಗಮನ ಸೆಳೆದಿರುವ ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ತನಿಖೆ ಸಾಕಷ್ಟು ಆಯಾಮದಲ್ಲಿ ನಡೆಯುತ್ತಿದೆ. ಈ ನಡುವೆ ರನ್ಯಾ ರಾವ್ ತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ವಿಚಾರಣೆ ಮಾಡಲಾಗಿದೆ. ಐಎಎಸ್ ಅಧಿಕಾರಿ ಗೌರವ್ ಗುಪ್ತ ನೇತೃತ್ವದ ಸಮಿತಿಯಿಂದ ವಿಚಾರಣೆ ನಡೆದಿದೆ, ಇಂದು ರಾಮಚಂದ್ರ ರಾವ್ ಹೇಳಿಕೆ ದಾಖಲಿಸಿದ್ದಾರೆ ಗೌರವ್ ಗುಪ್ತ ಅಂಡ್ ಟೀಂ. ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ತಂದೆ ರಾಮಚಂದ್ರ ರಾವ್ ಅವರ ಪಾತ್ರ ಇದೆಯಾ..? ಅನ್ನೋ ಬಗ್ಗೆ ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ನೀಡುವಂತೆ ಸರ್ಕಾರ ಸೂಚನೆ ಕೊಟ್ಟಿತ್ತು. ಇದೀಗ ಗೌರವ್ ಗುಪ್ತಾ ನೇತೃತ್ವದ ತಂಡ ರಾಮಚಂದ್ರ ರಾವ್ ಅವರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.
ನಟಿ ರನ್ಯಾ ರಾವ್ ಬಂಧನದ ಬಳಿಕ ರಜೆ ಮೇಲೆ ಕಳುಹಿಸಲಾಗಿದೆ. ರಾಮಚಂದ್ರ ರಾವ್ ಹಿರಿಯ ಪೊಲೀಸ್ ಅಧಿಕಾರಿ ಆಗಿದ್ದು ಮಗಳ ದುಷ್ಕೃತ್ಯಕ್ಕೆ ಸಾಥ್ ಕೊಟ್ಟಿರುವ ಅನುಮಾನದ ಮೇಲೆ ರಜೆ ಮೇಲೆ ಕಳುಹಿಸಿದ್ದು, ಇದೀಗ ವಿಚಾರಣೆ ಮಾಡಲಾಗಿದೆ. ಶಕ್ತಿ ಭವನದಲ್ಲಿ ಹಿರಿಯ ಐಪಿಎಸ್ ಅಧಿಕಾರಿಯ ತೀವ್ರ ವಿಚಾರಣೆ ಮಾಡಿದ್ದು, ಸಾಕಷ್ಟು ಆಯಾಮದಲ್ಲಿ ಹೇಳಿಕೆ ಪಡೆದುಕೊಳ್ಳಲಾಗಿದೆ.

ಡಿಜಿಪಿ ರಾಮಚಂದ್ರ ರಾವ್ ಅವರನ್ನ ತೀವ್ರ ವಿಚಾರಣೆ ನಡೆಸಿರುವ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಹಾಗೂ ಡಿಐಜಿ ವಂಶಿಕೃಷ್ಣ ನೇತೃತ್ವದಲ್ಲಿ ತಂಡ, ಪ್ರೊಟೊಕಾಲ್ ಸಂಬಂಧ ರಾಮಚಂದ್ರ ರಾವ್ ಅವರ ಬಳಿ ಸ್ಪಷ್ಟನೆ ಪಡೆಯಲಾಗಿದೆ. ನಟಿ ರನ್ಯ ರಾವ್ ಪ್ರೋಟೋಕಾಲ್ ಬಳಸಿಕೊಂಡು ಏರ್ಪೋರ್ಟ್ನಿಂದ ಹೊರಕ್ಕೆ ಬರಲು ನೀವು ಸಾಥ್ ಕೊಟ್ಟಿದ್ರಾ..? ಏರ್ಪೋರ್ಟ್ ಸಿಬ್ಬಂದಿ ಜೊತೆಗೆ ಮಾತನಾಡಿದ್ರಾ..? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಮಾಹಿತಿ ಕಲೆ ಹಾಕಿದ್ದಾರೆ.







