ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ (America) ಎನ್ಆರ್ಐ ಗಳ (NRI) ಆತಂಕ ಮುಂದುವರೆದಿದೆ. ಯುಎಸ್ ನಲ್ಲಿ ಹಿರಿಯ ನಾಗರಿಕರಿಗೆ ಗ್ರೀನ್ ಕಾರ್ಡ್ (Green card) ತ್ಯಜಿಸಲು ಒತ್ತಾಯ ಮಾಡಲಾಗಿದ್ದು, ಭಾರತ ಮೂಲದ ಹಿರಿಯ ನಾಗರಿಕರಿಗೆ (Senior citizens) ಗ್ರೀನ್ ಕಾರ್ಡ್ ತ್ಯಜಿಸಿವಂತೆ ಒತ್ತಾಯ ಹೇರಲಾಗಿದೆ.

ಈ ಪ್ರಕಾರ 180 ದಿನಕ್ಕಿಂತ ಹೆಚ್ಚಿನ ದಿನ ಅಮೆರಿಕಾದಿಂದ ಹೊರಗಿದ್ದರೆ ಅಂಥವರ ಗ್ರೀನ್ ಕಾರ್ಡ್ ಗೆ ಕಂಟಕ ಎದುರಾಗಲಿದೆ. 180 ದಿನ ಆಮೆರಿಕಾದಿಂದ ಹೊರಗೆ ಇದ್ದರೇ, ಗ್ರೀನ್ ಕಾರ್ಡ್ ರದ್ದುಪಡಿಸಲು ಅವಕಾಶಗಳಿದೆ. ಹೀಗಾಗಿ ಆಮೆರಿಕಾದ ಕಸ್ಟಮ್ ಅಂಡ್ ಬಾರ್ಡರ್ ಪ್ರೊಟೆಕ್ಷನ್ ಅಧಿಕಾರಿಗಳಿಂದ ಒತ್ತಾಯ ಹೇರಲಾಗಿದ್ದು 6 ತಿಂಗಳಿಗಿಂತ ಹೆಚ್ಚು ಕಾಲ ಅಮೆರಿಕಾದಿಂದ ಹೊರಗೆ ಇದ್ದು ಬಂದರೇ ಆ ವೇಳೆ ರೀ ಎಂಟ್ರಿಗೆ ಪರ್ಮಿಟ್ ಪಡೆಯಬೇಕು.
ಈ ನಿಯಮ ಬಳಸಿಕೊಂಡು ಗ್ರೀನ್ ಕಾರ್ಡ್ ತ್ಯಜಿಸಲು ಹಿರಿಯ ನಾಗರಿಕರಿಗೆ ಒತ್ತಾಯ ಮಾಡಲಾಗಿದ್ದು ಹೀಗೆ ಅಮೆರಿಕಾದಿಂದ ದೀರ್ಘಕಾಲ ಹೊರಗಿದ್ದವರ ಗ್ರೀನ್ ಕಾರ್ಡ್ ರದ್ದುಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಜೊತೆಗೆ ಹಳೆಯ,ಸಣ್ಣ ಅಪರಾಧಕ್ಕೂ ಗ್ರೀನ್ ಕಾರ್ಡ್ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಇಲ್ಲುಳಿದಂತೆ ಆಮೆರಿಕಾದಲ್ಲಿ ಉದ್ಯೋಗ, ಬ್ಯುಸಿನೆಸ್ ಮಾಡದೇ ಹಾಗೆ ನೆಲೆಸಿದ್ದಲ್ಲಿ ಆಗಲೂ ಗ್ರೀನ್ ಕಾರ್ಡ್ ರದ್ದು ಕ್ರಮಕ್ಕೆ ಮುಂದಾಗಲಿದ್ದಾರೆ. ಹೀಗೆ ಭಾರತ ಮೂಲದ ಹಿರಿಯ ನಾಗರಿಕರನ್ನು ಟಾರ್ಗೆಟ್ ಮಾಡಿದ ಕಸ್ಟಮ್ ಅಂಡ್ ಬಾರ್ಡರ್ ಪ್ರೊಟೆಕ್ಷನ್ ಅಧಿಕಾರಿಗಳು ತೀವ್ರ ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.