ಜನವರಿ 31ರವರೆಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಅವರನ್ನು ರಾಜ್ಯ ಸರ್ಕಾರ ಮರುನೇಮಕಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಕೆಲ ದಿನಗಳಿಂದ ಜಾತಿ ಗಣತಿ ವರದಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಎರಡು ತಿಂಗಳ ಅವಧಿಗೆ (2024 ಜನವರಿ 31ರವರೆಗೆ) ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಜಯಪ್ರಕಾಶ್ ಹೆಗ್ಡೆ ಅವರನ್ನು ಮರುನೇಮಕಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
ವಿಸ್ತರಣೆಗೆ ಅವಕಾಶವಿಲ್ಲದ ಕಾರಣ ಹಾಲಿ ಅಧ್ಯಕ್ಷರನ್ನೇ ಮರುನೇಮಕ ಮಾಡಲಾಗಿದೆ. ಇವರ ಜೊತೆಗೆ ಐವರು ಸದಸ್ಯರನ್ನು ಮರು ನೇಮಕ ಮಾಡಲಾಗಿದೆ. ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರಾವಧಿ ನವೆಂಬರ್ 26ಕ್ಕೆ ಅಂತ್ಯವಾಗುತ್ತಿತ್ತು. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಣಯ ಕೈಗೊಳ್ಳಲಾಗಿದೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮತ್ತು ಸದಸ್ಯರ ಅವಧಿಯು 2023ರ ನವೆಂಬರ್ 26ರಂದು ಮುಕ್ತಾಯಗೊಳ್ಳಲಿದೆ. ಪ್ರಸ್ತುತ ಆಯೋಗವು 2015ರ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿದೆ. ಈ ವರದಿಯನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಲು ಕಾಲಾವಕಾಶ ಬೇಕಿದ್ದು, ಪ್ರಸ್ತುತ ಆಯೋಗವನ್ನು ಮುಂದುವರಿಸಬೇಕು ಎಂದು ಕೋರಿದ್ದರು ಎಂದು ಹೇಳಲಾಗಿದೆ.
![](https://pratidhvani.com/wp-content/uploads/2023/11/bvdvv_363x203xt.jpg)
ಜಾತಿಗಣತಿ ವರದಿ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿದ್ದು, ಕಾಂತರಾಜು ವರದಿ ಹೆಸರು ಮರುನಾಮಕರಣ ಮಾಡಿ, ಡಾ.ಜಯಪ್ರಕಾಶ್ ಹೆಗ್ಡೆ ವರದಿ ಅಂತಾ ಬದಲಾಯಿಸಲಾಗಿದೆ.
ಮೂಲ ಪ್ರತಿ ಅಂದರೆ ದತ್ತಾಂಶ ಅಲ್ಲ. ದತ್ತಾಂಶ ಎಲ್ಲವೂ ಸುರಕ್ಷಿತವಾಗಿದೆ. ಇಂದಿನ ಸದಸ್ಯರು, ಅಧ್ಯಕ್ಷರು ಹಾಗೂ ಸೆಕ್ರೆಟರಿ ಸಹಿ ಇರುವ ದತ್ತಾಂಶ, ಹಾರ್ಡ್ ಕಾಪಿ ಮತ್ತು ಪ್ರಿಂಟೆಡ್ ಕಾಪಿಯೂ ಇದೆ. ಕಾಂತರಾಜು ವರದಿಯ ಮೂಲ ಪ್ರತಿಯ ಕೆಲ ವರ್ಕ್ಶೀಟ್ಗಳು ಸಿಗುತ್ತಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದರು.