ಸ್ಯಾಂಡಲ್ವುಡ್ ನಟ ರಾಕಿಂಗ್ ಸ್ಟಾರ್ ಯಶ್ಗೆ ಏಪ್ರಿಲ್ 14, ಅಂದರೆ ಇವತ್ತು ಬಹಳ ವಿಶೇಷವಾದ ದಿನ. ಇಡೀ ಭಾರತೀಯ ಚಿತ್ರರಂಗ ಎದುರು ನೋಡ್ತಿದ್ದ ದಿನ. ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ವಿಶ್ವದಾದ್ಯಂತ ಹಾರಿದ ದಿನ. ಹೌದು.. ರಾಕಿಂಗ್ ಸ್ಟಾರ್ ಯಶ್ ನಟನೆ ಬಹುನಿರೀಕ್ಷಿತ ʻಕೆಜಿಎಫ್ ಚಾಪ್ಟರ್ 2ʼ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷ.

ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಿದ ಆ ದಿನವನ್ನ ಯಾರೂ ಮರೆಯೋಕೆ ಸಾಧ್ಯವಿಲ್ಲ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ʻಕೆಜಿಎಫ್ ಚಾಪ್ಟರ್ 2ʼ ಸಿನಿಮಾ 2022ರ ಏಪ್ರಿಲ್ 14ರಂದು ವರ್ಲ್ಡ್ವೈಡ್ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿತ್ತು. ವಿಶ್ವದಾದ್ಯಂತ ಸಿನಿಪ್ರೇಕ್ಷಕರಿಂದ ಕೆಜಿಎಫ್ 2 ಚಿತ್ರಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು.

ಟಾಲಿವುಡ್, ಕಾಲಿವುಡ್, ಮಾಲಿವುಡ್, ಬಾಲಿವುಡ್ಗಳಲ್ಲೂ ಕೆಜಿಎಫ್ 2 ಚಿತ್ರದ ಹವಾ ಜೋರಾಗಿತ್ತು. ರಾಕಿಭಾಯ್ ಅಬ್ಬರಕ್ಕೆ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ರು.. ಸೆಲೆಬ್ರಿಟಿಗಳು ಕೂಡ ಯಶ್ ನಟನೆಗೆ ಫಿದಾ ಆಗಿದ್ರು. ಈ ಮೂಲಕ ಸ್ಯಾಂಡಲ್ವುಡ್ಗಷ್ಟೇ ಸೀಮಿತರಾಗಿದ್ದ ನಟ ಯಶ್, ಪ್ಯಾನ್ ಇಂಡಿಯಾ ಸ್ಟಾರ್ ಆದ್ರು.. ಸಿನಿಮಾ ಬಿಡುಗಡೆಯಾದ ಒಂದೇ ದಿನಕ್ಕೆ ವಿಶ್ವದಾದ್ಯಂತ ಬಾಕ್ಸ್ಆಫೀಸ್ನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿತ್ತು.

ಸಿನಿಮಾ ಮಾಡಿದ್ರೆ ಹೀಗೆ ಮಾಡ್ಬೇಕು ಅಂತ ಬೇರೆ ಭಾಷೆಯ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಶಹಬ್ಬಾಸ್ಗಿರಿ ಕೊಟ್ಟರು.. ಕನ್ನಡ ಚಿತ್ರರಂಗವನ್ನ ನೆಕ್ಸ್ಟ್ ಲೆವೆಲ್ಗೆ ತೆಗೆದುಕೊಂಡು ಹೋದ ಸಿನಿಮಾ ʻಕೆಜಿಎಫ್ ಚಾಪ್ಟರ್ 2ʼ. ಅಂದಿನಿಂದ ಸ್ಯಾಂಡಲ್ವುಡ್ನ್ನ ಬೇರೆ ಚಿತ್ರರಂಗದವರು ನೋಡುವ ರೀತಿಯೇ ಬದಲಾಯ್ತು. ಕೆಜಿಎಫ್ 2 ಸಿನಿಮಾ ಇಂದಿಗೂ ಹವಾ ಮೇಂಟೇನ್ ಮಾಡ್ಕೊಂಡು ಬಂದಿದೆ. ಇದೀಗ ಯಶ್ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.