
ಮೊಘಲ್ ದೊರೆ ಔರಂಗಜೇಬ್ (Aurangazeb) ಸಮಾಧಿಗೆ ಬಾಬ್ರಿ ಮಸೀದಿಯ (Babri masjid) ಸ್ಥಿತಿ ಬರುತ್ತೆ ಎಂದು ಭಜರಂಗದಳದ ಮುಖಂಡ ನಿತಿನ್ ಮಹಾಜನ್ (Nithin mahajan) ಸ್ಫೋಟಕ ಹೇಳಿಕೆ ನೀಡಿದ್ದಾರೆ.ಈಗಾಗಲೇ ಮಹಾರಾಷ್ಟ್ರದ ಹಲವೆಡೆ ಔರಂಗಜೇಬ್ ಸಮಾಧಿ ಕೆಡವುವಂತೆ ಪ್ರತಿಭಟನೆಗಳು ಜೋರಾಗಿವೆ.ಈ ಹಿನ್ನಲೆಯಲ್ಲಿ ಔರಂಗಜೇಬ್ ಸಮಾಧಿಗೆ ಮಹಾರಾಷ್ಟ್ರದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮತ್ತೊಂದೆಡೆ ಔರಂಗಜೇಬ್ ನ ಕಟೌಟ್, ಬ್ಯಾನರ್ ಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬ್ ಸಮಾಧಿ ಔರಂಗಜೇಬ್ ಸಮಾಧಿಯನ್ನು ಕಿತ್ತು ಹಾಕಬೇಕು ಎಂದು ಹಿಂದೂ ಸಂಘಟನೆಗಳ ಒತ್ತಾಯ ಮಾಡಿದ್ದು ಸಮಾಧಿ ಸ್ಥಳವನ್ನು ಧ್ವಂಸ ಮಾಡಬೇಕು ಎಂದು ಹಿಂದೂ ಸಂಘಟನೆಗಳ ಒತ್ತಾಯ ಮಾಡಿದೆ.

ಕ್ರೂರಿ ಔರಂಗಜೇಬ್ ಲಕ್ಷಾಂತರ ಹಿಂದೂಗಳನ್ನು ಹತ್ಯೆ ಮಾಡಿದ್ದಾನೆ.ಹಿಂದೂಗಳನ್ನು ಔರಂಗಜೇಬ್ ಕಟುವಾಗಿ ದ್ವೇಷಿಸುತ್ತಿದ್ದ.ಹೀಗಾಗಿ ಸರ್ಕಾರವೇ ಔರಂಗಜೇಬ್ ಸಮಾಧಿಯನ್ನು ಧ್ವಂಸ ಮಾಡಬೇಕೆಂದು ವಿಎಚ್‌ಪಿ ಆಗ್ರಹ ಮಾಡಿದೆ.ಮತ್ತೊಂದೆಡೆ ಶಿವಸೇನೆ ಏಕನಾಥ್ ಶಿಂಧೆ ಬಣದಿಂದಲೂ ಸಮಾಧಿ ಧ್ವಂಸಕ್ಕೆ ಆಗ್ರಹ ಕೇಳಿಬಂದಿದೆ.