ನವದೆಹಲಿ: ಭಾರತದಲ್ಲಿ ಜನಪ್ರಿಯವಾಗಿರುವ ಕೆಲವು ಮದ್ಯ ಬ್ರ್ಯಾಂಡ್‌ಗಳ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಕಠಿಣ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಸದ್ಯದ ಮಾಹಿತಿಯ ಪ್ರಕಾರ, ಓಲ್ಡ್ ಮಾಂಕ್ ರಮ್, ಆಂಟಿಕ್ವಿಟಿ ಬ್ಲೂ, ರಾಯಲ್ ಚಾಲೆಂಜ್ ಹಾಗೂ ಬ್ಯಾಗ್‌ಪೈಪರ್ ಡಿಲಕ್ಸ್ ಸೇರಿದಂತೆ ಕೆಲವು ಬ್ರ್ಯಾಂಡ್‌ಗಳಲ್ಲಿ ಕೃತಕ ಫ್ಲೇವರ್ ಬಳಸುತ್ತಿರುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪತ್ತೆ ಹಚ್ಚಿದ್ದು, ಗಂಭೀರ ನಿಯಮಗಳ ಉಲ್ಲಂಘನೆ ಮಾಡಿರುವ ಬ್ರ್ಯಾಂಡ್‌ಗಳನ್ನು ಎಫ್‌ಎಸ್‌ಎಸ್‌ಎಐ ಬ್ಯಾನ್ ಮಾಡಿದೆ ಎಂದು ವರದಿಯಾಗಿದೆ.

ಸಾಮಾನ್ಯವಾಗಿ ರಮ್ ಮತ್ತು ವಿಸ್ಕಿಯನ್ನು ಕಬ್ಬಿನ ಬೆಲ್ಲದ ರಸ, ಮಾಲ್ಟ್ ಅಥವಾ ಇತರ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ನಂತರ ನಿರ್ದಿಷ್ಟ ಅವಧಿಯವರೆಗೆ ಸಂಗ್ರಹಿಸಿ ಅದರ ರುಚಿ ಮತ್ತು ಸುವಾಸನೆ ಅಭಿವೃದ್ಧಿಪಡಿಸಲಾಗುತ್ತದೆ. ಆದರೆ ಕೆಲವು ಉತ್ಪನ್ನಗಳಲ್ಲಿ ನ್ಯೂಟ್ರಲ್ ಅಲ್ಕೋಹಾಲ್‌ಗೆ ಕೃತಕ ಫ್ಲೇವರ್ ಸೇರಿಸಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಇದರ ಜೊತೆಗೆ, ಫ್ಲೇವರ್ ಬಳಸಿದ್ದರೂ ಲೇಬಲ್‌ನಲ್ಲಿ ಅದನ್ನು ಸ್ಪಷ್ಟವಾಗಿ ಉಲ್ಲೇಖಿಸದಿರುವುದು ಹಾಗೂ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿರುವ ಆರೋಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕೆಲವು ಮದ್ಯದ ಬ್ರ್ಯಾಂಡ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ಬೆಳವಣಿಗೆ ಮದ್ಯ ಉದ್ಯಮದಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಂಬಂಧಿತ ಕಂಪನಿಗಳಿಂದ ಅಧಿಕೃತ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ.







